Homeಮುಖಪುಟರಾಮಮಂದಿರ ನಿರ್ಮಾಣದ ಟ್ರಸ್ಟ್ ಮುಖ್ಯಸ್ಥನಾಗಿ ನೇಮಕವಾದ ರಾಜೀವ್ ಗಾಂಧಿ ಆಪ್ತ

ರಾಮಮಂದಿರ ನಿರ್ಮಾಣದ ಟ್ರಸ್ಟ್ ಮುಖ್ಯಸ್ಥನಾಗಿ ನೇಮಕವಾದ ರಾಜೀವ್ ಗಾಂಧಿ ಆಪ್ತ

ಸುಪ್ರಿಂ ಕೋರ್ಟಿನ ವಕೀಲರಾದ ಕೆ.ಪರಾಸರನ್ ರಾಮಮಂದಿರದ ಪರವಾಗಿ ಪ್ರಕರಣ ದಾಖಲಿಸಿದ್ದರು

- Advertisement -
- Advertisement -

ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ಮುಖ್ಯಸ್ಥರಾಗಿ ಸುಪ್ರಿಂಕೋರ್ಟಿನ ವಕೀಲರಾದ ಕೆ.ಪರಾಸರನ್ ಅವರು ನೇಮಕಗೊಂಡಿದ್ದಾರೆ. ಇವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಪ್ತ ಮತ್ತು ನಿಷ್ಠ ವಲಯಕ್ಕೆ ಸೇರಿದವರಾಗಿದ್ದರು. ರಾಜ್ಯಸಭೆಯ ಮಾಜಿ ಸದಸ್ಯರಾದ ಇವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಲಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರದ ಪರವಾಗಿ ಪ್ರಕರಣವನ್ನು ದಾಖಲಿಸಿದ ನಂತರ ಇವರು ಸಂಘ ಪರಿವಾರದ ಕಣ್ಮಣಿಯಾಗಿದ್ದಾರೆ. ಆದರೆ ಮೂರು ದಶಕಗಳ ಹಿಂದೆ ಬೋಫೋರ್ಸ್ ಹಗರಣದಲ್ಲಿ ಸಿಲುಕಿದ್ದ ರಾಜೀವ್ ಗಾಂಧಿಯ ಪ್ರಧಾನ ಮಂತ್ರಿ ಸ್ಥಾನವನ್ನು ಉಳಿಸಲು ಸಹಾಯ ಮಾಡಿದ್ದರು.

1987 ರಲ್ಲಿ ಬೋಫೋರ್ಸ್ ಹಗರಣವೂ ಸುದ್ದಿಯಾದಾಗ ರಾಜೀವ್ ಗಾಂಧಿಯನ್ನು ವಜಾಗೊಳಿಸಲು ಅಂದಿನ ಅಧ್ಯಕ್ಷ ಗ್ಯಾನಿ ಜೈಲ್ ಸಿಂಗ್ ಅವರು ತೀರ್ಮಾನಿಸಿದ್ದರು. ಆಗ ಅಟಾರ್ನಿ ಜನರಲ್ ಆಗಿದ್ದ ಪರಾಸರನ್ ಅವರು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಸಿಂಗ್ ಸರ್ಕಾರವನ್ನು ವಜಾಗೊಳಿಸಲು ನಿರ್ಧರಿಸಿದಲ್ಲಿ ಸರ್ಕಾರವು ತಡರಾತ್ರಿ ಸುಪ್ರೀಂ ಕೋರ್ಟ್‌‌ಗೆ ಹೋಗಬಹುದು. ಪಾಠಕ್ ಮತ್ತು ಇತರ ಇಬ್ಬರು ಹಿರಿಯ ನ್ಯಾಯಾಧೀಶರು ಆ ನಡೆಯಲ್ಲಿದ್ದಾರೆ ಎಂದು ತಿಳಿಸಿದ್ದರು.

ಸಿಜೆಐಯೊಂದಿಗೆ ಪರಾಸರನ್ ಅವರ ರಹಸ್ಯ ಸಭೆ ಮಹತ್ವದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಅಧ್ಯಕ್ಷರು ತಮ್ಮ ಯೋಜನೆಯನ್ನು ಮುಂದಿಟ್ಟಿದ್ದರೆ ರಾಜೀವ್ ನ್ಯಾಯಾಂಗದಿಂದ ತಕ್ಷಣದ ಪರಿಹಾರವನ್ನು ಪಡೆಯಲು ಸಹಾಯ ಮಾಡಬಹುದಿತ್ತು. ಅಂತಿಮವಾಗಿ, ಸಿಂಗ್ ಅಂತಹ ಯಾವುದೇ ಕ್ರಮವನ್ನು ಮಾಡಲಿಲ್ಲ.

2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಪರಾಸರನ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತ್ತು.

ಪರಾಸರನ್ ಅವರನ್ನು “ಶ್ರೀ ರಾಮ ಜನ್ಮಭೂಮಿ ತೀರ್ಥ” ಕ್ಷೇತ್ರದ ಮುಖ್ಯಸ್ಥರಾಗಿ ಬುಧವಾರ ನೇಮಿಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರದದ ನಿರ್ಮಾಣವನ್ನು ಈ ಟ್ರಸ್ಟ್ ನೋಡಿಕೊಳ್ಳಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...