ಇಂದಿನಿಂದ ಆರಂಭವಾಗಲಿರುವ ಸಂಸತ್‌ನ ಮಾನ್ಸೂನ್ ಅಧಿವೇಶನಕ್ಕೆ ಸೈಕಲ್‌ನಲ್ಲಿ ಆಗಮಿಸುವ ಮೂಲಕ ಟಿಎಂಸಿ ಸಂಸದರು ಇಂಧನ ಬೆಲೆ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 10 ಸಂಸದರು ಸೈಕಲ್ ಏರಿ ಸಂಸತ್ ಭವನ ಪ್ರವೇಶಿಸಿದ್ದಲ್ಲದೇ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
#WATCH | Delhi: Trinamool Congress (TMC) MPs cycled to the Parliament today in protest against the rise in prices of petrol, diesel and LPG.#MonsoonSession pic.twitter.com/4NE72QhNjp
— ANI (@ANI) July 19, 2021
ಇಂದಿನಿಂದ ಆರಂಭವಾಗಲಿರುವ ಮಾನ್ಸೂನ್ ಸಂಸತ್ ಅಧಿವೇಶನ ಇಂಧನ ಬೆಲೆ ಏರಿಕೆ, ಪೆಗಾಸಿಸ್ ಸ್ಕೈವೇರ್ ಬಳಸಿ ಪತ್ರಕರ್ತರು ಸೇರಿ ಹಲವರ ಫೋನ್ ಹ್ಯಾಕ್ ಮಾಡಿರುವುದು, ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಮೋದಿ ಸರ್ಕಾರದ ವೈಫಲ್ಯದ ವಿಷಯಗಳನ್ನು ಚರ್ಚಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
“ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ನಾನು ಖಂಡಿತವಾಗಿಯೂ ಈ ವಿಷಯವನ್ನು ಸದನದಲ್ಲಿ ಎತ್ತುತ್ತೇನೆ” ಎಂದು ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಪ್ರತಿಪಕ್ಷಗಳು ಕಠಿಣ ಪ್ರಶ್ನೆಗಳನ್ನು ಕೇಳಬೇಕು, ಆದರೆ ಶಾಂತಿಯುತ ವಾತಾವರಣದಲ್ಲಿ ಉತ್ತರಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಮನವಿ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷವು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ, ಕೃಷಿ ಕಾಯ್ದೆಗಳ ಹಿಂತೆಗೆತ, ಲಸಿಕೆ ಪರಿಹಾರ, ಆರ್ಥಿಕ ಕುಸಿತ, ಸಂಸದರ ಅನುದಾನ ಕಡಿತ ಮತ್ತು ರಾಜ್ಯಗಳ ಸ್ವಾಯುತ್ತತ್ತೆ ಕಿತ್ತುಕೊಳ್ಳುತ್ತಿರುವ ವಿಚಾರಗಳ ಕುರಿತು ಅಧಿವೇಶನದಲ್ಲಿ ದನಿ ಎತ್ತಲು ನಿರ್ಧಿರಿಸಿದೆ ಎನ್‌ಡಿಟಿವಿ ವರದಿ ಮಾಡಿದೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರತ್ಯೇಕ ಸೆಂಟ್ರಲ್ ವಿಸ್ತಾ ಕಟ್ಟಡ ಅಗತ್ಯವಿತ್ತೆ ಎಂಬ ಪ್ರಶ್ನೆ ಸಹ ಇಂದು ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಇಸ್ರೇಲ್ ಮೂಲದ ಕಂಪೆನಿಯಿಂದ ಭಾರತದ 300 ಗಣ್ಯದ ಫೋನ್‌ಗಳು ಹ್ಯಾಕ್!


