Homeಎಕಾನಮಿನೀತಿ ಉಲ್ಲಂಘನೆ: ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಹೊರಕ್ಕೆ

ನೀತಿ ಉಲ್ಲಂಘನೆ: ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಹೊರಕ್ಕೆ

"ಬಳಕೆದಾರರನ್ನು ಹಾನಿಯಿಂದ ರಕ್ಷಿಸಲು ನಾವು ಈ ನೀತಿಗಳನ್ನು ಹೊಂದಿದ್ದೇವೆ. ಯಾವುದೇ ಅಪ್ಲಿಕೇಶನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ನಾವು Google Play ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕುತ್ತೇವೆ"

- Advertisement -
- Advertisement -

ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗಿದೆ. ಆದರೆ ಪೇಟಿಯಂನ ಇತರ ಅಪ್ಲಿಕೇಶನ್‌ಗಳಾದ Paytm for Business, Paytm Mall, Paytm Money, ಮತ್ತು ಇನ್ನೂ ಕೆಲವು ಅಪ್ಲಿಕೇಶನ್‌ಗಳು ಡೌನ್‌ಲೋಡ್‌ಗೆ ಲಭ್ಯವಿದೆ.

ಭಾರತದಲ್ಲಿ ಸುಮಾರು 50 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಪೇಟಿಯಂ ಹೊಂದಿದೆ. ಲಕ್ಷಾಂತರ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿರುವ ಪೇಟಿಎಂ ಅಪ್ಲಿಕೇಶನ್ ಅನ್ನು ತೆಗೆದುಹಾಕುವ ಹಿಂದಿನ ಕಾರಣವನ್ನು ಗೂಗಲ್ ನಿರ್ದಿಷ್ಟವಾಗಿ ಬಹಿರಂಗಪಡಿಸಿಲ್ಲ. ಆದರೆ ಇಂದು ಪೋಸ್ಟ್ ಮಾಡಿದ ಬ್ಲಾಗ್‌ನಲ್ಲಿ ಪೇಟಿಯಂ ಗೂಗಲ್‌ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾಗಿ ತಿಳಿಸಿದೆ.

ಇದನ್ನೂ ಓದಿ: ಹಿಂದಿ ಹೇರಿಕೆ ಬಗ್ಗೆ ನಿರ್ದೇಶಕ ಪವನ್ ಕುಮಾರ್‌ ’ಯೂ ಟರ್ನ್’!

ಪೇಟಿಯಂ ತನ್ನ ಆಪ್ಯ್‌ನಲ್ಲಿ ಗ್ಯಾಂಬ್ಲಿಂಗ್, ಫ್ಯಾಂಟಸಿ ಕ್ರೀಡಾ ಸೇವೆಗಳನ್ನು ಮತ್ತು ಆನ್‌ಲೈನ್ ಕ್ಯಾಸಿನೋಗಳಿಗೆ ಅವಕಾಶ ಮಾಡಿಕೊಟ್ಟಿದೆ. ಡ್ರೀಮ್ 11 ನಂತಹ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಆನ್‌ಲೈನ್ ಕ್ಯಾಸಿನೊಗಳು ಮತ್ತು ಇತರ ಅನಿಯಂತ್ರಿತ ಜೂಜಾಟದ ಅಪ್ಲಿಕೇಶನ್‌ಗಳನ್ನು ಗೂಗಲ್ ನಿಷೇಧಿಸುತ್ತದೆ ಹೀಗಾಗಿ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್‌ನ ಆಂಡ್ರಾಯ್ಡ್ ಸೆಕ್ಯುರಿಟಿ ಮತ್ತು ಗೌಪ್ಯತೆ ಉಪಾಧ್ಯಕ್ಷೆ  ಸುಝೇನ್ ಫ್ರೇ ತಿಳಿಸಿದ್ದಾರೆ.

“ಬಳಕೆದಾರರನ್ನು ಹಾನಿಯಿಂದ ರಕ್ಷಿಸಲು ನಾವು ಈ ನೀತಿಗಳನ್ನು ಹೊಂದಿದ್ದೇವೆ. ಯಾವುದೇ ಅಪ್ಲಿಕೇಶನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ನಾವು ಡೆವಲಪರ್‌ಗೆ ಮಾಹಿತಿ ನೀಡಿ, ಅಪ್ಲಿಕೇಶನ್ ಅನ್ನು ಮತ್ತೆ ಸರಿಪಡಿಸುವವರೆಗೆ ನಾವು Google Play ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕುತ್ತೇವೆ. ಮತ್ತೆ ಮತ್ತೆ ನಮ್ಮ ನೀತಿಗಳನ್ನು ಉಲ್ಲಂಘಿಸಿದರೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ” ಎನ್ನುತ್ತಾರೆ.

ಇದನ್ನೂ ಓದಿ: ತುಮಕೂರಿನ ಅಮಾನಿಕೆರೆ ನುಂಗುತ್ತಿದೆ ಅಭಿವೃದ್ಧಿಭೂತ; ಕೆರೆಯಲ್ಲಿ ಸಂತೆ ನಿರ್ಮಾಣಕ್ಕೆ ವ್ಯಾಪಕ ವಿರೋಧ

ಇನ್ನೂ ಪೇಟಿಯಂ ಕೂಡ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವುದನ್ನು ತನ್ನ ಗ್ರಾಹಕರಿಗೆ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪೇಟಿಯಂ  “ಹೊಸ ಡೌನ್‌ಲೋಡ್‌ಗಳು ಅಥವಾ ನವೀಕರಣಗಳಿಗಾಗಿ Paytm Android ಅಪ್ಲಿಕೇಶನ್ Google Play Store ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ.” ಅತಿ ಶೀಘ್ರದಲ್ಲೇ ಹಿಂತಿರುಗಲಿದೆ. ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನಿಮ್ಮ Paytm ಅಪ್ಲಿಕೇಶನ್ ಬಳಕೆ  ಮುಂದುವರಿಸಬಹುದು” ಎಂದಿದೆ.

ಆದರೆ ಆಪಲ್ ಆಪ್ಯ್‌ ಸ್ಟೋರ್‌ನಲ್ಲಿ ಪೇಟಿಯಂ ಡೌನ್‌ಲೋಡ್ ಮಾಡಲು ಲಭ್ಯವಿದೆ.


ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...