ಸಿಬ್ಬಂದಿ ಕೊರತೆಯಿಂದಾಗಿ ಅಸಮರ್ಪಕ ವಿಶ್ರಾಂತಿ ವ್ಯವಸ್ಥೆಯಿದೆ ಎಂದು ಹೇಳಿಕೊಂಡಿದ್ದ ರೈಲ್ವೆ ಲೋಕೋ ಪೈಲಟ್‌ಗಳನ್ನು ಶುಕ್ರವಾರ ಭೇಟಿಯಾದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅವರ ಸಮಸ್ಯೆ ಆಲಿಸಿದ್ದಾರೆ.
ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ದೇಶದ ವಿವಿಧ ಭಾಗಗಳ ಸುಮಾರು 50 ಲೋಕೋ ಪೈಲಟ್‌ಗಳನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದು, ಲೋಕೋ ಪೈಲಟ್‌ಗಳನ್ನು ತಮ್ಮ ಸಮಸ್ಯೆಗಳನ್ನು ವಿವರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
नेता विपक्ष श्री @RahulGandhi ने नई दिल्ली रेलवे स्टेशन पर लोको पायलट्स से मुलाकात की।
ये लोको पायलट देश की Life line कही जाने वाली रेलवे की रीढ़ हैं।
इनके जीवन को सरल और सुरक्षित करना रेलवे सुरक्षा की ओर हमारा एक मजबूत कदम होगा।
📍 नई दिल्ली pic.twitter.com/hvZyYZJYCw
— Congress (@INCIndia) July 5, 2024
ಬಹಳ ದೂರದ ಪ್ರದೇಶಗಳಿಗೆ ರೈಲು ಗಾಡಿಗಳನ್ನು ಓಡಿಸುವ ಲೋಕೋ ಪೈಲಟ್‌ಗಳಿಗೆ ಸರಿಯಾಗಿ ವಿಶ್ರಾಂತಿ ಸಿಗುತ್ತಿಲ್ಲ. ಇದರಿಂದ ಅವರು ಹೆಚ್ಚಿನ ಒತ್ತಡ ಮತ್ತು ಏಕಾಗ್ರತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತದ ಸೇರಿದಂತೆ ಇತರ ಹಲವು ರೈಲು ಅಪಘಾತಗಳ ಪ್ರಕರಣಗಳಲ್ಲಿ ರೈಲ್ವೆ ಇಲಾಖೆ ಈ ವಿಚಾರವನ್ನು ಒಪ್ಪಿಕೊಂಡಿದೆ. ಲೋಕೋ ಪೈಲಟ್‌ಗಳು ಸಾಪ್ತಾಹಿಕ 46 ಗಂಟೆಗಳ ವಿಶ್ರಾಂತಿಯನ್ನು ಕೋರಿದ್ದಾರೆ. ಅಂದರೆ, ಶುಕ್ರವಾರ ಮಧ್ಯಾಹ್ನ ಮನೆಗೆ ಹಿಂದಿರುಗುವ ರೈಲು ಚಾಲಕ, ಭಾನುವಾರ ಬೆಳಿಗ್ಗೆಯ ನಂತರ ಕರ್ತವ್ಯಕ್ಕೆ ವಾಪಾಸಾಗಬೇಕು ಎಂಬುವುದು ಅವರ ಬೇಡಿಕೆಯಾಗಿದೆ.
ರೈಲ್ವೆ ಕಾಯ್ದೆ-1989 ಮತ್ತು ಇತರ ನಿಯಮಗಳು ಲೋಕೋ ಪೈಲಟ್‌ಗಳಿಗೆ ವಾರಕ್ಕೆ 30+16 ಗಂಟೆಗಳ ವಿಶ್ರಾಂತಿ ನೀಡುವಂತೆ ಹೇಳುತ್ತದೆ. ಆದರೆ, ಅದನ್ನು ಕಾರ್ಯಗತಗೊಳಿಸುತ್ತಿಲ್ಲ ಎಂಬ ಆರೋಪಗಳಿಗೆ. ವಿಮಾನದ ಪೈಲಟ್‌ಗಳು ಸಹ ಸಾಮಾನ್ಯವಾಗಿ ಇಷ್ಟು ವಿಶ್ರಾಂತಿ ಪಡೆಯುತ್ತಾರೆ.
ಸತತ ಎರಡು ರಾತ್ರಿ ಕರ್ತವ್ಯದ ನಂತರ ಒಂದು ರಾತ್ರಿ ವಿಶ್ರಾಂತಿ ನೀಡಬೇಕು. ರೈಲುಗಳಲ್ಲಿ ಚಾಲಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಲೋಕೋ ಪೈಲಟ್‌ಗಳು ಒತ್ತಾಯಿಸಿದ್ದಾರೆ.
ಲೋಕೋ ಪೈಲಟ್‌ಗಳ ನೇಮಕಾತಿಯನ್ನು ಸರ್ಕಾರ ಸ್ಥಗಿತಗೊಳಿಸಿರುವುದರಿಂದ ಸಿಬ್ಬಂದಿ ಕೊರತೆಯಿಂದಾಗಿ ವಿಶ್ರಾಂತಿ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
“ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೆ ನೇಮಕಾತಿ ಮಂಡಳಿಯು ಹತ್ತು ಸಾವಿರ ಖಾಲಿ ಹುದ್ದೆಗಳಿದ್ದರೂ ಒಬ್ಬರೇ ಒಬ್ಬರು ಲೋಕೋ ಪೈಲಟ್ ಅನ್ನು ನೇಮಕ ಮಾಡಿಲ್ಲ. ಈ ಉದ್ದೇಶಪೂರ್ವಕ ಕ್ರಮವು ರೈಲ್ವೆಯನ್ನು ಖಾಸಗೀಕರಣಗೊಳಿಸುವ ಮೋದಿ ಸರ್ಕಾರದ ಹುನ್ನಾರವಾಗಿದೆ ಎಂದು ಪೈಲಟ್‌ಗಳು ತಮ್ಮ ಭಯವನ್ನು ವ್ಯಕ್ತಪಡಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
“ರೈಲ್ವೆಯ ಖಾಸಗೀಕರಣ ಮತ್ತು ನೇಮಕಾತಿ ಸ್ಥಗಿತ’ದ ವಿಷಯವನ್ನು ಲೋಕಸಭೆಯಲ್ಲಿ ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಮತ್ತೊಮ್ಮೆ ಈ ವಿಷಯದಲ್ಲಿ ಧ್ವನಿ ಎತ್ತಲಾಗುವುದು. ನಿಯಮದ ಪ್ರಕಾರ ವಿಶ್ರಾಂತಿ ಸಿಗಬೇಕು ಎಂಬ ನಿಮ್ಮ ಬೇಡಿಕೆಯನ್ನು ಬೆಂಬಲಿಸುತ್ತೇನೆ” ಎಂದು ರಾಹುಲ್ ಗಾಂಧಿ ಲೋಕೋ ಪೈಲಟ್‌ಗಳಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ದೆಹಲಿಯಲ್ಲಿ ಗಾರೆ ಕಾರ್ಮಿಕರನ್ನು ಭೇಟಿಯಾಗಿ, ಅವರ ಜೊತೆ ಕೆಲಸ ಮಾಡಿ ರಾಹುಲ್ ಗಾಂಧಿ ಸಮಸ್ಯೆ ಆಲಿಸಿದ್ದರು.
ಇದನ್ನೂ ಓದಿ : ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷನ ಹತ್ಯೆ : 8 ಜನರ ಬಂಧನ


