Homeಮುಖಪುಟಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

ಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

- Advertisement -
- Advertisement -

ಜೀವನ ಕಲೆಗಳು ಲೇಖನ: 5

ವ್ಯಕ್ತಿತ್ವ ವಿಕಸನ 4  ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ)ಬಗ್ಗೆ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ್ದೆ. ಇದು ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಎಂಬಿಟಿಐ ಸೂಚ್ಯಾಂಕ ತಿಳಿದುಕೊಳ್ಳುವ ಆಸಕ್ತಿ ಉಳ್ಳವರು ಈ ಲಿಂಕ್ ಕ್ಲಿಕ್ಕಿಸಿ:

ಎಂಬಿಟಿಐ ಸೂಚ್ಯಾಂಕದಲ್ಲಿ, ಕಾರ್ಲ್ ಜಂಗ್ ಪ್ರಕಾರ, ವ್ಯಕ್ತಿಯ ಪ್ರಮುಖವಾದ ನಾಲ್ಕು ಗುಣಲಕ್ಷಣಗಳಾದ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬವನ್ನು ವಿಂಗಡಿಸಿ, ಅದರ ತದ್ವಿರುದ್ದಗಳೊಂದಿಗೆ ಸಂಯೋಗಪೂರ್ವಕವಾಗಿ ಜೋಡಿಸಿ, ಹದಿನಾರು ಸಂಯೋಗ ಸೂಚಕ ಅಕ್ಷರದ ಗುಂಪುಗಳನ್ನಾಗಿ ಮಾಡಲಾಗಿದೆ. ಅದರಂತೆ ಬಂದ ಹದಿನಾರು ಸಂಯೋಗಗಳು ಹೀಗಿವೆ:

ESTJ, ISTJ, ENTJ, INTJ, ESTP, ISTP, ENTP, INTP, ESFJ, ISFJ, ENFJ, INFJ, ESFP, ISFP, ENFP & INFP.

ನಿಮ್ಮ ಟೈಪ್ ಇಂಡಿಕೇಟರ್ ಮೇಲಿನ ಹದಿನಾರ ಪೈಕಿ ಯಾವುದೇ ಆಗಿದ್ದಲ್ಲಿ ಅದಕ್ಕೆ ಜನ್ಮ ಕುಂಡಲಿ (ಜಾತಕ) ರೀತಿಯ ಸಂಪೂರ್ಣ ವಿಶ್ಲೇಷಣೆ, ಮೇಲೆ ನೀಡಿರುವ ಅಂತರ್ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ಆಸಕ್ತಿ ಇರುವವರು ಅದನ್ನು ಆಳವಾಗಿ ಅಧ್ಯಯನ ಮಾಡಬಹುದು. ಸಂಕ್ಷಿಪ್ತವಾಗಿ ತಿಳಿಸುವುದಾದರೆ:

ಇ.ಎಸ್.ಟಿ.ಜೆ. (ESTJ): ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ತೀರ್ಪುಗಾರಿಕೆ ಸ್ವಭಾವದ ನೈಸರ್ಗಿಕ ನಾಯಕತ್ವದ ವ್ಯಕ್ತಿಗಳು, ತಮಗೆ ಯಾವುದು ಸರಿಯೋ ಅದನ್ನು ಶಕ್ತಿಯುತವಾಗಿ ಪ್ರತಿಪಾದಿಸುವವರು, ಪರಿಣಾಮವನ್ನು ಎದುರಿಸುವವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಶಿಕ್ಷಣ, ತರಬೇತಿ, ಬ್ಯಾಂಕಿಂಗ್, ರಾಜಕೀಯ, ಮತ್ತು ಎಲ್ಲಾ ಸ್ತರದ ವ್ಯವಸ್ಥಾಪಕ ಹುದ್ದೆ.

ಐ.ಎಸ್.ಟಿ.ಜೆ. (ISTJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ, ತೀರ್ಪುಗಾರಿಕೆ ಮತ್ತು ಸ್ವತಂತ್ರ ಸ್ವಭಾವದ ನಿರೀಕ್ಷಕ ವ್ಯಕ್ತಿಗಳು, ಸಮಯ ಪರಿಪಾಲಕರು, ತಪ್ಪು-ಸರಿ ತಿಳಿದವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಮಿಲಿಟರಿ, ಪೋಲಿಸ್ ಅಧಿಕಾರಿ, ವೈದ್ಯರು, ಸನದು ಲೆಕ್ಕಿಗರು, ವಕೀಲರು, ಅಭಿಯಂತರು, ಮಧ್ಯಮ ಸ್ತರದ ವ್ಯವಸ್ಥಾಪಕ ಹುದ್ದೆ.

ಇ.ಎನ್.ಟಿ.ಜೆ. (ENTJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ ಸಂಸ್ಥೆ ಕಟ್ಟುವ ನಾಯಕರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲವರು. ಇವರಿಗೆ ಸೂಕ್ತ ವೃತ್ತಿಗಳು: ಕಂಪನಿಯ ಮುಖ್ಯಸ್ಥರು, ಉದ್ಯೋಗಶೀಲರು, ಕಂಪ್ಯೂಟರ್ ಸಲಹೆಗಾರರು, ವಿಶ್ವವಿದ್ಯಾಲಯದ ಆಡಳಿತಗಾರರು, ಇತ್ಯಾದಿ

ಐ.ಎನ್.ಟಿ.ಜೆ. (INTJ):ವ್ಯಕ್ತಿಗಳುಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ “ಮಾಸ್ಟರ್ ಮೈಂಡ್”. ಯಾವುದೇ ಸಂಕೀರ್ನ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಅಭಿಯಂತರು, ವೈದ್ಯರು, ರಣನೀತಿ ತಯಾರಕರು ಇತ್ಯಾದಿ.

ಇ.ಎಸ್.ಟಿ.ಪಿ. (ESTP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಕ್ರಿಯಾಶೀಲರು. ಇನ್ನೊಬ್ಬರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಮಾರ್ಕೆಟಿಂಗ್, ಕಂಪ್ಯೂಟರ್/ವೈದ್ಯಕೀಯ ಸಪೋರ್ಟ್ ತಂಡ, ಇತ್ಯಾದಿ.

ಐ.ಎಸ್.ಟಿ.ಪಿ. (ISTP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಇವರಿಗೆ ಸೂಕ್ತ ವೃತ್ತಿಗಳು: ಪೋಲಿಸ್ ತನಿಖಾ ದಳ, ಅಭಿಯಂತರು, ಮೆಕ್ಯಾನಿಕ್, ಪೈಲಟ್ ಇತ್ಯಾದಿ. ಆದರೆ ಎಲ್ಲ ಕೆಲಸಕ್ಕೆ ಸುಲಭವಾಗಿ ಹೊಂದಿಕೊಳ್ಳುವರು.

ಇ.ಎನ್.ಟಿ.ಪಿ. (ENTP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವಕೀಲಿ, ಮನೋವಿಜ್ಞಾನಿ, ಸಿನಿಮಾ/ನಾಟಕ ನಟನೆ, ಇತ್ಯಾದಿ.

ಐ.ಎನ್.ಟಿ.ಪಿ. (INTP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಫೋಟೋಗ್ರಾಫಿ, ಗಣಿತ ತಜ್ಞರು, ನ್ಯಾಯಾಧೀಶರು, ಇತ್ಯಾದಿ.

ಇ.ಎಸ್.ಎಫ್.ಜೆ. (ESFJ):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ನರ್ಸಿಂಗ್, ಶಿಕ್ಷಣ, ಧಾರ್ಮಿಕ ಕೆಲಸ, ಇತ್ಯಾದಿ.

ಐ.ಎಸ್.ಎಫ್.ಜೆ. (ISFJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಅಂಗಡಿ/ಮಳಿಗೆ ಮಾಲೀಕರು, ವಾಚನಾಲಯ ನಡೆಸುವುದು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎನ್.ಎಫ್.ಜೆ. (ENFJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಲಹೆಗಾರರು, ಮನೋರೋಗ ತಜ್ಞರು, ಸಮಾಜ ಸೇವಕರು ಇತ್ಯಾದಿ.

ಐ.ಎನ್.ಎಫ್.ಜೆ. (INFJ):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವೈದ್ಯರು, ಸಂಗೀತಗಾರರು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎಸ್.ಎಫ್.ಪಿ. (ESFP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಂಗೀತ/ನೃತ್ಯ ಕಲಾವಿದರು,ಸಿನಿಮಾ/ನಾಟಕ ನಟನೆ,ಇತ್ಯಾದಿ.

ಐ.ಎಸ್.ಎಫ್.ಪಿ. (ISFP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಶಿಕ್ಷಕರು, ಸಲಹೆಗಾರರು, ಅರಣ್ಯಾಧಿಕಾರಿ, ಇತ್ಯಾದಿ.

ಇ.ಎನ್.ಎಫ್.ಪಿ. (ENFP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಲೇಖಕರು, ಪತ್ರಿಕೋದ್ಯಮ, ರಾಯಭಾರಿ ಇತ್ಯಾದಿ.

ಐ.ಎನ್.ಎಫ್.ಪಿ. (INFP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಲೇಖಕರು, ಶಿಕ್ಷಕರು, ಮನೋತಜ್ಞರು, ಇತ್ಯಾದಿ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:

1. ಎಂಬಿಟಿಐ ಸೂಚ್ಯಾಂಕ ನಿಮ್ಮ ಜನ್ಮಕ್ಕೆ ಅಂಟಿದ ಹಣೆಪಟ್ಟಿ ಅಲ್ಲ. ಇದು ನಿಮ್ಮ ಇಂದಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ಕಂಡು ಬಂದ ಗುಣಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಅಂತರ್ಮುಖಿಗಳು ಬಹಿರ್ಮುಖಿಯಾಗಬಹುದು; ಚಿಂತನಾಶೀಲರು ಕ್ರಿಯಾಶೀಲರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಸೂಚ್ಯಾಂಕ, ಅದರ ವಿಶ್ಲೇಷಣೆ ಮತ್ತು ವೃತ್ತಿ ಸಹ ಬದಲಾಗಬಹುದು.

2. ಎಂಬಿಟಿಐ ಸೂಚ್ಯಾಂಕವನ್ನು ಬಹಳಷ್ಟು ಕಂಪನಿಗಳು, ಜಾಲತಾಣಗಳು, ಸಲಹೆಗಾರರು ವಿಧವಿಧವಾಗಿ ಅರ್ಥೈಸುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಗಳು ಜಾತಕ ನೋಡಿ ಭವಿಷ್ಯ ಹೇಳುವಂತೆ, ಎಲ್ಲರೂ ತಮ್ಮದೇ ಆದ ವಿಶ್ಲೇಷಣೆ ಮತ್ತು ವೃತ್ತಿಗಳನ್ನು ಸೂಚಿಸುತ್ತಾರೆ. ಆದ್ದರಿಂದ ಇದು ವಿಜ್ಞಾನಿ ಎನಿಸಿಕೊಳ್ಳದೆ ಅರೆ-ವಿಜ್ಞಾನದ ಗುಂಪಿಗೆ ಸೇರಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಿ ಎಂದು ನನ್ನ ಸವಿನಯ ಸಲಹೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...