‘ನಮ್ಮ ದೇಶ ಮಾರಾಟಕ್ಕಿಲ್ಲ’: ಟ್ರಂಪ್‌ ಸಂಚಿನ ವಿರುದ್ಧ ಬೀದಿಗಿಳಿದ ಗ್ರೀನ್‌ಲ್ಯಾಂಡ್‌ ಜನತೆ, ಬೃಹತ್ ಪ್ರತಿಭಟನೆ

ಖನಿಜ ಸಮೃದ್ದ ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಿನ ವಿರುದ್ದ ಅಲ್ಲಿನ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ (ಜ.17) ಗ್ರೀನ್‌ಲ್ಯಾಂಡ್‌ ರಾಜಧಾನಿ ನೂಕ್‌ನಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಬೀದಿಗಳಿದ ಸಾವಿರಾರು ಜನರು, ‘ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ” ಎಂಬ ಘೋಷಣೆಗಳನ್ನು ಕೂಗುವ ಮೂಲಕ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದು ಗ್ರೀನ್‌ಲ್ಯಾಂಡ್ ಇತಿಹಾಸದಲ್ಲೇ ನಡೆದ ಅತಿದೊಡ್ಡ ಪ್ರತಿಭಟನೆ ಎಂದು ಹೇಳಲಾಗುತ್ತಿದೆ. ಗ್ರೀನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಜೆನ್ಸ್-ಫ್ರೆಡೆರಿಕ್ ನೀಲ್ಸನ್ ಅವರೇ ಸ್ವತಃ ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ತಮ್ಮ ದೇಶದ … Continue reading ‘ನಮ್ಮ ದೇಶ ಮಾರಾಟಕ್ಕಿಲ್ಲ’: ಟ್ರಂಪ್‌ ಸಂಚಿನ ವಿರುದ್ಧ ಬೀದಿಗಿಳಿದ ಗ್ರೀನ್‌ಲ್ಯಾಂಡ್‌ ಜನತೆ, ಬೃಹತ್ ಪ್ರತಿಭಟನೆ