ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪಶುವೈದ್ಯೆಯ ಅತ್ಯಾಚಾರ ಆರೋಪಿಗಳ ದೇಹಗಳನ್ನು ಸಂರಕ್ಷಿಸಿ, ಶಶವಪರೀಕ್ಷೆಯನ್ನು ವಿಡಿಯೋ ರೆಕಾರ್ಡ್ ಮಾಡಿ, ರೆಕಾರ್ಡಿಂಗ್‌ಗಳನ್ನು ಶನಿವಾರ ಸಂಜೆ ವೇಳೆಗೆ ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು ಎಂದು ತೆಲಂಗಾಣ ಹೈಕೋರ್ಟ್ ಇಬ್ಬರು ನ್ಯಾಯಾಧೀಶರ ಪೀಠವು ಆದೇಶಿಸಿದೆ.
ಶುಕ್ರವಾರ ಮುಂಜಾನೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪಶುವೈದ್ಯೆಯ ಅತ್ಯಾಚಾರ ಆರೋಪಿಗಳ ಶವಗಳನ್ನು ಸೋಮವಾರ ರಾತ್ರಿ 8 ಗಂಟೆಯವರೆಗೆ ಸಂರಕ್ಷಿಸಬೇಕು ಎಂದು ತೆಲಂಗಾಣ ಹೈಕೋರ್ಟ್ ತಿಳಿಸಿದೆ.

“ಮಹಬೂಬ್‌ನಗರದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅದನ್ನು ಸ್ವೀಕರಿಸಲು ಮತ್ತು ಶನಿವಾರ ಸಂಜೆ ವೇಳೆಗೆ ತೆಲಂಗಾಣದ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಹಸ್ತಾಂತರಿಸಲು ನಿರ್ದೇಶಿಸಲಾಗಿದೆ”. ಸೋಮವಾರ ಬೆಳಿಗ್ಗೆ 10:30ಕ್ಕೆ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದ ತಂಡವನ್ನು ಈಗಾಗಲೇ ತೆಲಂಗಾಣಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕಳಿಸಿದೆ.
ಇದೇ ಸಂದರ್ಭದಲ್ಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ಮೇಲೆ ಕೇಸು ದಾಖಲಿಸಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ಕೂಡ ದಾಖಲಾಗಿದೆ.
ಹೈದರಾಬಾದ್ ಎನ್‌ಕೌಂಟರ್ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ಅನ್ನು ಶ್ಲಾಘಿಸುವವರು, ಉನ್ನಾವ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಸಹ ಎನ್‌ಕೌಂಟರ್ ಕೊಲೆ ಮಾಡಲು ಒತ್ತಾಯಿಸುತ್ತಾರೆಯೇ? ಅಥವಾ ಕಥುವಾದ ಮಗುವಿನ ಮೇಲಿನ ಅತ್ಯಾಚಾರ ಮತ್ತು ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿರುವವರ ಹತ್ಯೆಯನ್ನು ಬಯಸುತ್ತಾರೆಯೇ? ಇಲ್ಲ, ಏಕೆಂದರೆ ಆ ಆರೋಪಿಗಳಿಗೆ ಆಡಳಿತ ಪಕ್ಷ BJP ಯೊಂದಿಗೆ ಸಂಪರ್ಕವಿದೆ ಎಂದು ಹಿರಿಯ ಪತ್ರಕರ್ತೆ ಸಾಗರಿಕ ಘೋಷ್ ಆರೋಪಿಸಿದ್ದಾರೆ.


