ಶನಿವಾರ ಮುಂಜಾನೆ ಸಮೀಪದಲ್ಲೇ ವಿಮಾನಗಳು ಘರ್ಜಿಸಿದವು, ಬೀದಿಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಹೊಗೆ ಬುಗ್ಗೆ ಆವರಿಸಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರೆಸ್ ಪ್ರಕಾರ, ಕನಿಷ್ಠ ಏಳು ಕಡೆ ಸರಣಿ ಸ್ಫೋಟದ ಶಬ್ದಗಳು ಕೇಳಿಬಂದವು. ನಿವಾಸಿಗಳು ಬೀದಿಗಳಿಗೆ ಧಾವಿಸಿದಾಗ ಸಮೀಪದಲ್ಲೇ ವಿಮಾನ ಹಾರಾಟ ಕಂಡುಬಂದಿದೆ. ನಗರದಾದ್ಯಂತ ಸ್ಫೋಟ ಸಂಭವಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.
ವೆನೆಜುವೆಲಾದ ಪ್ರಮುಖ ಮಿಲಿಟರಿ ಕೋಟೆ, ಕ್ಯಾರಕಾಸ್ ನಗರದ ಪಶ್ಚಿಮಕ್ಕೆ ಫೋರ್ಟ್ ಟಿಯುನಾ ಮತ್ತು ಲಾ ಕಾರ್ಲೋಟಾ ಮಿಲಿಟರಿ ನೆಲೆಯಲ್ಲಿ ವಿಮಾನಗಳು ಹತ್ತಿರದಲ್ಲೇ ಹಾರುತ್ತಿರುವಾಗ ಸ್ಫೋಟಗಳು ವರದಿಯಾಗಿವೆ ಎಂದು ಸ್ಪ್ಯಾನಿಷ್ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಇ ವರದಿ ಮಾಡಿದೆ.
“ಇಡೀ ನೆಲ ನಡುಗಿ ಭಯಾನಕವಾಗಿದೆ. ದೂರದಲ್ಲಿ ಸ್ಫೋಟ ಮತ್ತು ವಿಮಾನ ಹಾರಾಟದ ಶಬ್ಧ ನಮಗೆ ಕೇಳಿಬಂದವು. ಗಾಳಿಯು ನಮ್ಮನ್ನು ಹೊಡೆದಂತೆ ನಮಗೆ ಭಾಸವಾಯಿತು” ಎಂದು 21 ವರ್ಷದ ಕಚೇರಿ ಕೆಲಸಗಾರ ಕಾರ್ಮೆನ್ ಹಿಡಾಲ್ಗೊ ಮಾಧ್ಯಮಗಳಿಗೆ ತಿಳಿಸಿದರು.
ಹಿಗುರೋಟ್ ವಿಮಾನ ನಿಲ್ದಾಣದಲ್ಲಿಯೂ ದೊಡ್ಡ ಸ್ಫೋಟ
ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನಗಳ ಭಾಗವಾಗಿ, ನಿರ್ಬಂಧಗಳನ್ನು ಹೆಚ್ಚಿಸುವುದು, ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಚರಣೆ ಹೆಚ್ಚಿಸುವ ಜೊತೆಗೆ ಕೆರಿಬಿಯನ್ ಮತ್ತು ಪೆಸಿಫಿಕ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊತ್ತಿರುವ ಎರಡು ಡಜನ್‌ಗೂ ಹೆಚ್ಚು ಹಡಗುಗಳನ್ನು ಗುರಿಯಾಗಿಸಿಕೊಂಡು ವೆನೆಜುವೆಲಾದಲ್ಲಿ ಕಾರ್ಯಾಚರಣೆಗಳನ್ನು ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಬೆದರಿಕೆ ಹಾಕಿದ್ದಾರೆ.
ಪೆಂಟಗನ್ ಅಥವಾ ವೆನೆಜುವೆಲಾ ಸರ್ಕಾರವು ಊವರೆಗೆ ಯಾವುದೇ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಟ್ರಂಪ್ ಆಡಳಿತದ ಅಧಿಕಾರಿಗಳಿಗೆ ವೆನೆಜುವೆಲಾದಲ್ಲಿ ಬಾಂಬ್ ದಾಳಿಗಳ ಬಗ್ಗೆ ತಿಳಿದಿರಲಿಲ್ಲ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅಧ್ಯಕ್ಷ ಟ್ರಂಪ್ ಅವರು ವೆನೆಜುವೆಲಾದಲ್ಲಿ ದೇಶದ ಅಕ್ರಮ ಮಾದಕವಸ್ತು ವ್ಯಾಪಾರವನ್ನು ತಡೆಯಲು ಮತ್ತು ವಲಸಿಗರ ಹರಿವನ್ನು ತಡೆಯಲು ಕಾರ್ಯನಿರ್ವಹಿಸಲು ಸಿಐಎಗೆ ಅಧಿಕಾರ ನೀಡಿದ್ದಾರೆ ಎಂದು ಬಹಿರಂಗಪಡಿಸಿದರು.
ಮಡುರೊ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾದಕವಸ್ತು-ಭಯೋತ್ಪಾದನಾ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ವಾರ, ಸಿಐಎ ವೆನೆಜುವೆಲಾದ ಡ್ರಗ್ ಕಾರ್ಟೆಲ್‌ಗಳು ಬಳಸುತ್ತಿದ್ದಾರೆ ಎಂದು ಹೇಳಲಾದ ಡಾಕಿಂಗ್ ಸೈಟ್ ಮೇಲೆ ಡ್ರೋನ್ ದಾಳಿ ನಡೆಸಿತು, ಇದು ಸೆಪ್ಟೆಂಬರ್‌ನಲ್ಲಿ ಹಡಗುಗಳ ಮೇಲೆ ದಾಳಿಗಳು ಪ್ರಾರಂಭವಾದ ನಂತರ ವೆನೆಜುವೆಲಾ ನೆಲದಲ್ಲಿ ಮೊದಲ ಅಧಿಕೃತ ಯುಎಸ್ ಕಾರ್ಯಾಚರಣೆಯಾಗಿದೆ.
ವೆನೆಜುವೆಲಾದ ಕರಾವಳಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಅನುಮೋದಿತ ತೈಲ ಟ್ಯಾಂಕರ್‌ಗಳನ್ನು ಸಹ ವಶಪಡಿಸಿಕೊಂಡಿದೆ. ಕೂಡಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತರ ಹಡಗುಗಳನ್ನು ದಿಗ್ಬಂಧನ ಮಾಡಲು ಆದೇಶಿಸಿದರು. ವೆನೆಜುವೆಲಾ ದೇಶದ ಮೇಲೆ ಆರ್ಥಿಕ ಒತ್ತಡವನ್ನು ಬಿಗಿಗೊಳಿಸಿದರು. ಶುಕ್ರವಾರದ ವೇಳೆಗೆ, ಅಮೆರಿಕದ ದಾಳಿಗಳು 35 ದೋಣಿಗಳನ್ನು ಹೊಡೆದುರುಳಿಸಿವೆ ಎಂದು ಟ್ರಂಪ್ ಆಡಳಿತ ಹೇಳಿದೆ, ಇದರಲ್ಲಿ ಕನಿಷ್ಠ 115 ಜನರು ಸಾವನ್ನಪ್ಪಿದ್ದಾರೆ.


