Homeಕರ್ನಾಟಕ‘ಇದೊಂತರ ಎಗ್‌ರೈಸ್‌ ಸರ್ಕಾರ!’: #ನುಂಗಬೇಡಿಮಕ್ಕಳಮೊಟ್ಟೆ ಟ್ವಿಟರ್‌ ಟ್ರೆಂಡ್‌

‘ಇದೊಂತರ ಎಗ್‌ರೈಸ್‌ ಸರ್ಕಾರ!’: #ನುಂಗಬೇಡಿಮಕ್ಕಳಮೊಟ್ಟೆ ಟ್ವಿಟರ್‌ ಟ್ರೆಂಡ್‌

ಸಚಿವೆ ಶಶಿಕಲಾ ಜೊಲ್ಲೆ ವಿರುದ್ದದ ಆಕ್ರೋಶ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ

- Advertisement -
- Advertisement -

ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮಾತೃಪೂರ್ಣ ಯೋಜನೆಯ ಮೊಟ್ಟೆ ಖರೀದಿಯ ಟೆಂಡರ್ ನೀಡಲು ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಲಂಚ ಪಡೆದಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಶುಕ್ರವಾರ ಆರೋಪಿಸಿತ್ತು. ಇದನ್ನು ವಿರೋಧಿಸಿ ಭಾನುವಾರ(ಇಂದು) ಟ್ವಿಟರ್‌ನಲ್ಲಿ ‘#ನುಂಗಬೇಡಿಮಕ್ಕಳಮೊಟ್ಟೆ’ ಎಂಬ ಹ್ಯಾಶ್‌ಟ್ಯಾಗ್‌ ಚಳುವಳಿ ನಡೆಯುತ್ತಿದ್ದು, ಹಲವಾರು ಜನರು ಸಚಿವೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹಿನಿ ನ್ಯೂಸ್‌ ಫಸ್ಟ್ ಮಾಡಿದ ವರದಿಯಲ್ಲಿ, “ಈ ಮುಂಚೆ ನೇರವಾಗಿ ಅಂಗನವಾಡಿ ಕೇಂದ್ರಗಳು ಮೊಟ್ಟೆ ಖರೀದಿ ಮಾಡುತ್ತಿದ್ದವು. ಆದರೆ ಈಗ ಕೇಂದ್ರೀಕೃತವಾಗಿ ಮೊಟ್ಟೆ ಪೂರೈಕೆಗೆ ಟೆಂಡರ್ ಕರೆದಿದ್ದೇವೆ. ನಿಮಗೆ ಟೆಂಡರ್ ಸಿಗುವಂತೆ ಮಾಡುತ್ತೇವೆ” ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅದೇ ರೀತಿಯಲ್ಲಿ ಸಚಿವೆಯ ಸಂಪರ್ಕ ಕೊಟ್ಟ ಶಾಸಕ ಪರಣ್ಣ ಮುನವಳ್ಳಿ “ಟೆಂಡರ್ ನಿಮಗೆ ಆಗಬೇಕಾದರೆ ಪ್ರತಿ ತಿಂಗಳು ಸಚಿವರಿಗೆ ಒಂದು ಕೋಟಿ ಮತ್ತು ತನಗೆ 30 ಲಕ್ಷ ಹಣ ನೀಡಬೇಕು” ಎಂದು ಬೇಡಿಕೆಯಿಟ್ಟಿರುವುದು ಸಹ ರಹಸ್ಯ ಕಾರ್ಯಾಚರಣೆಯಲ್ಲಿ ದಾಖಲಾಗಿತ್ತು.

ಇದನ್ನೂ ಓದಿ: ಮೊಟ್ಟೆ ಖರೀದಿ ಟೆಂಡರ್ ಹಗರಣ: ಸಚಿವೆ ಶಶಿಕಲಾ ಜೊಲ್ಲೆ ನಿವಾಸಕ್ಕೆ ಮೊಟ್ಟೆ ಎಸೆದು ಪ್ರತಿಭಟನೆ

ಟೆಂಡರ್‌ಗಾಗಿ ಸಚಿವೆಯ ಸೂಚನೆಯಂತೆ ಚಿಕ್ಕೋಡಿಯ ಸಂಜಯ್ ಅರಗಿ ಎಂಬುವವರು 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ನ್ಯೂಸ್‌ಫಸ್ಟ್ ತಂಡ ತಿಳಿಸಿದೆ. ಪಾರದರ್ಶಕವಾಗಿ ಮತ್ತು ಪಕ್ಷಪಾತರಹಿತವಾಗಿ ಟೆಂಡರ್ ನಡೆಸಬೇಕಾದ ಸಚಿವರು, ಲಂಚ ಪಡೆದು ಅಕ್ರಮವಾಗಿ ಟೆಂಟರ್ ಕೊಡಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಮಕ್ಕಳಿಗೆ, ಗರ್ಭಿಣಿಯರಿಗೆ ತಲುಪಬೇಕಾದ ಹಣದ ವ್ಯವಸ್ಥಿತ ಲೂಟಿಯಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ವಿರೋಧಿಸಿ ಟ್ವಿಟರ್‌‌ನಲ್ಲಿ ಹ್ಯಾಶ್‌ಟ್ಯಾಗ್ ಚಳುವಳಿ ನಡೆಯುತ್ತಿದ್ದು, ಖ್ಯಾತ ನಟ ಚೇತನ್ ಅಹಿಂಸಾ ಸೇರಿದಂತೆ ಹಲವಾರು ಜನರು ಸಚಿವೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಚೇತನ್‌ ಅವರು, “ಮಕ್ಕಳ ಮೂಲಭೂತ ಆಹಾರ ಮತ್ತು ಪೋಷಣೆಯನ್ನು ಕಸಿದುಕೊಳ್ಳುವ ಭ್ರಷ್ಟಾಚಾರವು ಸಹಿಸಲು ಅಸಾಧ್ಯವಾದುದಾಗಿದೆ. ಇದರ ವಿರುದ್ದ ಸಂಪೂರ್ಣ ತನಿಖೆ ನಡೆದು, ಅವರನ್ನು ಕಡ್ಡಾಯವಾಗಿ ಶಿಕ್ಷಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಸಚಿವೆ ಜೊಲ್ಲೆ ಭೇಟಿ : ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನ!

ಕಾಂಗ್ರಸ್ ಸದಸ್ಯೆ, ಲಾವಣ್ಯ ಬಲ್ಲಾಲ್ ಅವರು, “ಮಾಧ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಿಂದ ಶಶಿಕಲಾ ಜೊಲ್ಲೆ ವಿರುದ್ಧ ಆರೋಪ ಕೇಳಿ ಬಂದಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಬೇಕಾಗಿದೆ” ಎಂದು ಆಗ್ರಹಿಸಿದ್ದಾರೆ.

ಶರತ್‌ ಬೀರಂಬಳ್ಳಿ ಅವರು, “ಅಪೌಷ್ಟಿಕತೆ ‌ತಪ್ಪಿಸಲು ನಾನಾ ಯೋಜನೆಗಳು. ಗರ್ಭಿಣಿಯರಿಗೆ ಮಾತೃಪೂರ್ಣ, ಶಿಶು ವಿಹಾರದಿಂದ ಬಾಣಂತಿ ಕಿಟ್, ನಂತರ ಶಾಲೆಗಳಲ್ಲಿ ‌ಮೊಟ್ಟೆ, ಹಾಲು ಬಿಸಿಯೂಟ. ಇದು ಕೇವಲ ಯೋಜನೆಗಳಲ್ಲ ಮಕ್ಕಳ‌ ಆರೋಗ್ಯ, ಭವಿಷ್ಯ. ಇದರ ಮೇಲು ಹಗರಣ ಅಂದ್ರೆ ಅಸಹ್ಯ ಅನ್ನಿಸುವಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಪರ ಹೋರಾಟಗಾರ ಅರುಣ್ ಜಾವಗಲ್ ಅವರು, “ರಾಷ್ಟ್ರೀಯ ಪಕ್ಷದಲ್ಲಿ ದೆಹಲಿಯ ಹೈಕಮಾಂಡ್‌ನ ಅನುಮತಿಯಿಲ್ಲದೆ ಒಂದು ಹುಲ್ಲು ಕೂಡ ಅಲುಗಾಡೊಲ್ಲಾ. ಹಾಗಿರುವಾಗ ಮೊಟ್ಟೆಯ ವಿಚಾರದಲ್ಲಿ ಕೇಳಿಬರುತ್ತಿರೋ ಭ್ರಷ್ಟಾಚಾರದಲ್ಲಿ ದೆಹಲಿಯ ಹೈಕಮಾಂಡ್ ಪಾಲೆಷ್ಟು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್‌ನವರಿಗಿಂತಲೂ ಹೆಚ್ಚು ಬಿಜೆಪಿಗರಿಂದ ಹುಟ್ಟುಹಬ್ಬದ ಅಭಿನಂದನೆ ಪಡೆದುಕೊಂಡ ಎಚ್‌ ಡಿ ಕುಮಾರಸ್ವಾಮಿ! ಏನಿದರ ಮರ್ಮ?

ಪ್ರೊಫಸರ್‌ ಎಂಬ ಟ್ವಿಟರ್‌ ಖಾತೆ, “ಆ ಕಡೆಯಿಂದ ಅಕ್ಕಿ ಕದಿಯೋದು. ಈ ಕಡೆ ಮೊಟ್ಟೆ ಕದಿಯೋದು. ಇದೊಂತರ ಎಗ್‌ರೈಸ್‌ ಸರ್ಕಾರ!!” ಎಂದು ಹೇಳಿದ್ದಾರೆ.

ಸ್ಯಾಮುಯೆಲ್‌ ಶೈನ್ ಎಂಬವರು, “ಏನ್ರೀ ಜೊಲ್ಲೆ, ಮೊಟ್ಟೆ ಕಾಸಲ್ಲಿ ಭಲ್ಲೆ ಭಲ್ಲೆ? #ನುಂಗಬೇಡಿಮಕ್ಕಳಮೊಟ್ಟೆ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಉಸ್ತುವಾರಿ ಸಚಿವರುಗಳೇ ಎಲ್ಲಿದ್ದೀರಿ? ಇತ್ತ ಸ್ವಲ್ಪ ಗಮನಿಸಿ ಪ್ಲೀಸ್!

ಇದನ್ನೂ ಓದಿ: ತೆರದಾಳ ಪ್ರಕರಣ: ಮುಖ್ಯಮಂತ್ರಿಗಳೇ ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದಿರಿ-ಡಿಕೆಶಿ ಪ್ರಶ್ನೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...