Homeಮುಖಪುಟಉತ್ತರಾಖಂಡ: ಆರು ತಿಂಗಳಲ್ಲಿ ಮೂರು ಮುಖ್ಯಮಂತ್ರಿ; ಪುಷ್ಕರ್‌ ಸಿಂಗ್ ಧಾಮಿ ಮುಂದಿನ ಸಿಎಂ!

ಉತ್ತರಾಖಂಡ: ಆರು ತಿಂಗಳಲ್ಲಿ ಮೂರು ಮುಖ್ಯಮಂತ್ರಿ; ಪುಷ್ಕರ್‌ ಸಿಂಗ್ ಧಾಮಿ ಮುಂದಿನ ಸಿಎಂ!

- Advertisement -

ಉತ್ತರಾಖಂಡ್‌ನಲ್ಲಿ ಮುಖ್ಯಮಂತ್ರಿ ತಿರಥ್‌ ಸಿಂಗ್ ರಾವತ್ ರಾಜೀನಾಮೆಯಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಬಗೆಹರಿಯುವ ಹಂತಕ್ಕೆ ಬಂದಿದ್ದು ಬಿಜೆಪಿ ಹೊಸ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್‌ ಇಂದು ಮಧ್ಯಾಹ್ನ ಘೋಷಿಸಿದೆ. ಖತಿಮಾ ಕ್ಷೇತ್ರದ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಇಂದು ಮಧ್ಯಾಹ್ನ ನಡೆದ ಬಿಜೆಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ. ರಾಜ್ಯದ ಜನರ ಹಿತಕ್ಕೆ ಕೆಲಸ ಮಾಡುವುದಾಗಿ ಪುಷ್ಕರ್‌ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ನಿವೃತ್ತ ಯೋಧನ ಮಗನಾಗಿ ನನಗೆ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಲಭಿಸಿರುವುದು ನನ್ನ ಅದೃಷ್ಟ. ನಮ್ಮ ಮುಂದಿರುವ ಸವಾಲುಗಳನ್ನು ಸ್ವೀಕರಿಸಿ ಎಲ್ಲರ ಸಹಾಯ ಪಡೆದು ರಾಜ್ಯದ ಅಭಿವೃದ್ಧಿ ಕೆಲಸ ಮಾಡುವುದಾಗಿ ಅವರು   ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ತಿರಥ್ ಸಿಂಗ್ ರಾವತ್ ಶುಕ್ರವಾರ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಶನಿವಾರ ಕೇಂದ್ರ ಮಂತ್ರಿ ನರೇಂದ್ರ ಸಿಂಗ್‌ ತೋಮರ್ ನೇತೃತ್ವದಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

2022ರಲ್ಲಿ ಉತ್ತರಾಖಂಡ್‌ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಅಧಿಕಾರಾವಧಿ 1 ವರ್ಷಕ್ಕಿಂತಲೂ ಕಡಿಮೆ ಇದೆ. ಉತ್ತರಾಖಂಡ್‌ನಲ್ಲಿ ಕಳೆದ 5 ವರ್ಷದಲ್ಲಿ 4 ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಇವರಲ್ಲಿ ಇಬ್ಬರು ಮುಖ್ಯಮಂತ್ರಿಗಳು 1 ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಇದನ್ನೂ ಓದಿ: ಅಧಿಕಾರ ವಹಿಸಿದ ಕೆಲವೇ ತಿಂಗಳಲ್ಲಿ ರಾಜೀನಾಮೆಗೆ ಮುಂದಾದ ಉತ್ತರಾಖಂಡ ಸಿಎಂ!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

0
ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳಿಗಾಗಿ ಮಾಡಿಕೊಂಡ 2-ಬಿಲಿಯನ್ ಡಾಲರ್‌‌ ಪ್ಯಾಕೇಜ್‌ನ ಭಾಗವಾಗಿ 2017ರಲ್ಲಿ ಭಾರತ ಸರ್ಕಾರ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನೂ ಖರೀದಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಫೆಡರಲ್ ಬ್ಯೂರೋ...
Wordpress Social Share Plugin powered by Ultimatelysocial