ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ರಾಜಸ್ಥಾನದ ಬಿಜೆಪಿ ಪುರಸಭೆ ಸದಸ್ಯರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ದಕ್ಷಿಣದ ಕೋಟಾ ಮುನ್ಸಿಪಲ್ ಕಾರ್ಪೋರೇಶನ್‌ನ ವಾರ್ಡ್ ಸಂಖ್ಯೆ 14 ರ ಬಿಜೆಪಿಯ ಕೌನ್ಸಿಲರ್ ತಬಸ್ಸುಮ್ ಮಿರ್ಜಾ ಅವರು ಸೋಮವಾರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸತೀಶ್ ಪೂನಿಯಾ ಮತ್ತು ಕೋಟಾ ಜಿಲ್ಲಾ ಅಧ್ಯಕ್ಷ ಕ್ರಿಶನ್ ಕುಮಾರ್ ಸೋನಿ ಅವರಿಗೆ ಕಳುಹಿಸಿ, ತಮ್ಮ ರಾಜೀನಾಮೆ ಹಿಂದಿನ ಕಾರಣವನ್ನು ಉಲ್ಲೇಖಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಿರ್ಜಾ ಅವರು ಸುಮಾರು 10 ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು ಸೋನಿ ಅವರಿಗೆ ಬರೆದ ಪತ್ರದಲ್ಲಿ, ನಡೆಯುತ್ತಿರುವ ಸಂದರ್ಭಗಳಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು, , ಮುಂದಕ್ಕೆ ಪಕ್ಷದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾದಿ ನಿಂದನೆ: ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಕೋಲ್ಕತ್ತಾ ಪೊಲೀಸರ ಸಮನ್ಸ್
ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಅವರಿಗೆ ಬರೆದಿರುವ ಪ್ರತ್ಯೇಕ ಪತ್ರದಲ್ಲಿ, ಪ್ರವಾದಿಯನ್ನು ಅವಹೇಳನ ಮಾಡುತ್ತಿರುವ ಕಾರ್ಯಕರ್ತರನ್ನು ನಿಯಂತ್ರಿಸಲು ಪಕ್ಷವು ವಿಫಲಾಗಿದ್ದು, ಹಾಗಾಗಿ ಪಕ್ಷದ ಸದಸ್ಯರಾಗಿರುವ ಬಗ್ಗೆ ವಿಷಾದವಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ಬಿಜೆಪಿಯ ಸದಸ್ಯೆಯಾಗಿ ಮುಂದುವರಿದರೆ ಮತ್ತು ಪ್ರವಾದಿ ವಿರುದ್ಧದ ಹೇಳಿಕೆಯನ್ನು ಬೆಂಬಲಿಸಿದರೆ, ನನಗಿಂತ ದೊಡ್ಡ ಅಪರಾಧಿ ಮತ್ತೊಬ್ಬರಿಲ್ಲ. ನನ್ನ ಪ್ರಜ್ಞೆ ಜಾಗೃತಗೊಂಡಿದ್ದು, ನಾನು ಇನ್ನು ಮುಂದೆ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಅವರು ಪಕ್ಷದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಮಿರ್ಜಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಇಮೇಲ್ ಮತ್ತು ಪೋಸ್ಟ್ ಮೂಲಕ ಪೂನಿಯಾ ಮತ್ತು ಸೋನಿ ಅವರಿಗೆ ಕಳುಹಿಸಿದ್ದಾಗಿ ಹೇಳಿದ್ದಾರೆ.


