ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಪ್ರಮುಖ ವೆಬ್‌ಸೈಟ್‌ಗಳು, ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರು ಗುರಿಯಾಗಿಸಿಕೊಂಡು 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಿದ ಏಳು ಅಡ್ವಾನ್ಸ್ಡ್ ಪರ್ಸಿಸ್ಟೆಂಟ್ ಥ್ರೆಟ್ (ಎಪಿಟಿ) ಗುಂಪುಗಳನ್ನು ಭಾರತೀಯ ಸೈಬರ್ ಏಜೆನ್ಸಿಗಳು ಗುರುತಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಭಾರತದ ಪ್ರಮುಖ ಸ್ಥಳಗಳ
ಕೆಲವು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳು (ಪಿಐಒಗಳು) ‘ಡ್ಯಾನ್ಸ್ ಆಫ್ ಹಿಲರಿ’ ಮತ್ತು ‘ಕಾಲ್ಸ್ ಫ್ರಮ್ ಮಿಲಿಟರಿ’ ಎಂಬ ಸಂಕೇತನಾಮ ಹೊಂದಿರುವ ಮಾಲ್‌ವೇರ್‌ಗಳ ಮೂಲಕ ಭಾರತದಲ್ಲಿ ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರು ಬಳಸುವ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಧ್ಯಪ್ರಾಚ್ಯ ಪ್ರದೇಶದಿಂದ ಈ ದಾಳಿಗಳು ನಡೆದಿರುವುದರಿಂದ 15 ಲಕ್ಷ ಸೈಬರ್ ದಾಳಿ ಪ್ರಯತ್ನಗಳಲ್ಲಿ ಕೇವಲ 150 ಮಾತ್ರ ಯಶಸ್ವಿಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
“ಭಾರತ-ಪಾಕಿಸ್ತಾನ ಎರಡೂ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆಸದಿರುವ ಒಪ್ಪಂದಕ್ಕೆ ಬಂದ ನಂತರ ಭಾರತದಲ್ಲಿ ಸರ್ಕಾರಿ ವೆಬ್‌ಸೈಟ್‌ಗಳ ಮೇಲಿನ ಸೈಬರ್ ದಾಳಿಗಳು ಕಡಿಮೆಯಾಗಿವೆ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ. ಅದಾಗ್ಯೂ, ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರಾಕೊ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಈ ದಾಳಿಗಳು ಮುಂದುವರೆದಿವೆ.” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಳಿಯ ಸ್ವರೂಪದ ವಿವರಗಳನ್ನು ನೀಡಿದ ಅಧಿಕಾರಿ, ದಾಳಿಕೋರರು ಮಾಲ್‌ವೇರ್ ಅಭಿಯಾನಗಳನ್ನು ಬಳಸಿದ್ದಾರೆ. ಇದರಲ್ಲಿ ‘ಡಿಸ್ಟ್ರಿಬ್ಯೂಟೆಡ್ ಡಿನೈಯಲ್-ಆಫ್-ಸರ್ವಿಸ್ (DDoS) ದಾಳಿಗಳು’ ಮತ್ತು ‘GPS ವಂಚನೆ’ ಸೇರಿವೆ ಎಂದು ಅವರು ಹೇಳಿದ್ದಾರೆ.
ಈ ದಾಳಿಯ ಮೂಲಕ ಭಾರತೀಯ ವೆಬ್‌ಸೈಟ್‌ಗಳ ವಿರೂಪಗೊಳಿಸುವಿಕೆಯ ಪ್ರಕರಣಗಳು ಸಹ ವರದಿಯಾಗಿವೆ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ಅಂತಹ ಅನೇಕ ದಾಳಿಗಳನ್ನು ತಡೆಯಲಾಗಿದ್ದು, ದೇಶದ ನಿರ್ಣಾಯಕ ಮೂಲಸೌಕರ್ಯವನ್ನು ಉಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭಾರತದ ಪ್ರಮುಖ ಸ್ಥಳಗಳ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮುರ್ಷಿದಾಬಾದ್ ಹಿಂಸಾಚಾರ | ಎಸ್‌ಐಟಿ, ಸಿಬಿಐ ತನಿಖೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಮುರ್ಷಿದಾಬಾದ್ ಹಿಂಸಾಚಾರ | ಎಸ್‌ಐಟಿ, ಸಿಬಿಐ ತನಿಖೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

