Homeಮುಖಪುಟನಾಗರಿಕನ ಗುಂಡಿಕ್ಕಿ ಕೊಂದ ಅರೆಸೈನಿಕ ಪಡೆ; ಕ್ಯಾಂಪ್‌ಗೆ ಬೆಂಕಿಯಿಟ್ಟ ಆಕ್ರೋಶಿತರು

ನಾಗರಿಕನ ಗುಂಡಿಕ್ಕಿ ಕೊಂದ ಅರೆಸೈನಿಕ ಪಡೆ; ಕ್ಯಾಂಪ್‌ಗೆ ಬೆಂಕಿಯಿಟ್ಟ ಆಕ್ರೋಶಿತರು

- Advertisement -
- Advertisement -

ಅರೆಸೈನಿಕ ಪಡೆಯು ನಾಗರಿಕನೊಬ್ಬನನ್ನು ಗುಂಡಿಕ್ಕಿ ಕೊಂದ ನಂತರ ಮಣಿಪುರದಲ್ಲಿ ಡಜನ್‌‌ಗಟ್ಟಲೆ ಗ್ರಾಮಸ್ಥರ ಗುಂಪೊಂದು ಎರಡು ಅಸ್ಸಾಂ ರೈಫಲ್ಸ್ ವಾಹನಗಳು ಮತ್ತು ನಾಲ್ಕು ಶಸ್ತ್ರಾಸ್ತ್ರಗಳನ್ನು ಸುಟ್ಟುಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರಾಜ್ಯದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಜಿಲ್ಲೆಯ ಚಲ್ವಾ ಗ್ರಾಮದ ದಿನಗೂಲಿ ಕಾರ್ಮಿಕ ಮಂಗ್ಬೊಯಿಲಾಲ್ ಲೌವುಮ್‌ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಇದರಿಂದಾಗಿ ಬಲಿಯಾಗಿದ್ದಾರೆ ಎಂದು TNIE ವರದಿ ಮಾಡಿದೆ.

ಇದನ್ನೂ ಓದಿ: ಲಸಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳು: ಕಟಕಟೆಯಲ್ಲಿ ಮೋದಿ ಸರ್ಕಾರ!

ಘಟನೆ ಸಂಭವಿಸಿದಾಗ ಬಾಂಗ್ಲಾಬಂಗ್ ಗ್ರಾಮದಲ್ಲಿರುವ “44 ಅಸ್ಸಾಂ ರೈಫಲ್ಸ್‌’’ ಪಕ್ಕದ ಚಲ್ವಾ ಗ್ರಾಮಕ್ಕೆ ಪ್ರಯಾಣಿಸುತ್ತಿತ್ತು. ಅಸ್ಸಾಂ ರೈಫಲ್ಸ್‌ನೊಂದಿಗೆ ಡೆಪ್ಯುಟೇಶನ್‌ನಲ್ಲಿರುವ ಆರ್ಮಿ ಮೇಜರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ನಂತರ, ಆಕ್ರೋಶಗೊಂಡ ಸ್ಥಳೀಯರು ಅಸ್ಸಾಂ ರೈಫಲ್ಸ್ ಕ್ಯಾಂಪ್‌ನ ಹೊರಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಮೇಜರ್ ಅವರನ್ನು ಪೊಲೀಸರು ಕರೆದೊಯ್ಯುತ್ತಿರುವಾಗ ಅವರು ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ.

ಘಟನೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಬಗ್ಗೆಗಿನ ಯಾವುದೆ ವಿವರಗಳನ್ನು ಹಂಚಿಕೊಳ್ಳಲು ಪೊಲೀಸರು ನಿರಾಕರಿಸಿದ್ದು, ಅಸ್ಸಾಂ ರೈಫಲ್ಸ್ ಕೂಡ ಮಾಧ್ಯಮಕ್ಕೆ ಏನನ್ನೂ ಹಂಚಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಕ್ಷಿಗಳಿಗಾಗಿ ಗೂಡು, ಆಹಾರೋದ್ಯಾನ ನಿರ್ಮಿಸುತ್ತಿರುವ ಬೆಂಗಳೂರಿನ ಸ್ವಯಂ ಸೇವಕರ ತಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...