Homeಕರ್ನಾಟಕಮಳೆಯ ಅಬ್ಬರ: ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆ

ಮಳೆಯ ಅಬ್ಬರ: ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆ

- Advertisement -
- Advertisement -

ಕಳೆದ ಒಂದು ವಾರದಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುರುವಾರ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಿದ್ದು, ದೀಪಾವಳಿ ಹಬ್ಬದ ಪಟಾಕಿಗಳ ಸದ್ದಿಗೆ ವಿರಾಮ ನೀಡಿದೆ.

ಬೆಂಗಳೂರಿನಲ್ಲಿ ಗುರುವಾರ ಸಂಜೆ 06:30 ಪ್ರಾರಂಭವಾದ ಮಳೆ ರಾತ್ರಿ ಹತ್ತುಗಂಟೆಯವರೆಗೂ ಧಾರಾಕಾರವಾಗಿ ಸುರಿದಿದ್ದು, ನಂತರ ಕೂಡಾ ಮುಂಜಾನೆವರೆಗೂ ಸುರಿಯುತ್ತಲೆ ಇತ್ತು.

ಇದನ್ನೂ  ಓದಿ: 12 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆ: ಯಾರ್ಯಾರು, ಎಷ್ಟೆಷ್ಟು?

ಮಳೆಯಿಂದಾಗಿ ನಗರದ ವಿವಿಧ ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದವು. ರಸ್ತೆಗಳಲ್ಲಿ ಒಂದು ಅಡಿಗಿಂತಲೂ ಹೆಚ್ಚು ನೀರು ಹರಿದು, ವಾಹನ ಸಂಚಾರವೂ ಅಸ್ಥವ್ಯವಸ್ಥವಾಗಿದ್ದಲ್ಲದೆ, ಮಳೆ ನೀರು ಕಸವನ್ನೂ ರಸ್ತೆಗೆ ತಂದು ಹಾಕಿದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿಯೂ ಭಾರೀ ಮಳೆಯಾಗಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಅಧಿಕ ಮಳೆಯಾಗಿದೆ.

ಮಳೆಯ ಅಬ್ಬರ ಇನ್ನೂ ನಾಲ್ಕು ದಿನ ಮುಂದುವರೆಯಲಿದ್ದು, ನವೆಂಬರ್ 9 ರವೆರೆಗೂ ಈ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಬೀದರ್‌, ಬಾಗಲಕೋಟೆ, ಹಾವೇರಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಇಲಾಖೆ ಹೇಳಿದೆ.

ಇದನ್ನೂ  ಓದಿ: ಚುನಾವಣೆಯಲ್ಲಿ BJP ಸೋಲಿಸಿದರೆ ಇಂಧನ ದರ ಇಳಿಯುತ್ತದೆ ಎಂಬ ಪಾಠ ಕಲಿಸಿಕೊಟ್ಟ ಮೋದಿ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read