ತ್ವರಿತ ಮತ್ತು ಯಾವುದೆ ಕಿರಿಕಿರಿಯಿಲ್ಲದ ಪ್ರಕ್ರಿಯೆಯ ಮೂಲಕ ಸಾಲ ನೀಡುತ್ತೆವೆಂದು ಭರವಸೆ ನೀಡುವ ಅನಧೀಕೃತ ಡಿಜಿಟಲ್ ಫ್ಲಾಟ್‌ಫಾರ್ಮ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆರ್‌ಬಿಐ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತ್ವರಿತ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಜನರು ಡಿಜಿಟಲ್ ಲೆಂಡಿಂಗ್ ಹಗರಣಕ್ಕೆ ಬಲಿಯಾಗುತ್ತಿದ್ದಾರೆ ಎಂದಿದೆ.
ಈ ಡಿಜಿಟಲ್ ಫ್ಲಾಟ್‌ಫಾರ್ಮ್ ಮೂಲಕ ಸಾಲ ಪಡೆದುಕೊಂಡಿದ್ದ ಮೂವರು ಸಾಲ ವಸೂಲಿಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು, ಈ ಹಿನ್ನಲೆಯಲ್ಲಿ ದೆಹಲಿ, ಗುರುಗ್ರಾಮ್ ಮತ್ತು ಹೈದರಾಬಾದ್ ನಿಂದ 17 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಲಾಕ್‌ಡೌನ್ ಎಫೆಕ್ಟ್: ಆಹಾರಕ್ಕಾಗಿ ಸಾಲ ಮಾಡಿದ 11 ರಾಜ್ಯಗಳ 45% ಜನ!
“ತ್ವರಿತ ಮತ್ತು ಕಿರಿಕಿರಿ ಮುಕ್ತ ರೀತಿಯಲ್ಲಿ ಸಾಲದ ಭರವಸೆ ನೀಡುವ ಅನಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಕಿರುಕುಳಕ್ಕೆ ಬಲಿಯಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಈ ಕಂಪೆನಿಗಳು ವಿಪರೀತ ಬಡ್ಡಿದರಗಳು ಮತ್ತು ಸಾಲಗಾರರಿಂದ ಹೆಚ್ಚುವರಿ ಗುಪ್ತ ಶುಲ್ಕಗಳನ್ನು ಸಹ ಪಡೆಯುತ್ತಾರೆ” ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ಈ ಕಂಪೆನಿಗಳು ಸಾಲ ವಸೂಲಾತಿಗೆ ಒಪ್ಪಿಕೊಳ್ಳಲಾಗದಂತಹ ಮಾರ್ಗವನ್ನು ಬಳಸುತ್ತದೆ ಹಾಗೂ ಸಾಲಗಾರರ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಪಡೆದು ಒಪ್ಪಂದದ ದುರುಪಯೋಗ ಮಾಡುತ್ತದೆ” ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿರುವ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ
ಬ್ಯಾಂಕುಗಳು, ಆರ್‌ಬಿಐನಲ್ಲಿ ನೋಂದಾಯಿಸಲ್ಪಟ್ಟ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ರಾಜ್ಯ ಸರ್ಕಾರಗಳಿಂದ ನಿಯಂತ್ರಿಸಲ್ಪಡುವ ಸಂಸ್ಥೆಗಳಿಂದ ಕಾನೂನುಬದ್ಧ ಸಾಲಗಳನ್ನು ನೀಡಬಹುದಾಗಿದೆ. ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಲ ನೀಡುವ ಕಂಪೆನಿಗಳ ಹಿನ್ನೆಲೆಯನ್ನು ಪರಿಶೀಲಿಸುವಂತೆ ಆರ್‌ಬಿಐ ಹೇಳಿದೆ.
ಯಾವುದೇ ಅನಧಿಕೃತ ವ್ಯಕ್ತಿಗಳು ಅಥವಾ ಅಪ್ಲಿಕೇಶನ್‌ಗಳೊಂದಿಗೆ ಕೆವೈಸಿಯ ನಕಲನ್ನು ಹಂಚಿಕೊಳ್ಳಬೇಡಿ ಎಂದು ಆರ್‌ಬಿಐ ಹೇಳಿದ್ದು, ನಕಲಿ ಅಪ್ಲಿಕೇಶನ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್‌ಗಳ ಬಗ್ಗೆ https://sachet.rbi.org.in/ ನಲ್ಲಿ ದೂರು ನೀಡುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ: ಜಿಎಸ್‌ಟಿ ಬಿಕ್ಕಟ್ಟು: 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಕೇಂದ್ರ!


