Homeಮುಖಪುಟಪಂಜಾಬ್ ಚುನಾವಣೆ - ಬಿಜೆಪಿಗಿಂತ ಹೆಚ್ಚು ಮತ ಪಡೆದ NOTA

ಪಂಜಾಬ್ ಚುನಾವಣೆ – ಬಿಜೆಪಿಗಿಂತ ಹೆಚ್ಚು ಮತ ಪಡೆದ NOTA

ಅಮೃತಸರ ಜಿಲ್ಲೆಯಲ್ಲಿರುವ ಮುನ್ಸಿಪಲ್ ಕೌನ್ಸಿಲ್ ಕಾರ್ಪೊರೇಷನ್, ನಗರ ಪಂಚಾಯತ್ ಮತ್ತು ಪುರಸಭೆಯ ಒಟ್ಟು 40 ವಾರ್ಡ್‌ಗಳಲ್ಲಿ ಬಿಜೆಪಿಗೆ ಒಂದೇ ಸ್ಥಾನವನ್ನು ಗೆಲ್ಲಲಾಗಿಲ್ಲ

- Advertisement -
- Advertisement -

ಪಂಜಾಬ್‌‌‌‌ನಲ್ಲಿ ಬುಧವಾರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್‌ನಲ್ಲಿ ಬಿಜೆಪಿಗಿಂತ ಹೆಚ್ಚಿನ ಮತಗಳನ್ನು NOTA ಪಡೆದಿದ್ದು, ಪಕ್ಷವೂ ಭಾರಿ ಮುಖಭಂಗಕ್ಕೊಳಗಾಗಿದೆ.

ಅಮೃತಸರ ಮಹಾನಗರ ಪಾಲಿಕೆಯ ಚುನಾವಣೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಮನೋಹರ್ ಸಿಂಗ್ ಅವರಿಗೆ 52 ಮತಗಳು ಪಡೆದಿದ್ದು, NOTA 60 ಮತಗಳನ್ನು ಪಡೆದಿದೆ.

ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್‌ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ

ಇಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಗಗನ್‌ದೀಪ್ ಸಿಂಗ್ 3,223 ಮತಗಳನ್ನು ಗಳಿಸಿ ವಿಜೇತರಾಗಿದ್ದು, ಎಸ್‌ಎಡಿ ಅಭ್ಯರ್ಥಿ ಇಂದರ್ಜಿತ್ ಸಿಂಗ್ 3,088 ಮತಗಳನ್ನು ಪಡೆದರು ಎರಡನೆ ಸ್ಥಾನ ಗಳಿಸಿಕೊಂಡರು. ಅಮೃತಸರ ಜಿಲ್ಲೆಯಲ್ಲಿರುವ ಮುನ್ಸಿಪಲ್ ಕೌನ್ಸಿಲ್ ಕಾರ್ಪೊರೇಷನ್, ನಗರ ಪಂಚಾಯತ್ ಮತ್ತು ಪುರಸಭೆಯ ಒಟ್ಟು 40 ವಾರ್ಡ್‌ಗಳಲ್ಲಿ ಬಿಜೆಪಿಯು ಒಂದೇ ಸ್ಥಾನವನ್ನು ಗೆಲ್ಲಲಿಲ್ಲ.

ಫೆಬ್ರವರಿ 14 ರಂದು ರಾಜ್ಯದ 109 ನಗರ ಪಂಚಾಯತ್‌ ಹಾಗೂ ಮುನ್ಸಿಪಲ್ ಕೌನ್ಸಿಲ್‌ ಮತ್ತು 8 ಮುನಿಸಿಪಲ್ ಕಾರ್ಪೋರೇಷನ್‌‌‌ಗಳಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ ಮೊಗ್ಗ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್, ಬತಾಲ ಮತ್ತು ಬಟಿಂಡಾ ಮುನ್ಸಿಪಲ್ ಕಾರ್ಪೋರೇಷನ್‌ಗಳನ್ನು 7 ಮುನ್ಸಿಪಲ್ ಕಾರ್ಪೋರೇಷನ್‌ಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮತ್ತೊಂದು ಕಾರ್ಪೋರೇಷನ್‌‌‌ಗಳಾದ ಎಸ್‌ಎಎಸ್‌ ನಗರದ ಮತ ಎಣಿಕೆಯು ಫೆಬ್ರವರಿ 18 ರಲ್ಲಿ ನಡೆಯುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಸ್ಥಳೀಯ ಚುನಾವಣೆ – ಕಾಂಗ್ರೆಸ್‌ಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮಸ್ತೆ
    ನನ್ನ ಹೆಸರು ಎಂ.ನಾಗೇಂದ್ರಕುಮಾರ್
    ನಿಮ್ಮ ಪತ್ರಿಕೆ ಪ್ರತಿನಿಧಿ ಹಾಗೂ ವರದಿಗಾರರಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ.
    ನಿಮ್ಮ ಜೊತೆ ಮಾತನಾಡಲು ನಿಮ್ಮ ದೂರವಾಣಿ ಸಂಖ್ಯೆ ಮೆಸೇಜ್ ಮಾಡಿ
    ನನ್ನ ಮೊಬೈಲ್‌ ಸಂಖ್ಯೆ
    ೯೯೬೪೩೨೬೪೬೬

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...