ಮೋದಿ ನೀತಿಗಳನ್ನು ಟೀಕಿಸಿದ್ದ ನನ್ನ ಭಾಷಣದ ಭಾಗಗಳನ್ನು ರಾಜ್ಯಸಭೆ ಕಡತದಿಂದ ತೆಗೆಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ

ಫೆಬ್ರವರಿ 4ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ತಾನು ಮಾಡಿದ್ದ ಭಾಷಣದ ಬಹುಪಾಲು ಅಂಶಗಳನ್ನು ಯಾವುದೇ ಸಮರ್ಪಕ ಕಾರಣ ನೀಡದೆ ರಾಜ್ಯಸಭೆಯ ಅಧಿಕೃತ ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಂವಿಧಾನದ 105(1)ನೇ ವಿಧಿಯಡಿ ಸಂಸದರಿಗೆ ಖಾತರಿಪಡಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದಿರುವ ಖರ್ಗೆ, ತೆಗೆದುಹಾಕಲಾದ ಭಾಗಗಳನ್ನು ಪುನಃಸ್ಥಾಪಿಸುವುದನ್ನು ಪರಿಗಣಿಸುವಂತೆ ರಾಜ್ಯಸಭೆಯ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಒತ್ತಾಯಿಸಿದ್ದಾರೆ. … Continue reading ಮೋದಿ ನೀತಿಗಳನ್ನು ಟೀಕಿಸಿದ್ದ ನನ್ನ ಭಾಷಣದ ಭಾಗಗಳನ್ನು ರಾಜ್ಯಸಭೆ ಕಡತದಿಂದ ತೆಗೆಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ