ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುದನ್ನು ಕಡ್ಡಾಯ ಮಾಡಿದ್ದ ಸರ್ಕಾರ, ಅದನ್ನು ಉಲ್ಲಂಘಿಸಿದವರಿಗೆ ಭಾರಿ ಮೊತ್ತದ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ನಗರಪ್ರದೇಶಗಳಲ್ಲಿ 1,000ರೂ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ರೂ ದಂಡ ವಿಧಿಸಲಾಗಿತ್ತು. ಆದರೆ ಇದರ ವಿರುದ್ದ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಾಜ್ಯ ಸರ್ಕಾರ ನೂತನ ಆದೇಶ ಹೊರಡಿಸಿ ದಂಡದ ಪ್ರಮಾಣವನ್ನು ಇಳಿಕೆ ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ?ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ರೂ 1,000 ದಂಡ ವಿಧಿಸಲಾಗುವುದು. #ಕೋವಿಡ್19 ಸೋಂಕು ಹರಡದಂತೆ ಮಾರ್ಷಲ್ ಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಾರ್ಷಲ್ ಗಳ ಕಾರ್ಯಾಕ್ಕೆ ಅಡ್ಡಿ ಪಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.#BBMP @CMofKarnataka @BlrCityPolice pic.twitter.com/PW2MBJ3etQ
— N. Manjunatha Prasad,IAS (@BBMPCOMM) October 6, 2020
ಮಾಸ್ಕ್ ಧರಿಸದಿದ್ದರೆ ದಂಡವಾಗಿ ನಗರ ಪ್ರದೇಶದಲ್ಲಿ 1,000 ದಿಂದ 250 ರೂ.ಗೆ ಮತ್ತು ಗ್ರಾಮಿಣ ಪ್ರದೇಶದಲ್ಲಿ 500 ರೂ. ನಿಂದ 100 ರೂ. ಗೆ ಇಳಿಸಲಾಗಿದೆ.
ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ನಿಯಮಪಾಲನೆ ಕಡ್ಡಾಯ. ಸಾರ್ವಜನಿಕರ ಪ್ರತಿಕ್ರಿಯೆ, ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ, ಮಾಸ್ಕ್ ಧರಿಸದಿದ್ದಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 250 ರೂ, ಗ್ರಾಮೀಣ ಪ್ರದೇಶದಲ್ಲಿ 100 ರೂ.ಗಳಿಗೆ ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ನಿಯಮಪಾಲನೆ ಕಡ್ಡಾಯ. ಸಾರ್ವಜನಿಕರ ಪ್ರತಿಕ್ರಿಯೆ, ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ, ಮಾಸ್ಕ್ ಧರಿಸದಿದ್ದಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 250 ರೂ, ಗ್ರಾಮೀಣ ಪ್ರದೇಶದಲ್ಲಿ 100 ರೂ.ಗಳಿಗೆ ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ @BSYBJP ರವರು ಆದೇಶಿಸಿದ್ದಾರೆ. (1/2)
— CM of Karnataka (@CMofKarnataka) October 7, 2020

ಸರ್ಕಾರವು ತನ್ನ ಆದೇಶದಲ್ಲಿ, ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ದಂಡದ ಪ್ರಮಾಣದಲ್ಲಿ ಇಳಿಸಲು ತೀರ್ಮಾನಿಸಲಾಗಿದೆ ಎಂದಿದ್ದು, “ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ” ಎಂದು ತಿಳಿಸಿದೆ.
ಆದರೂ ಸಾರ್ವಜನಿಕ ವಿರೋಧ ಮುಂದುವರೆದಿದೆ. ಪತ್ರಕರ್ತ ಸಂಗಮೇಶ ಮೆಣಸಿನಕಾಯಿಯವರು ಫೇಸ್‌ಬುಕ್‌ನಲ್ಲಿ ವಿರೋಧ ದಾಖಲಿಸಿರುವುದು ಹೀಗೆ..
ವಿಡಿಯೋ ನೋಡಿ: ನಿಮಗೇ ಕೊರೊನಾ ಸೋಂಕು ಬಂದರೆ ಏನು ಮಾಡಬೇಕು? ಡಾ.ವಾಸು ಎಚ್.ವಿ ಮಾತುಗಳು


