ಸೋಮವಾರ ಜುಲೈ 12ರ ಬೆಳಗಿನ ಜಾವ ನಿಧನರಾದ ಭಾರತೀಯ ಆರ್ಥೊಡಾಕ್ಸ್ ಚರ್ಚ್‌ನ ಸರ್ವೋಚ್ಚ ಮುಖ್ಯಸ್ಥ ಮೋರನ್ ಮಾರ್ ಬೆಸೆಲಿಯೊಸ್ ಮಾರ್ಥೋಮಾ ಪಾಲೋಸ್ II ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
“ಭಾರತೀಯ ಆರ್ಥೊಡಾಕ್ಸ್ ಚರ್ಚ್‌ನ ಸರ್ವೋಚ್ಚ ಮುಖ್ಯಸ್ಥ ಮೊರನ್ ಮಾರ್ ಬೆಸೆಲಿಯೊಸ್ ಮಾರ್ಥೋಮಾ ಪಾಲೋಸ್ II ರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಸೇವೆ ಮತ್ತು ಸಹಾನುಭೂತಿಯ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ದುಃಖದ ಈ ಗಳಿಗೆಯಲ್ಲಿ ನನ್ನ ಆಲೋಚನೆಗಳು ಆರ್ಥೊಡಾಕ್ಸ್ ಚರ್ಚ್ ಸದಸ್ಯರೊಂದಿಗೆ ಇದೆ,” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Saddened by the passing away of His Holiness Moran Mar Baselios Marthoma Paulos II, the Supreme Head of Indian Orthodox Church. He leaves behind a rich legacy of service and compassion. In this hour of grief, my thoughts are with the members of the Orthodox Church. RIP.
— Narendra Modi (@narendramodi) July 12, 2021
ಕೇರಳದ ಪರುಮಾಳ ಗ್ರಾಮದ ಸೇಂಟ್ ಗ್ರೆಗೋರಿಯೊಸ್ ಮಿಷನ್ ಆಸ್ಪತ್ರೆಯಲ್ಲಿನ ಕ್ರಿಟಿಕಲ್ ಕೇರ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಥೊಲಿಕ್ ಚರ್ಚ್ ಬೆಸಿಲಿಯಸ್ ಮಾರ್ಥೋಮಾ ಪಾಲೋಸ್ II ಸೋಮವಾರ ಮುಂಜಾನೆ 2.35 ಕ್ಕೆ ನಿಧನರಾದರು.
ಭಾನುವಾರ ಬೆಳಿಗ್ಗೆಯಿಂದ ಅವರ ವೈದ್ಯಕೀಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು ಎಂದು ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್‌ನಲ್ಲಿ ಹೇಳಲಾಗಿದೆ.
“ಕೃತಕ ಉಸಿರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ ದೇಹದಲ್ಲಿನ ಆಮ್ಲಜನಕದ ಕೊರತೆಯುಂಟಾಗಿದ್ದು ಸಂಜೆಯ ಹೊತ್ತಿಗೆ ಉಸಿರಾಟದ ವೈಫಲ್ಯ ಸಂಭವಿಸಿದೆ” ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಆರ್ಥೊಡಾಕ್ಸ್ ಚರ್ಚಿನ ಮುಖ್ಯಸ್ಥರು ಡಿಸೆಂಬರ್ 2019 ರಿಂದ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇ ಸೇಂಟ್ ಗ್ರೆಗೋರಿಯೊಸ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕೇರ್ ಸೆಂಟರ್ ಪೆರುಮಾಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಫೆಬ್ರವರಿ 2021 ರಲ್ಲಿ ಇಂಡಿಯನ್ ಆರ್ಥೊಡಾಕ್ಸ್ ಚರ್ಚ್‌ನ ಸುಪ್ರೀಂ ಹೆಡ್ COVID-19 ಸೋಂಕಿನಿಂದ ಚೇತರಿಸಿಕೊಂಡಿದ್ದರು. COVID ನಂತರದ ಶ್ವಾಸಕೋಶದ ತೊಂದರೆಗಳು ಅವರ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು.
ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ



Ha