ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಫತುಹಿವಾಲಾ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದ್ದು, 27 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ | ಪಟಾಕಿ ಘಟಕದಲ್ಲಿ
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸುಮಾರು 40 ಕಾರ್ಮಿಕರು ಘಟಕದಲ್ಲಿದ್ದರು ಎಂದು ತಿಳಿದು ಬಂದಿದ್ದು, ಅವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದಾರೆ ಎಂದು ವರದಿ ತಿಳಿಸಿದೆ. ಸ್ಫೋಟದಿಂದಾಗಿ ಕಾರ್ಖಾನೆಯ ಕಟ್ಟಡ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಆ ಸಮಯದಲ್ಲಿ ಕಾರ್ಮಿಕರು ಪಟಾಕಿಗಳ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ನಲ್ಲಿ ತೊಡಗಿದ್ದರು.
ರಾತ್ರಿ ಪಾಳಿ ಮುಗಿಸಿದ ನಂತರ ಹೆಚ್ಚಿನವರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ ಜೋರಾದ ಸ್ಫೋಟ ಸಂಭವಿಸಿ, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ. ಕಟ್ಟಡ ಕುಸಿತಕ್ಕೆ ಅನಿರ್ದಿಷ್ಟ ಸ್ಫೋಟವೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ, ಅವಶೇಷಗಳಿಂದ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ ಮತ್ತು 27 ಮಂದಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬಟಿಂಡಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಖಾನೆಯು ಪರವಾನಗಿ ಪಡೆದು ಕಾರ್ಯಚರಿಸುತ್ತಿತ್ತು ಎಂದು ಅಧಿಕಾರಿ ಹೇಳಿದ್ದು, ವಸತಿ ಪ್ರದೇಶಗಳಿಂದ ದೂರದಲ್ಲಿರುವ ಕೃಷಿ ಹೊಲಗಳ ಮಧ್ಯ ಇತ್ತು ಎಂದು ಅವರು ಹೇಳಿದ್ದಾರೆ. “ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ ತುರ್ತು ಸೇವೆಗಳು ಮತ್ತು ರಕ್ಷಣಾ ತಂಡಗಳು ಗಂಟೆಗಟ್ಟಲೆ ಸ್ಥಳದಲ್ಲಿಯೇ ಇದ್ದು, ಅವಶೇಷಗಳನ್ನು ತೆರವುಗೊಳಿಸುವ ಮತ್ತು ಇನ್ನೂ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರಿಸಿವೆ ಎಂದು TNIE ವರದಿ ತಿಳಿಸಿದೆ.
ಮುಕ್ತ್ಸರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಚೌಧರಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರ್ಖಾನೆಯ ಪಟಾಕಿ ಉತ್ಪಾದನಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ. “ಸ್ಫೋಟದಿಂದಾಗಿ, ಕಟ್ಟಡ ಕುಸಿದಿದೆ. ಪ್ರಾಥಮಿಕವಾಗಿ, ಬೆಂಕಿಗಿಂತ ಹೆಚ್ಚಾಗಿ ಕಟ್ಟಡದ ಹಾನಿಯಿಂದ ಸಾವು ಸಂಭವಿಸಿದೆ ಎಂದು ತೋರುತ್ತದೆ” ಎಂದು ಅವರು ಹೇಳಿದ್ದಾರೆ. ಪಂಜಾಬ್ | ಪಟಾಕಿ ಘಟಕದಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ದಾಳಿಗೆ ಕೋಮು ಬಣ್ಣ ಬಳಿದು ವಿವಾದ ಸೃಷ್ಟಿಸಿದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್
ಪಹಲ್ಗಾಮ್ ದಾಳಿಗೆ ಕೋಮು ಬಣ್ಣ ಬಳಿದು ವಿವಾದ ಸೃಷ್ಟಿಸಿದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್

