Homeಮುಖಪುಟವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

ವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-3

| ಜಿ. ಆರ್. ವಿದ್ಯಾರಣ್ಯ |

ತನ್ನ ಸ್ವಂತ ಶಕ್ತಿ/ದೌರ್ಬಲ್ಯವನ್ನು ಅರಿತುಕೊಳ್ಳುವ ಕಲೆಗೆ “ಸ್ವೊಟ್ ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಇದನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೂಡ ಬಳಸಬಹುದು. ಇದರಿಂದ ವ್ಯಕ್ತಿಯ/ಸಂಸ್ಥೆಯ ಶಕ್ತಿ (Strength), ದೌರ್ಬಲ್ಯ (Weakness), ಅವಕಾಶ (Opportunity) ಮತ್ತು ಭೀತಿ (Threat) ಗಳನ್ನು ಅರಿತುಕೊಳ್ಳಬಹುದು.ಈ ವಿಶ್ಲೇಷಣೆಯನ್ನು ವ್ಯಕ್ತಿಯ ಪರವಾಗಿ ಬಳಸಿದಲ್ಲಿ ವ್ಯಕ್ತಿಯ ಸಹಜ ಶಕ್ತಿ-ಸಾಮರ್ಥ್ಯಗಳನ್ನು ಅರಿತು ಅದಕ್ಕೆ ತಕ್ಕ ಅವಕಾಶಗಳನ್ನು ಹುಡುಕಲು ನೆರವಾಗುತ್ತದೆ. ಸಂಸ್ಥೆಯ ಪರವಾಗಿ ಉಪಯೋಗಿಸಿದಲ್ಲಿ ಅದರ ಮಾರುಕಟ್ಟೆಯ ಹಿಡಿತ ಬಲಪಡಿಸುವುದಕ್ಕೆ ಅಥವಾ ಹೊಸ ಆವಿಶ್ಕಾರವನ್ನು ಹೊರಬಿಡಲು ಸಹಕಾರಿಯಾಗುತ್ತದೆ.

ಸ್ವೊಟ್ ಎನಾಲಿಸಿಸ್ (SWOT ANALYSIS)ಮಾಡುವುದರಿಂದ ನಮ್ಮ ಶಕ್ತಿ ಏನು ಮತ್ತು ದೌರ್ಬಲ್ಯ ಏನು ಎಂಬುದನ್ನು ತಿಳಿಯಬಹುದು. ಉದಾಹರಣೆಗೆ ನಿಮ್ಮ ಇತ್ತೀಚಿನ ಶಾಲಾ/ಕಾಲೇಜು ತರಗತಿಯ ಅಂಕ ಪಟ್ಟಿ ನೋಡಿದಾಕ್ಷಣ ಯಾವ ವಿಷಯದಲ್ಲಿ ನೀವು ಗಟ್ಟಿಗರು, ಯಾವುದರಲ್ಲಿ ನಿಮಗೆ ಶಕ್ತಿ ಸಾಲದು ಎಂಬುದು ಕೂಡಲೇ ತಿಳಿಯುತ್ತದೆ. ಯಾವ ವಿಷಯದಲ್ಲಿ ನೀವು ಹೆಚ್ಚು ಅಂಕ ಗಳಿಸಿದ್ದೀರೋ, ಅದು ನಿಮ್ಮ ಸಹಜ ಶಕ್ತಿ. ಯಾವ ವಿಷಯ ಎಷ್ಟೇ ಪರಿಶ್ರಮ ಪಟ್ಟರೂ, ನಿಮ್ಮ ತಲೆಗೆ ಹತ್ತುವುದಿಲ್ಲವೋ ಅದು ನಿಮ್ಮ ದೌರ್ಬಲ್ಯ, ಆದರೆ ಎರಡೂ, ಶಕ್ತಿ ಮತ್ತು ದೌರ್ಬಲ್ಯ, ತಾತ್ಕಾಲಿಕ. ಇದಕ್ಕೆ ಕಾರಣ ನೀವು ಕಂಡುಕೊಳ್ಳಬೇಕು. ಬಹುಶಃ ನಿಮ್ಮ ಕಲಿಯುವ ರೀತಿ ಸರಿಯಾಗಿಲ್ಲದಿರಬಹುದು ಅಥವಾ ಶಾಲೆಯಲ್ಲಿ ಕಲಿಸುವ ವಿಧಾನದಲ್ಲಿ ತೊಂದರೆ ಇರಬಹುದು. ಸರಿಯಾದ ಕಾರಣ ತಿಳಿದು ಸಮಸ್ಯೆ ಪರಿಹರಿಸಿದಲ್ಲಿ ದೌರ್ಬಲ್ಯವನ್ನು ಶಕ್ತಿಯಾಗಿ ಬದಲಾಯಿಸಿಕೊಳ್ಳಲು ಸಾಧ್ಯ.

ಅದೇ ರೀತಿಯಲ್ಲಿ ನಿಮ್ಮ ಶಕ್ತಿಯಿಂದ ನಿಮಗೆ ಈಗಿರುವ ಅಥವಾ ಸಿಗಬಹುದಾದ ಅವಕಾಶಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಅತಿ ಹೆಚ್ಚಿನ ಆಸಕ್ತಿ/ಉತ್ಸಾಹವಿದ್ದಲ್ಲಿ ಅದಕ್ಕೆ ಸಿಗಬಹುದಾದ ಪಾರಿತೋಷಕ, ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮುಂತಾದವುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಅದಕ್ಕೆ ಪೂರಕವಾದ ಲೇಖನ ರಚಿಸಿ ಲಗತ್ತಿಸಬೇಕಾಗಬಹುದು. ಅದೇ ವಿಷಯದಲ್ಲಿ ಉನ್ನತ ಅಭ್ಯಾಸಕ್ಕೆ ಇರುವ ಬೇರೆ ಬೇರೆ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು.

ವಿಜ್ಞಾನ ಸಂಬಂಧಿ ವಿಷಯಗಳಲ್ಲಿ ನಿಮಗೆ ಹೆಚ್ಚು ಅಂಕಗಳು ಬರುತ್ತಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಕಷ್ಟವಾಗಿದ್ದರೆ ನೀವು ಎಸ್.ಎಸ್.ಎಲ್.ಸಿ. ನಂತರ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ. ಅಥವಾ ಪಿ.ಸಿ.ಎಂ.ಇ. ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ವಿಜ್ಞಾನ ಸಂಬಂಧಿ ವಿಷಯಗಳುನಿಮಗೆ ಕಷ್ಟಕರ ಎನಿಸುತ್ತಿದ್ದು, ಭಾಷೆ, ಇತಿಹಾಸ, ಭೂಗೋಳ ಮುಂತಾದವು ಸುಲಭವಾಗಿದ್ದರೆ ನೀವು ಹ್ಯುಮಾನಿಟೀಸ್ ಶಾಖೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ನೀವು ಲೆಕ್ಕದಲ್ಲಿ ಗಟ್ಟಿಗರು ಮತ್ತು ಭಾಷೆಯೂ ಸುಲಭ ಎನಿಸಿದರೆ ಕಾಮರ್ಸ್ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇ ಬೇಕೆಂಬ ನಿಯಮವೂ ಇಲ್ಲ, ಅಗತ್ಯವೂ ಇಲ್ಲ. ಯಾವುದೇ ಮಾರ್ಗವನ್ನು ನೀವು ನಿಮ್ಮ ಸಹಜ ಶಕ್ತಿ ಗುಣವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ, ಹೆಚ್ಚು ಪರಿಶ್ರಮವಿಲ್ಲದೇ ಉನ್ನತ ಸಾಧನೆ ಮಾಡಲು ಬಹಳಷ್ಟು ಅವಕಾಶವಿರುತ್ತದೆ.

ಇತ್ತೀಚೆಗೆ ಏಪ್ರಿಲ್/ಮೇ ತಿಂಗಳಲ್ಲಿ ಕಾಲೇಜುಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳು ನಗರದಾದ್ಯಂತ ಮಾರಾಟ ಮೇಳಗಳನ್ನು ಆಯೋಜಿಸುತ್ತಾರೆ. ಇದರಲ್ಲಿ, ಶಿಕ್ಷಣ ತಜ್ಞರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಅವರಿಗೆ ಇರುವ ಹೊಸ ಹೊಸ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿಕೊಡುತ್ತಾರೆ. ಇಂತಹ ಮೇಳಗಳಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಬೇಕು. ಒಳ್ಳೆಯ ವರಮಾನ/ಬಡ್ತಿ ಅವಕಾಶವಿರುವ ಹುದ್ದೆಗಳ ದೃಷ್ಟಿಯಿಂದ ಯಾವ ಯಾವ ಕ್ಷೇತ್ರದಲ್ಲಿ, ಮುಂಬರುವ ಎಷ್ಟು ವರ್ಷದಲ್ಲಿ, ಎಷ್ಟು ಹುದ್ದೆಗಳು ಸೃಷ್ಟಿಯಾಗಲಿವೆ ಎಂಬ ಖಚಿತ ಮಾಹಿತಿ ದುರದೃಷ್ಟವಶಾತ್ ಎಲ್ಲೂ ಸಿಗುವುದಿಲ್ಲ. ಈಗ ಕಂಪ್ಯೂಟರ್ ಕ್ಷೇತ್ರದಲ್ಲಿ ಎ.ಐ. (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಶಕ್ತಿ) ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಎಂದು ಕೇಳಿಬಂದರೂ ಸಹ ಮುಂಬರುವ ಐದು ವರ್ಷದಲ್ಲಿ ಏನಾಗಬಹುದು ಎಂದು ಯಾರಿಗೂ ಗೊತ್ತಿಲ್ಲ ಆದ್ದರಿಂದ ಈಗ ಆ ಕೋರ್ಸಿಗೆ ಸೇರುವ ಮಕ್ಕಳಿಗೆ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ಖಚಿತಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಆನ್-ಲೈನ್ ಉಚಿತ ಪರೀಕ್ಷೆ ಮಾಡಿಕೊಂಡಲ್ಲಿ ಅವರ ವ್ಯಕ್ತಿತ್ವ ಮಾದರಿ ಯಾವುದು ಎಂಬುದು ತಿಳಿಯುತ್ತದೆ. ಈ ಸ್ವ-ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ವ್ಯಕ್ತಿತ್ವದ ಇಂಡಿಕೇಟರ್ ಪ್ರಕಾರ ಯಾವ ಜೀವನೋಪಾಯ/ವೃತ್ತಿ ಅವರಿಗೆ ಸಹಜ ಮತ್ತು ಸರಳ ಎಂಬುದನ್ನು ನಿರ್ಧರಿಸಬಹುದು. ಅದೇ ರೀತಿ ಅವರ ಮುಂದಿನ ಉನ್ನತ ಶೈಕ್ಷಣಿಕ ಆಯ್ಕೆಯನ್ನೂ ಸಹ ಅವರು ಅಥವಾ ಪೋಷಕರು ನಿರ್ಧರಿಸಬಹುದು.

ಅಪಾಯದ ಎಚ್ಚರಿಕೆ: ಎಂಬಿಟಿಐ ಅಥವಾ ಬಿಗ್-ಫೈವ್ ಆಗಲೀ ಸಂಪೂರ್ಣ ವೈಜ್ಞಾನಿಕ ತತ್ವವಾದ ಅಲ್ಲ, ಆದ್ದರಿಂದ ಮಕ್ಕಳ ಭವಿಷ್ಯ ರೂಪಿಸುವ ಮುನ್ನ, ಪರಿಣಿತರ, ವೃತ್ತಿಪರರ ಸಲಹೆ ಪಡೆಯುವುದು ಅತ್ಯಂತ ಅವಶ್ಯಕ. ಕೇವಲ ಅಂತರ್ಜಾಲದ ಮಾಹಿತಿ ನಂಬಿ, ಅಥವಾ ಒಂದು ಲೇಖನ ಓದಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಹು ದೊಡ್ಡ ನಿರ್ಧಾರಕ್ಕೆ ಬರಬೇಡಿ.

ಎಸ್.ಎಸ್.ಎಲ್.ಸಿ. ನಂತರ ದ್ವಿತೀಯ ಪಿಯುಸಿ ಸಾಕು (ಅಥವಾ ಯಾವುದೋ ಒಂದು ಪದವಿ ಗಿಟ್ಟಿಸಿದರೆ ಸಾಕು) ಎಂದು ಓದನ್ನು ಅಲ್ಲಿಗೇ ನಿಲ್ಲಿಸಿ, ಯಾವ ಕೆಲಸಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸಲಾಗದೇ ಇರುವ ಯುವಕ/ಯುವತಿಯರಿಗೆ ಇಲ್ಲಿದೆ ಒಂದು ಸರಳ ದಾರಿ. ಮೊದಲು ಮೇಲೆ ತಿಳಿಸಿದಂತೆ, ನಿಮ್ಮ ಸ್ವೊಟ್ ಎನಾಲಿಸಿಸ್ ನೀವೇ ಮಾಡಿಕೊಳ್ಳಿ. ನೀವು ಎಂತಹ ವ್ಯಕ್ತಿ ಎಂದು ನೀವೇ ನಿರ್ಧರಿಸಿಕೊಳ್ಳಿ. ನಂತರ ಶಾಲೆ/ಕಾಲೇಜಿನಲ್ಲಿ ನೀವು ಸುಲಭವಾಗಿ ಕಲಿತ ವಿಷಯ, ನೀವು ಸ್ವ-ಇಚ್ಛೆಯಿಂದ, ಸ್ವಯಂಸೇವಕರಾಗಿ, ಇಷ್ಟ ಪಟ್ಟು ಮಾಡಿದ ಕೆಲಸಗಳು (ಸ್ಕೌಟ್/ಗೈಡ್, ಎನ್.ಎಸ್.ಎಸ್., ಗ್ರಾಹಕ ಕ್ಲಬ್, ವಿಜ್ಞಾನ ಕ್ಲಬ್, ಬರವಣಿಗೆ/ಚಿತ್ರಕಲೆ, ಸಾಮಾಜಿಕ/ಧಾರ್ಮಿಕ ಚಟುವಟಿಕೆ, ಅಥವಾ ಧನಸಂಗ್ರಹ ಇತ್ಯಾದಿ), ಇಷ್ಟವಾದ/ಭಾಗವಹಿಸಿದ ಕ್ರೀಡೆಗಳು ಯಾವುದು ಎಂದು ಒಂದನ್ನೂ ಬಿಡದೆ, ಹಾಳೆಯಲ್ಲಿ ಗುರುತು ಹಾಕಿಕೊಳ್ಳಿ. ಇವನ್ನೆಲ್ಲಾ ಒಂದೊಂದು ಮಣಿಗಳು ಎಂದು ಭಾವಿಸಿ, ಅವನ್ನು ಪೋಣಿಸಿ ಹಾರವನ್ನಾಗಿ ಮಾಡಬಹುದೇ ಯೋಚಿಸಿ. ಹಾರಕ್ಕೆ ಒಂದೆರಡು ಮಣಿಗಳು ಕಡಿಮೆ ಎಂದೆನಿಸಿದರೆ ಅವನ್ನು ಪಡೆಯಲು ನಿಮ್ಮ ಪ್ರಯತ್ನ ಹೇಗಿರಬೇಕು ಎಂದು ಯೋಚಿಸಿ. ನಿಮ್ಮ ಮುಂದಿನ ದಾರಿ ತಾನಾಗಿಯೇ ಗೋಚರಿಸುತ್ತದೆ.

ಇದನ್ನೂ ಒದಿ: ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ಇದನ್ನೂ ಓದಿ: ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...