Homeಮುಖಪುಟಆಸ್ಕರ್ 2020: ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕ, ಅವರ ಪ್ಯಾರಸೈಟ್ ಅತ್ಯುತ್ತಮ ಚಲನಚಿತ್ರ 

ಆಸ್ಕರ್ 2020: ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕ, ಅವರ ಪ್ಯಾರಸೈಟ್ ಅತ್ಯುತ್ತಮ ಚಲನಚಿತ್ರ 

ಜೋಕರ್‌ ಚಿತ್ರದ ಜೊವಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ, ಜೂಡಿ ಚಿತ್ರದ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ, ಒನ್ಸ್ ಅಪಾನ್ ಎ ಟೈಮ್‌ ಇನ್‌ ಹಾಲಿವುಡ್‌ ಚಿತ್ರದ ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ, ಮತ್ತು ಮ್ಯಾರೇಜ್‌ ಸ್ಟೋರಿ ಚಿತ್ರದ ಲಾರಾ ಡರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

- Advertisement -
- Advertisement -

92ನೇ ಆಸ್ಕರ್ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕರಲ್ಲದೆ, ಅವರ ಪ್ಯಾರಸೈಟ್ ಚಿತ್ರವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ಮತ್ತು ಅತ್ಯುತ್ತಮ ಚಿತ್ರಕಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ಯಾರಸೈಟ್ ಚಿತ್ರದ ಟ್ರೇಲರ್‌ ನೋಡಿ

ಇನ್ನು ಜೋಕರ್‌ ಚಿತ್ರದ ಜೊವಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ, ಜೂಡಿ ಚಿತ್ರದ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ, ಒನ್ಸ್ ಅಪಾನ್ ಎ ಟೈಮ್‌ ಇನ್‌ ಹಾಲಿವುಡ್‌ ಚಿತ್ರದ ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ, ಮತ್ತು ಮ್ಯಾರೇಜ್‌ ಸ್ಟೋರಿ ಚಿತ್ರದ ಲಾರಾ ಡರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಜೊವಾಕ್ವಿನ್ ಫೀನಿಕ್ಸ್ ಮತ್ತು ರೆನೀ ಜೆಲ್ವೆಗರ್

ಲಾಸ್ ಏಂಜಲಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 92ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಆಸ್ಕರ್ ಪ್ರಶಸ್ತಿಗೆ ಈ ಮೊದಲು ಭಾರತದಿಂದ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಸಿನಿಮಾ ಆಯ್ಕೆ ಆಗಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಅದು ವಿಫಲವಾಗಿದೆ.

ಇನ್ನುಳಿದಂತೆ ಹಲವು ಪ್ರಶಸ್ತಿಗಳ ವಿವರಗಳು ಕೆಳಗಿನಂತಿವೆ.

ಅತ್ಯುತ್ತಮ ಡಾಕ್ಯುಮೆಂಟರಿ: ‘ಅಮೇರಿಕನ್ ಫ್ಯಾಕ್ಟರಿ’
ಅತ್ಯುತ್ತಮ ಚಿತ್ರ: ‘ಪ್ಯಾರಸೈಟ್’
ಅತ್ಯುತ್ತಮ ನಿರ್ದೇಶಕ: ಬಾಂಗ್ ಜೂನ್ (ಪ್ಯಾರಸೈಟ್ ಸಿನಿಮಾ)
ಅತ್ಯತ್ತಮ ವಿಎಫ್ಎಕ್ಸ್: 1917
ಅತ್ಯುತ್ತಮ ಎಡಿಟಿಂಗ್: ಫೋರ್ಡ್ vs ಫೆರಾರಿ

ಅತ್ಯುತ್ತಮ ಕಿರುಚಿತ್ರ: ಹೇರ್‌ ಲವ್‌
ಅತ್ಯುತ್ತಮ ಪೋಷಕ ನಟಿ: ಲೌರಾ ಡೆರ್ನ್, (ಮ್ಯಾರೇಜ್ ಸ್ಟೋರಿ ಸಿನಿಮಾ)

ಆನಿಮೇಟೇಡ್‌ ಸಿನಿಮಾ: ಟಾಯ್‌ ಸ್ಟೋರಿ4

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ವಿರುದ್ಧದ ದೂರುಗಳ ಪರಿಶೀಲನೆ ಆರಂಭಿಸಿದ ಚುನಾವಣಾ ಆಯೋಗ

0
ಪ್ರತಿಪಕ್ಷಗಳು ಮತ್ತು ದೇಶದ ಜನರ ಒತ್ತಡದ ಹೆಚ್ಚಾದ ನಂತರ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿದ ದ್ವೇಷ ಭಾಷಣದ...