‘ನಮ್ಮ ಭೂಮಿ ಮಾರಾಟಕ್ಕಿಲ್ಲ’ : ಬ್ರೆಝಿಲ್ ಹವಾಮಾನ ಶೃಂಗಸಭೆಗೆ ನುಗ್ಗಿ ಸ್ಥಳೀಯ ಬುಡಕಟ್ಟು ಜನರಿಂದ ಪ್ರತಿಭಟನೆ

ಬ್ರೆಝಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ 30ನೇ ಹವಾಮಾನ ಶೃಂಗಸಭೆಯಲ್ಲಿ (COP30) ಸ್ಥಳೀಯ ಬುಡಕಟ್ಟು ಸಮುದಾಯಗಳು ಜನರು ಶುಕ್ರವಾರ (ನವೆಂಬರ್ 14) ಎರಡನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಶೃಂಗಸಭೆ ನಡೆಯುತ್ತಿರುವ ಜಾಗದ ಪ್ರವೇಶದ್ವಾರದಲ್ಲಿ ನೂರಾರು ಜನರು ಜಮಾಯಿಸಿ ಅಮೆಜಾನ್‌ನಲ್ಲಿನ ತಮ್ಮ ದುಃಸ್ಥಿತಿಯ ಬಗ್ಗೆ ಜಗತ್ತು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ. ಶೃಂಗಸಭೆಗೆ ಹತ್ತಾರು ಸಾವಿರ ಪ್ರತಿನಿಧಿಗಳು ಆಗಮಿಸುತ್ತಿದ್ದಂತೆ, ಸಾಂಪ್ರದಾಯಿಕ ಉಡುಪುಗಳು ಮತ್ತು ಶಿರಸ್ತ್ರಾಣಗಳನ್ನು ಧರಿಸಿದ ಸುಮಾರು 60 ಪುರುಷರು ಮತ್ತು ಮಹಿಳೆಯರು, ಕೆಲವರು ಮಕ್ಕಳನ್ನು ಹೊತ್ತುಕೊಂಡು ಮುಖ್ಯ ದ್ವಾರದಲ್ಲಿ ಮಾನವ ಬ್ಯಾರಿಕೇಡ್ … Continue reading ‘ನಮ್ಮ ಭೂಮಿ ಮಾರಾಟಕ್ಕಿಲ್ಲ’ : ಬ್ರೆಝಿಲ್ ಹವಾಮಾನ ಶೃಂಗಸಭೆಗೆ ನುಗ್ಗಿ ಸ್ಥಳೀಯ ಬುಡಕಟ್ಟು ಜನರಿಂದ ಪ್ರತಿಭಟನೆ