ಕೇಂದ್ರ ಸರ್ಕಾರವು PM Cares ನಿಧಿ ರಚನೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದೆ. ಜೊತೆಗೆ ಈಗಾಗಲೇ ಬಂದಿರುವ ದೇಣಿಗೆಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಗೆ (NDRF) ವರ್ಗಾಯಿಸಬೇಕೆಂಬ ಸಲಹೆಯನ್ನು ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠವು ಈ ಕುರಿತು ದಾಖಲಾದ ಪಿಐಎಲ್ ವಿಚಾರಣೆ ನಡೆಸಿ ಕೇಂದ್ರ ಸಲ್ಲಿಸಿದ್ದ ಅಫಿಡವಿಟ್ ಅನ್ನು ಪರಿಶೀಲಿಸಿತು. PIL ವತಿಯಿಂದ ಹಾಜರಾಗಿರುವ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ ಎಂ ಸಿಂಘ್ವಿ ಅವರಿಗೆ ಅಫಿಡವಿಟ್ ಕಾಪಿಗಳನ್ನು ವಿತರಿಸುವಂತೆ ಸಾಲಿಸಿಟರ್ ಜನರಲ್‌ಗೆ ಸುಪ್ರೀಂ ಸೂಚಿಸಿದೆ.
NDRF ನಲ್ಲಿರುವ ಹಣವನ್ನು ಕೊರೊನಾ ವಿರುದ್ಧದ ಹೋರಾಟ ಮತ್ತು ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಬಳಸಿಕೊಳ್ಳಬೇಕು. ಹಾಗೆಯೇ PM Cares ಗೆ ಬಂದಿರುವ ಹಣವನ್ನು NDRFಗೆ ವರ್ಗಾಹಿಸುವಂತೆ ಪಿಐಎಲ್ ವಾದಿಸಿತ್ತು.
PM Caresಗೆ ಸ್ವಯಂ ಪ್ರೇರಿತವಾಗಿ ಬಂದಿರುವ ಹಲವಾರು ವಯಕ್ತಿಕ ದೇಣಿಗೆಗಳ ಹಣವನ್ನು ಈಗಾಗಲೇ ಹಲವಾರು ಸುಧಾರಣಾ ಕಾರ್ಯಗಳಿಗಾಗಿ ಬಳಸಲಾಗಿದೆ ಎಂದು ಕೇಂದ್ರವು ಅಫಿಡವಿಟ್ ಅನ್ನು ಕೋರ್ಟಿಗೆ ಸಲ್ಲಿಸಿದೆ.
ಕೇಂದ್ರದ ಗೃಹ ಸಚಿವಾಲಯ ಕೊಟ್ಟಿರುವ ದಾಖಲೆಯ ಪ್ರಕಾರ PM Cares ನಲ್ಲಿರುವ ಹಣವನ್ನು NDRF ವರ್ಗಾಯಿಸಲು ಸಾಧ್ಯವಿಲ್ಲವೆಂದು ಹೇಳಿದೆ.
ಮಾರ್ಚ್ 28 ರಂದು ಕೇಂದ್ರವು ಕೊರೊನಾದಿಂದ ಉಂಟಾದಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಮತ್ತು ಸೋಂಕಿತರಿಗೆ ಪರಿಹಾರವನ್ನು ಒದಗಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಯ ಪರಿಹಾರ (PM CARES) ನಿಧಿಯನ್ನು ಸ್ಥಾಪಿಸಿತು.
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಉಚಿತ ಆಹಾರ ಧಾನ್ಯದ ಜೊತೆಗೆ ಜುಲೈ 7 ರವರೆಗೆ ನೇರ ನಗದು ವರ್ಗಾವಣೆಯ ಮೂಲಕ ವಿವಿಧ ಯೋಜನೆಗಳ ಸುಮಾರು 42.06 ಕೋಟಿ ಫಲಾನುಭವಿಗಳಿಗೆ 67,478 ಕೋಟಿ ರೂ.ಗಳನ್ನು ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಪಿಎಂ ಕೇರ್ಸ್‌ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ


