Homeಮುಖಪುಟಕುನಾಲ್ ಕಮ್ರಾ ಟ್ವೀಟ್‌‌ಗಳನ್ನು ಅನುಮತಿಸಿದ್ದಕ್ಕಾಗಿ ಟ್ವಿಟ್ಟರನ್ನು ತರಾಟೆಗೆ ಪಡೆದ ಸಂಸದೀಯ ಸಮಿತಿ!

ಕುನಾಲ್ ಕಮ್ರಾ ಟ್ವೀಟ್‌‌ಗಳನ್ನು ಅನುಮತಿಸಿದ್ದಕ್ಕಾಗಿ ಟ್ವಿಟ್ಟರನ್ನು ತರಾಟೆಗೆ ಪಡೆದ ಸಂಸದೀಯ ಸಮಿತಿ!

- Advertisement -
- Advertisement -

ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯನ್ನು ಗುರಿಯಾಗಿಸಿಕೊಂಡು ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರು ಇತ್ತೀಚೆಗೆ ನಡೆಸಿದ “ಅಶ್ಲೀಲ” ಟ್ವೀಟ್‌ಳ ಬಗ್ಗೆ ಸಂಸದೀಯ ಸಮಿತಿಯು ಟ್ವಿಟ್ಟರ್ ಅನ್ನು ಪ್ರಶ್ನಿಸಿದ್ದು, ಈ ವಿಷಯದ ಬಗ್ಗೆ ಅವರಿಂದ ಏಳು ದಿನಗಳಲ್ಲಿ ಉತ್ತರ ಕೋರಿದೆ ಎಂದು ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಮಾಹಿತಿ ನೀಡಿದ್ದಾರೆ.

ಡೇಟಾ ಸಂರಕ್ಷಣಾ ಮಸೂದೆ ಕುರಿತು ಟ್ವಿಟರ್ ಇಂಡಿಯಾ ಪ್ರತಿನಿಧಿಗಳು ಸಂಸತ್ತಿನ ಜಂಟಿ ಸಮಿತಿಯ ಮುಂದೆ ಇಂದು ಲಿಖಿತ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  ಕಾಮೇಡಿಯನ್ ’ಕುನಾಲ್ ಕಮ್ರ’ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ

“ಸುಪ್ರೀಂ ಕೋರ್ಟ್ ಮತ್ತು ಸಿಜೆಐ ವಿರುದ್ಧ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರಂತಹ ಅಶ್ಲೀಲ ಟೀಕೆಗಳಿಗೆ ಟ್ವಿಟರ್ ತನ್ನ ವೇದಿಕೆಯನ್ನು ಅನುಮತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸುಪ್ರೀಂ ಕೋರ್ಟ್ ಮತ್ತು ಸಿಜೆಐನಂತಹ ಉನ್ನತ ಸಾಂವಿಧಾನಿಕ ಅಧಿಕಾರಿಗಳನ್ನು ನಿಂದಿಸುವುದಕ್ಕಾಗಿ ಟ್ವಿಟರ್ ತನ್ನ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುತ್ತಿದೆ” ಎಂದು ಅವರು ಟ್ವಿಟ್ಟರ್‌‌ ಅನ್ನು ತರಾಟೆಗೆ ಪಡೆದಿದ್ದಾರೆ.

ಕಾಂಗ್ರೆಸ್ ಸಂಸದ ವಿವೇಕ್ ತಂಖಾ, ಬಿಎಸ್ಪಿ ಸಂಸದ ರಿತೇಶ್ ಪಾಂಡೆ ಮತ್ತು ಬಿಜೆಡಿ ಸಂಸದ ಭಾತ್ರುಹರಿ ಮಹತಾಬ್ ಸೇರಿದಂತೆ ಈ ಸಮಿತಿಯ ಇತರ ಸದಸ್ಯರು ಕೂಡಾ ವಿಷಯದ ಬಗ್ಗೆ ಟ್ವಿಟರ್ ಪ್ರತಿನಿಧಿಗಳನ್ನು ತರಾಟೆಗೆ ಪಡೆದುಕೊಂಡರು ಎಂದು ಅವರು ಹೇಳಿದ್ದಾರೆ.

ಹ್ಯಾಂಡಲ್ ಮತ್ತು ಟ್ವೀಟ್‌ಗಳನ್ನು ನಿಷೇಧಿಸುವ ಬಗ್ಗೆ ಟ್ವಿಟರ್‌ನ ವಿವರಣೆಯು ಅಸಮರ್ಪಕವಾಗಿದೆ ಎಂದು ಮೀನಾಕ್ಷಿ ಹೇಳಿದ್ದಾರೆ.

ಇದನ್ನೂ ಓದಿ: ಎಬಿಪಿ ನ್ಯೂಸ್‍ಗೆ ನಾವು ಪಾಠ ಕಲಿಸ್ತೀವಿ

ನಿನ್ನೆ ಟ್ವೀಟ್ ಮಾಡಿದ್ದ ಕುನಾಲ್ ಕಮ್ರಾ, “ಎರಡು ಬೆರಳುಗಳಲ್ಲಿ ಒಂದು ಬೆರಳು ಭಾರತದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್‌ ಬೋಬ್ಡೆ ಅವರಿಗೆ. ಸರಿ ಇನ್ನು ಗೊಂದಲಕ್ಕೆ ಒಳಗಾಗದಿರಿ, ಅದು ನಡುಬೆರಳು” ಎಂದು ಬರೆದು, ಎರಡು ಬೆರಳುಗಳ ಚಿತ್ರವನ್ನು ಟ್ವೀಟ್‌‌ನಲ್ಲಿ ಪೋಸ್ಟ್‌ ಮಾಡಿದ್ದರು.

ಈ ಮಧ್ಯೆ, ಕುನಾಲ್ ಕಮ್ರಾ ಸುಪ್ರೀಂ ಕೋರ್ಟ್ ವಿರುದ್ಧದ ವಿವಾದಾತ್ಮಕ ಟ್ವೀಟ್‌ಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಹಾಗೂ ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟನ್ನು ಸರಣಿ ಟ್ವೀಟ್‌ಗಳಲ್ಲಿ ಟೀಕಿಸಿದ್ದ ಕಾರಣಕ್ಕಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...