ಪಂಜಾಬ್‌ನಲ್ಲಿ ಪೌರ ಕಾರ್ಮಿಕರೊಬ್ಬರಿಗೆ ಸ್ಥಳೀಯ ನಿವಾಸಿಗಳು ಹೂವಿನ ಮತ್ತು ನೋಟಿನ ಹಾರ ಹಾಕಿ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ.
ಕೊರೊನ ಭಯದಿಂದ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಿದ್ದರಿಂದ ಎಲ್ಲರೂ ಮನೆಯೊಳಗಡೆಯೇ ಇರುವಂತಾಗಿದೆ. ಆದರೆ ಆರೋಗ್ಯ ಕಾರ್ಯರರ್ತರಂತೆ ದಣಿವಿಲ್ಲದೆ ಪೌರ ಕಾರ್ಮಿಕರು ಕೂಡಾ ಅಪಾಯವನ್ನೆದುರಿಸಿ ದುಡಿಯುತ್ತಿದ್ದಾರೆ.
ಹೀಗೆ ದುಡಿಯುತ್ತಿರುವ ಪೌರ ಕಾರ್ಮಿಕರೊಬ್ಬರಿಗೆ ಪಂಜಾಬಿನ ಪಟಿಯಾಲದ ನಾಭಾ ನಿವಾಸಿಗಳು ಬಾಲ್ಕನಿಯಿಂದ ಚಪ್ಪಾಳೆ ತಟ್ಟಿ ಹೂಗಳ ಎಸಳುಗಳನ್ನು ಎಸೆದು ಗೌರವ ಸೂಚಿಸಿದರಲ್ಲದೆ, ಮಾಸ್ಕ್ ಧರಿಸಿದ ವ್ಯಕ್ತಿಗಳು ಬಂದು ಅವರಿಗೆ ನೋಟಿನ ಹಾರಗಳನ್ನು ಹಾಕಿ ಬೆನ್ನು ತಟ್ಟಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಪಂಜಾಬ್ ನಲ್ಲೊಂದು ಮಾನವೀಯ ಘಟನೆ ಜರುಗಿದೆ.ಕೊರೊನಾ ಕಾಲದಲ್ಲಿಯೂ ದಿನನಿತ್ಯ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಪಟಿಯಾಲದ ರಸ್ತೆಯೊಂದರ ಜನರು ಹೂವಿನ ಹಾರ, ದುಡ್ಡಿನ ಹಾರ ಹಾಕಿ ಅವರ ಕರ್ತವ್ಯವನ್ನು ಪ್ರೀತಿಯಿಂದ ಸ್ಮರಿಸಿದ್ದಾರೆ. ವಿಡಿಯೋ ನೋಡಿ..ಈ ಮಾನವೀಯತೆ ಪ್ರಪಂಚಕ್ಕೆಲ್ಲಾ ಹರಡಲು ಷೇರ್ ಮಾಡಿ.
Posted by Naanu Gauri on Tuesday, March 31, 2020
ವಾರಗಳ ಹಿಂದೆ ಪ್ರಧಾನಿ ಮೋದಿಯವರು ಕೊರೊನ ಬಿಕ್ಕಟ್ಟಿನಲ್ಲಿ ದುಡಿಯುವ ಜನರಿಗೆ ಜನತಾ ಕರ್ಫ್ಯೂ ದಿನ ಸಂಜೆ ಅಭಿನಂದನೆ ಸಲ್ಲಿಸಲು ಹೇಳಿದ್ದರು. ಹೆಚ್ಚಿನ ಜನರು ಇದಕ್ಕೆ ಸ್ಪಂದಿಸಿದ್ದರೂ ಹುಚ್ಚು ಅಭಿಮಾನಿಗಳು ರಸ್ತೆಯಲ್ಲಿ ಮೆರವಣಿಗೆ ನಡೆಸಿ ಚಪ್ಪಾಳೆ ಹೊಡೆದ್ದರಿಂದ ಜಗತ್ತಿನಾದ್ಯಂತ ನಗೆಪಾಟಲಿಗೀಡಾಗಿದ್ದರು.
ಆದರೆ ಪಂಜಾಬಿನ ಈ ನಿವಾಸಿಗಳ ಕೆಲಸಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ನಗರಗಳನ್ನು ಸ್ವಚ್ಛವಾಗಿಟ್ಟು ರೋಗಗಳು ವೇಗವಾಗಿ ಹರಡದಂತೆ ದುಡಿಯುತ್ತಿರುವ ಪೌರಕಾರ್ಮಿಕರು ಕೂಡ ಸಮಾಜದ ವೈದ್ಯರು ಎಂಬುದನ್ನು ನಿಜವಾಗಿಸಿದ್ದಾರೆ. ಅವರ ಈ ನಡೆ ಇತರರಿಗೆ ಮಾದರಿಯಾಗಿದೆ.


