ರಾಜ್ಯದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎಂದರೆ ನಮಗೆ ನಾವೇ ಸುಳ್ಳು ಹೇಳಿಕೊಂಡಂತೆ. ಜೆಡಿಎಸ್ ಪಕ್ಷ ಕುಸಿಯುತ್ತಿದೆ. ಜನರಿಗೆ ಪ್ರಾದೇಶಿಕ ಪಕ್ಷದ ಮಹತ್ವದ ಮನವರಿಕೆಯಾಗಿಲ್ಲ ಜೆಡಿಎಸ್‌ನ ವೈ.ಎಸ್.ವಿ ದತ್ತ ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇವೇಗೌಡರು ತಮ್ಮ 86ನೇ ವಯಸ್ಸಿನಲ್ಲಿಯೂ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಜೆಡಿಎಸ್ ಕುಸಿಯುತ್ತಿದೆ, ಸಡಿಲವಗುತ್ತಿದೆ. ಇದಕ್ಕೆ ಕಾರಣ ಇದು ಕುಟುಂಬದ ಪಕ್ಷ ಎಂದು ಎದುರಾಳಿಗೆ ಆಡಿಕೊಳ್ಳಲು ನಾವೇ ಒಂದಷ್ಟು ಅಸ್ತ್ರ-ಶಸ್ತ್ರಗಳನ್ನು ಕೊಟ್ಟಿದ್ದೇವೆ. ಇದನ್ನು ಕುಮಾರಸ್ವಾಮಿ ಮತ್ತು ದೇವೆಗೌಡರಿಗೂ ಹೇಳಿದ್ದೇನೆ. ಇದರಲ್ಲಿ ನನಗ್ಯಾವ ಮುಜುಗರವೂ ಇಲ್ಲ. ನಾವು ಅಧಿಕಾರಕ್ಕೆ ರಾಜಕೀಯ ಮಾಡಿದವರಲ್ಲ. ತತ್ವ ಸಿದ್ದಾಂತಕ್ಕಾಗಿ ರಾಜಕಾರಣ ಮಾಡಿದ್ದೇವೆ.
ನಮ್ಮ ಪಕ್ಷವನ್ನು ಕಟ್ಟಬೇಕಾದರೆ ಮುಂದೆ ಒಂದು ತೀರ್ಮಾನ ಮಾಡಬೇಕಾಗಿದೆ. ಪ್ರದಾಶಿಕ ಪಕ್ಷ ಅಧಿಕಾರಕ್ಕೆ ಬರುವುದಾದರೆ, ದೇವೇಗೌಡರು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಕುಟುಬಂದ ಯಾವೊಬ್ಬ ಸದಸ್ಯನು ಅಧಿಕಾರದ ಸ್ಥಾನಕ್ಕೆ ಬದರುವುದಿಲ್ಲ, ನಾವು ದೂರ ಇದ್ದು ನಮ್ಮ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ, ತತ್ವಬದ್ಧವಾಗಿರುವವರನ್ನು ಅಧಿಕಾರದ ಸ್ಥಾನದಲ್ಲಿ ಕೂರಿಸುತ್ತೇವೆ ಎಂದು ಘೋಷಿಸಬೇಕು. ಆಗ ಮಾತ್ರ ಜೆಡಿಎಸ್‌ನ ಚೈತನ್ಯ ಸಾಧ್ಯ ಎಂದು ದತ್ತ ಹೇಳಿದ್ದಾರೆ.
ಪ್ರಾದೇಶಿಕ ಪಕ್ಷ ತುಂಬಾ ಅನಿವಾರ್ಯ. ತಮಿಳುನಾಡಿನಲ್ಲಿ ಸ್ಟಾಲಿನ್ ಇಲ್ಲದೇ, ಆಂದ್ರದಲ್ಲಿ ಜಗನ್-ಚಂದ್ರಬಾಬು ನಾಯ್ಡು ಇಲ್ಲದೆ ನಡೆಯೋಲ್ಲ. ತೆಲಂಗಾಣದಲ್ಲಿ ಕೆ.ಸಿ.ಆರ್ ಇಲ್ಲದೇ ಏನೂ ಕೆಲಸ ನಡೆಯುವುದಿಲ್ಲ.. ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳದ್ದೇ ಕಾರುಬಾರು ಎಂದು ಅರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರದ್ಯಂತ ಬಿಜೆಪಿ ಕುಸಿಯುತ್ತಿದೆ. ಪ್ರಾದೇಶಿಕ ಪಕ್ಷಗಳನ್ನು ಊರುಗೋಲಾಗಿ ಇಟ್ಟುಕೊಂಡು ಕಾಂಗ್ರೆಸ್ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಮಾತ್ರ ಅದಕ್ಕೆ ತದ್ವಿರುದ್ದವಾಗಿದೆ ಎಂದರು. ಪಕ್ಷಕ್ಕೆ ಚೈತನ್ಯ ತುಂಬಬೇಕಾಗಿದೆ.
ರಾಷ್ಟ್ರೀಯ ಪಕ್ಷಗಳಿಂದ ಸತತ ಅನ್ಯಾಯವಾಗುತ್ತಿದೆ:
ಕಾವೇರಿ ಸಮಸ್ಯೆ, ಮಹಾದಾಯಿ ಯೋಜನೆ, ಬೆಳಗಾವಿ ವಿವಾದ ಈ ರೀತಿಯ ಹಲವಾರು ಸಮಸ್ಯೆಗಳು ಕರ್ನಾಟಕ ರಾಜ್ಯವನ್ನು ಕಾಡುತ್ತಿದ್ದರೂ ಪ್ರಾದೇಶಿಕ ಪಕ್ಷಗಳ ಬಗ್ಗೆ ಕರ್ನಾಟಕದ ಜನರಿಗೆ ಅರಿವಾಗಿಲ್ಲ, ರಾಷ್ಟ್ರೀಯ ಪಕ್ಷಗಳಿಂದ ಸತತವಾಗಿ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್‌ನ ವೈ.ಎಸ್.ವಿ ದತ್ತ ಹೇಳಿದ್ದಾರೆ.



ಒಬ್ಬರಿಗೆ ಒಂದು ಹುದ್ದೆ ಎಂಬಂತೆ ,ಕುಟುಂಬಕ್ಕೆ ಒಂದೇ ಹುದ್ದೆ ಎಂದರೆ ತುಸು ಸರಿಹೋಗಬಹುದು.