ರಾಜಸ್ಥಾನದ ಜೈಪುರ ಸಮೀಪದ ಹಳ್ಳಿಯಲ್ಲಿ ಆಗಸ್ಟ್ 10 ರಂದು ಸಜೀವ ದಹನಗೊಂಡಿದ್ದ ಮಹಿಳಾ ಶಿಕ್ಷಕಿ ಮಂಗಳವಾರ ತಡರಾತ್ರಿ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯ ವೀಡಿಯೊಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ರಾಜ್ಯದಲ್ಲಿ ಪೊಲೀಸರು ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಮೂಲಗಳ ಪ್ರಕಾರ, ಜೈಪುರದಿಂದ ಸುಮಾರು 80 ಕಿಮೀ ದೂರದಲ್ಲಿರುವ ರೈಸರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದವರನ್ನು ವೀಣಾ ಸ್ಮಾರಕ ಶಾಲೆಯ ಶಿಕ್ಷಕಿಯಾಗಿದ್ದ ಅನಿತಾ ರೇಗರ್ (32) ಎಂದು ಗುರುತಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಗಸ್ಟ್ 10 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅನಿತಾ ತನ್ನ ಆರು ವರ್ಷದ ಮಗನ ಜೊತೆ ಶಾಲೆಗೆ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಅವರನ್ನು ಸುತ್ತುವರೆದಿದ್ದರು. ತನ್ನನ್ನು ರಕ್ಷಿಸಿಕೊಳ್ಳಲು ಅನಿತಾ ಅವರು ಕಾಲುರಾಮ್ ರೇಗರ್ ಎಂಬ ವ್ಯಕ್ತಿಯ ಮನೆಗೆ ಪ್ರವೇಶಿಸಿ ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿದ್ದರು. ಆದರೂ ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಆರೋಪಿಗಳು ಅನಿತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ದಲಿತ ಬಾಲನಕ ಹತ್ಯೆ ಹಿನ್ನೆಲೆ: ತನ್ನ ತಂದೆ ಎದುರಿಸಿದ ಜಾತಿ ತಾರತಮ್ಯ ನೆನಪಿಸಿಕೊಂಡ ಮಾಜಿ ಸ್ಪೀಕರ್ ಮೀರಾ ಕುಮಾರ್
ಮಹಿಳೆ ನೋವಿನಿಂದ ಕಿರುಚುತ್ತಲೇ ಇದ್ದಾಗ, ಸುತ್ತಮುತ್ತಲಿನ ಜನರು ಆಕೆಯನ್ನು ರಕ್ಷಿಸುವ ಬದಲು ಘಟನೆಯನ್ನು ಚಿತ್ರೀಕರಿಸುತ್ತಿದ್ದರು.
Another gruesome incident has come to light from Jaipur, Rajasthan, the Dalit teacher was burnt alive, the woman has died during treatment. #DalitLivesMatter pic.twitter.com/c888SAOQN0
— Susheel shinde (@Shinde_Voice) August 17, 2022
ಇದನ್ನೂ ಓದಿ: ರಾಜಸ್ಥಾನ: ಶಿಕ್ಷಕನಿಂದ ದಲಿತ ಬಾಲಕನ ಹತ್ಯೆ ಪ್ರಕರಣ; ರಾಜಕೀಯ ಬಿಕ್ಕಟ್ಟಿನಲ್ಲಿ ಸಿಎಂ ಗೆಹ್ಲೋಟ್
ಘಟನೆಯ ಬಗ್ಗೆ ಮಾಹಿತಿ ಪಡೆದ ಮಹಿಳೆಯ ಪತಿ ತಾರಾಚಂದ್ ತನ್ನ ಕುಟುಂಬ ಸದಸ್ಯರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. 70 ರಷ್ಟು ಸುಟ್ಟಗಾಯಗಳೊಂದಿಗೆ ಅನಿತಾ ಅವರನ್ನು ಜಮ್ವರಮ್‌ಗಢದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಅವರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕಳುಹಿಸಲಾಯಿದೆ. ಏಳು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅನಿತಾ ಅವರು ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, ಅನಿತಾ ಅವರು ಆರೋಪಿಗಳಿಗೆ 2.5 ಲಕ್ಷ ರೂ. ಸಾಲ ನೀಡಿದ್ದರು. ನಂತರ ಅವರು ಆರೋಪಿಗಳಿಂದ ಹಣ ವಾಪಸ್ ಕೇಳಿದಾಗ ಆಕೆಯನ್ನು ನಿಂದಿಸಿ ಥಳಿಸಿದ್ದರೆ. ಈ ಬಗ್ಗೆ ಅನಿತಾ ಅವರು ಮೇ 7 ರಂದು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಆರೋಪಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎನ್ನಲಾಗಿದೆ. ಆರೋಪಿಗಳು ತಮ್ಮ ಸಂಬಂಧಿಕರು ಎಂದು ಅನಿತಾ ಅವರ ಪತಿ ತಾರಾಚಂದ್ ಹೇಳಿಕೊಂಡಿದ್ದಾರೆ.
ಆಗಸ್ಟ್ 10 ರಂದು ಅನಿತಾ ಅವರಿಗೆ ಬೆಂಕಿ ಹಚ್ಚಿದ ವೀಡಿಯೊಗಳನ್ನು ಚಿತ್ರೀಕರಿಸಿದಾಗ, ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಪೊಲೀಸರು ಜನರನ್ನು ಕೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಡಿಎನ್‌ಎ ತಿಳಿಸಿವೆ. ಆದರೆ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದ ನಂತರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ರಾಜಸ್ಥಾನ: ಪಾತ್ರೆ ಮುಟ್ಟಿದ ದಲಿತ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕ; ಎಫ್‌ಐಆರ್ ದಾಖಲು
ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಮಹಿಳೆಯ ಸಾವಿನ ನಂತರವೂ ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಎಎಸ್ಪಿ ಧರ್ಮೇಂದ್ರ ಯಾದವ್ ತಿಳಿಸಿದ್ದಾರೆ.


