Homeಚಳವಳಿಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು...

ಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು…

ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ.

- Advertisement -
- Advertisement -

‘ಆರ್ ಸಿ ಇ ಪಿ’ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ) ಒಪ್ಪಂದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ 2019ರಲ್ಲಿ ಕೇಂದ್ರ ಸರಕಾರ ತಯಾರಾಗಿದ್ದು, ಅದಕ್ಕಾಗಿ ದೇಶಾದ್ಯಂತ 24.10.2019ರಂದು ರೈತರು ಮತ್ತು ಈ ಒಪ್ಪಂದಕ್ಕೆ ವಿರೋಧವಾಗಿರುವವರಿಂದ ಪ್ರತಿಭಟನೆಗಳು ನಡೆದವು. ಅದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ 25.10.2019ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು, ಅದರ ಸಂಪೂರ್ಣ ಪಾಠ ‘ನಮ್ಮಬನವಾಸಿ’ಯಲ್ಲಿಯೂ ಪ್ರಕಟವಾಗಿದೆ. ನಮ್ಮ ಓದಿಗಾಗಿ ಇಲ್ಲಿದೆ.

ಮೊದಲೊಂದು ಪ್ರಸಂಗ ನೆನಪಿಸುವೆ. “ವಿದೇಶಿ ವಸ್ತ್ರ ಸುಡಿ” ಎಂಬ ಗಾಂಧಿ ಕರೆಯಿಂದಾಗಿ ಇಂಗ್ಲೆಂಡಿನ ಲಂಕಾಶೈರ್‌ನ ಬಟ್ಟೆ ಗಿರಣಿಗಳು ಮುಚ್ಚುವಂತಾಗಿ ಅಲ್ಲಿನ ಕಾರ್ಮಿಕರು ಗಾಂಧೀಜಿಯನ್ನು 26-09-1931 ರಲ್ಲಿ ಸುತ್ತುವರಿದು ತಮ್ಮ ಕಷ್ಟ ಹೇಳಿಕೊಂಡಾಗ ಗಾಂಧಿ ಆಡಿದ ನುಡಿಗಳು ಹೀಗಿವೆ:

“ಇಲ್ಲಿನ ನಿರುದ್ಯೋಗ ಕಂಡು ನನಗೆ ನೋವಾಗಿದೆ, ಆದರೆ ಇಲ್ಲಿ ಹಸಿವು ಮತ್ತು ಅರೆಹೊಟ್ಟೆ ಬದುಕು ಇಲ್ಲ. ಇಂಡಿಯಾದಲ್ಲಿ ನಮಗೆ ಎರಡೂ ಇದೆ. ನೀವು ಇಂಡಿಯಾದ ಹಳ್ಳಿಗಳಿಗೆ ಹೋಗಿ ನೋಡಿದರೆ ಆ ಹಳ್ಳಿಗಳ ಕಣ್ಣಲ್ಲಿ ತೀವ್ರ ಹತಾಶೆ ಕಾಣುತ್ತೆ. ಅಲ್ಲಿ ಕಾಣುವುದು ಅರೆಹೊಟ್ಟೆಯ ಎಲುಬು ಗೂಡುಗಳು, ಜೀವಂತ ಶವಗಳು. ಇವುಗಳಿಗೆ ಕೆಲಸದ ರೂಪದಲ್ಲಿ ಅನ್ನ ಕೊಟ್ಟು ಜೀವ ತುಂಬಿದರೆ ಆ ಭಾರತ ಜಗತ್ತಿಗೆ ನೆರವಾಗುತ್ತದೆ. ಈವತ್ತು ಭಾರತ ಶಾಪಕ್ಕೊಳಗಾಗಿದೆ. ನನ್ನ ದೇಶದಲ್ಲಿ, “ಈ ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ” ಅನ್ನುವ ಗುಂಪೂ ಇದೆ.  ನಾನೊಂದು ಮಾನವೀಯ ವಿಧಾನವನ್ನು ಕಂಡುಕೊಂಡೆ. ಅದೇನೆಂದರೆ, ಅವರಿಗೆ ಗೊತ್ತಿರುವ ಕೆಲಸವನ್ನು ಕೊಡೋದು. ಅವರು ಅದನ್ನು ತಮ್ಮ ಜೋಪಡಿಯಲ್ಲಿ ಮಾಡುವಂತಹುದು,  ದೊಡ್ಡ ಬಂಡವಾಳ ಅಗತ್ಯ ಇಲ್ಲದ್ದು. ಈ ಉತ್ಪನ್ನಗಳ ಮಾರಾಟ ಸುಲಭವಾಗಿರುವುದು– ಅಂಥದು. ಈ ಒಂದು ಧ್ಯೇಯ ಲಂಕಾಶೈರ್ ಗಮನಕ್ಕೂ ಯೋಗ್ಯವಾಗಿದೆ”.

ಈ ಮಾತುಗಳಲ್ಲಿ ಕೇವಲ 89 ಪದಗಳಿವೆ. ಈ ನುಡಿಗಳನ್ನು ನನ್ನ ಮನಸ್ಸಲ್ಲಿ ಮೂಡಿಸಿಕೊಂಡೆ. ಗೊಮ್ಮಟನನ್ನು ಕಂಡಂತಾಯ್ತು.

ಇಲ್ಲಿ ಬರುವ ಒಂದು ವಾಕ್ಯ ಗಮನಿಸಬೇಕು- “ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ, ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ”. ನೋಡಿದರೆ, ಇಂದು ನಮ್ಮ ಕಣ್ಣೆದುರು ಆಗುತ್ತಿರುವುದು ಇದೇ ಏನೋ ಅನಿಸಿಬಿಡುತ್ತದೆ. ನಿರುದ್ಯೋಗಿಗಳ, ರೈತರ ಆತ್ಮಹತ್ಯೆ ಲಕ್ಷಾಂತರ ಆಗುತ್ತಿದೆ. ಆಳುವವರು ಹೊಣೆಗಾರರಾಗುತ್ತಿಲ್ಲ.

ಜೊತೆಗೆ, ಮನುಷ್ಯನ ದುರಾಸೆಯ ಪರಿಣಾಮದಿಂದ ಉಂಟಾದ ಜಾಗತಿಕ ತಾಪಮಾನದಿಂದಾಗಿ ಪ್ರಕೃತಿ ಕುಪಿತಗೊಂಡು ಒಂದು ಕಡೆ ನೆರೆ ಪ್ರವಾಹದಿಂದ ಜನರ ಬದುಕು ಮುಳುಗಡೆ ಆಗುತ್ತಿದೆ. ಅದರ ಪಕ್ಕದಲ್ಲೆ ಮಳೆ ಇಲ್ಲದೆ, ಬೆಳೆ, ಜನ ಒಣಗಿ ಹೋಗುತ್ತಿದ್ದಾರೆ, ಸಾಯುತ್ತಿದ್ದಾರೆ. ಜೊತೆಗೆ ಭಾರತದ ಅರ್ಥಿಕತೆ ಕುಸಿಯುತ್ತಿದೆ. ಉದ್ಯೊಗಗಳು ಕುಸಿಯುತ್ತಿದೆ. ಈ ಕುಸಿಯುತ್ತಿರುವ ಭಾರತದ ಮೇಲೆ ಮೋದಿಶಾದ್ವಯರು, ಪೂತನಿ (ಕ್ರೋನಿ) ಬಂಡವಾಳಶಾಹಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು, ಹಾಲಿ ಇರುವ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರ ತನ್ನ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದಲೂ ಉದ್ಯೋಗ ಉದುರಿ ಹೊಗುತ್ತಿದೆ, ಆತ್ಮಹತ್ಯೆ ಹೆಚ್ಚುತ್ತಿದೆ.

ನೋಡಿ, ಈಗ ಕೇಂದ್ರ ಸರ್ಕಾರವು, 16 ದೇಶಗಳ ನಡುವೆ ಆರ್.ಸಿ.ಇ.ಪಿ ಎಂಬ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಹೆಬ್ಬೆಟ್ಟು ಒತ್ತಲು ರೆಡಿಯಾಗಿದೆ. ಗುಟ್ಟಾಗಿ ಕೊಲೆ ಸಂಚು ಜರುಗುತ್ತಿದೆ. ಪಾರ್ಲಿಮೆಂಟ್ ಮುಂದೆನು, ಇಡುತ್ತಿಲ್ಲ. ರಾಜ್ಯಗಳನ್ನು ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಹೆಬ್ಬೆಟ್ಟು ಒತ್ತಿದರೆ ಏನಾಗುತ್ತೆ? ಒಂದೇ ಒಂದು ಉದಾಹರಣೆ ಸಾಕು – ಭಾರತದಲ್ಲಿ ಸಣ್ಣಸಣ್ಣ ರೈತರು ಹಾಗೂ ಮತ್ತೊಂದಿಷ್ಟು ಜನಸಾಮಾನ್ಯರು ಹಾಲು ಉತ್ಪಾದನೆಯಲ್ಲಿ ತೊಡಗಿ ಇದನ್ನೆ ತಮ್ಮ ಜೀವನಾಧಾರ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಜನ ಗ್ರಾಮೀಣ ಕಡುಬಡವರು ಇದರ ಮೇಲೇನೆ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿಯೇ ಉಸಿರಾಡುತ್ತಿದೆ. ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ. ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ.

ಯಾಕೆ ಪುರುಷರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರು ಇಲ್ಲ, ಎಂದು ಸರ್ಕಾರ ಚಿಂತಿಸಿ ಈ ಒಪ್ಪಂದಕ್ಕೆ ರುಜು ಹಾಕುತ್ತಿರಬಹುದೇ? ಗಾಂಧಿ ಹೇಳುವ – ನನ್ನ ದೇಶದಲ್ಲಿ ಈ ಅರೆಹೊಟ್ಟೆಯ ಲಕ್ಷಾಂತರ ಜನರ  ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ – ಎನ್ನುವ ಮಾತು ನಿಜವಿರಬಹುದೆ?

ಜಾಗತೀಕರಣದ ನಂತರ ಜಗತ್ತಿನ ಪ್ರವಾಹ ಇರುವುದೇ ಹೀಗೆ, ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಎಲ್ಲರೂ ಕೊಚ್ಚಿ ಹೋಗುತ್ತಿದ್ದೇವೆ.

ಕೊಚ್ಚಿ ಹೋಗುತ್ತಿರುವ ನಾವು, ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹಮದ್ ಕಡೆಗೆ ನೋಡಬೇಕಾಗಿದೆ. ಬೆಳಕು ಕಾಣಬಹುದು. ಗೊತ್ತಲ್ಲ? ಇಥಿಯೋಪಿಯಾ ಅಂದರೆ ಹಸಿವಿನಿಂದ ಎಲುಬಿನ ಗೂಡಾಗಿದ್ದ ದೇಶ. ಇಂಥ ದೇಶಕ್ಕೆ ಆತ ಪ್ರಧಾನಿಯಾಗಿ ಬರುತ್ತಾನೆ. ಇನ್ನೂ ಎರಡು ವರ್ಷಗಳು ತುಂಬಿಲ್ಲ, ಅವನ ಕಾರ್ಯವೈಖರಿಗಳು, ಯುದ್ಧವಿಲ್ಲದೆ ಎಲ್ಲವನ್ನು ಎಲ್ಲರನ್ನು ಗೆದ್ದುಕೊಳ್ಳುತ್ತಿದೆ. ಆತ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಸಂವಾದ ನಡೆಸಿದ. ಉಗ್ರಗಾಮಿ ಸಂಘಟನೆಗಳ ಜೊತೆ ಮಾತುಕತೆ ಮಾಡಿದ. ದೌರ್ಜನ್ಯ ನಡೆಸುವ ಮಿಲಿಟರಿ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಟ್ಟ. ಜನಾಂಗೀಯ ಹಿಂಸಾಚಾರಗಳನ್ನು ಮಟ್ಟ ಹಾಕಿದ, ಯುವಜನತೆಗೆ ಉದ್ಯೋಗ ನೀಡಲು ಮುಂದಾದ. ಅಧಿಕಾರಕ್ಕೆ ಬಂದ ದಿನದಿಂದ ತನ್ನ ಕಚೇರಿ ಬಾಗಿಲನ್ನು ಅವನು ಮುಚ್ಚಲಿಲ್ಲ. ಅಷ್ಟೇ ಅಲ್ಲ, ಆತನ ಕ್ಯಾಬಿನೆಟ್ ನಲ್ಲಿ ಅರ್ಧಕ್ಕರ್ಧ ಮಹಿಳೆಯರೇ ಇದ್ದಾರೆ. ಸುಪ್ರಿಂ ಕೋರ್ಟ್ ನ್ಯಾಯಾಧೀಶರುಗಳಾಗಿ ಮಹಿಳೆಯರೇ ಇರುವಂತೆ ಎಚ್ಚರ ವಹಿಸಿದ್ದಾನೆ. ಆತ  ದೂರದ ವಿದೇಶ ಪ್ರವಾಸವನ್ನು ಮಾಡಲಿಲ್ಲ. ದ್ವೇಷದ ನಾಡಲ್ಲಿ ಶಾಂತಿ, ಕ್ಷಮೆ, ಸಹಬಾಳ್ವೆ ಕಟ್ಟತೊಡಗಿದ. ತನ್ನ ಪಕ್ಕಾ ಎದುರಾಳಿಯನ್ನು ಚುನಾವಣೆ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದ! ಒಂದೇ ದಿನ ತನ್ನ ದೇಶದ ಮಣ್ಣಲ್ಲಿ 35 ಕೋಟಿ ಮರಗಿಡಗಳ ಸಸಿನೆಟ್ಟು ಹಸಿರು ಮಾಡತೊಡಗಿದ್ದಾನೆ. ಅಲ್ಲೂ ಒಬ್ಬ ಗೋಡ್ಸೆ ಇರುತ್ತಾನೆ. ಪ್ರದಾನಿ ಅಬಿಯ್ ಅಹಮದ್ ಹತ್ಯೆಗೆ ಪ್ರಯತ್ನಿಸುತ್ತಾನೆ. ಈ ಮರಿ ಗಾಂಧಿ ಹೇಳುತ್ತಾನೆ –“Love always wins. Killing others is a defeat. To those who tried to divide us, I want to tell you that you have not succeeded”.

ಇಷ್ಟಾದ ಮೇಲೆ, ಬಹಳ ಮುಖ್ಯವಾಗಿ ಇಥಿಯೊಪಿಯಾದ ಜೊತೆಗೆ ಯಾವಾಗಲೂ ಗಡಿ ತಕರಾರು ಮಾಡುತ್ತ ಬಡಿದಾಡುತ್ತಿದ್ದ ಪಕ್ಕದ ದೇಶ ಎರಿಟ್ರಿಯಾ ಜೊತೆ ಮಾತುಕತೆ ನಡೆಸುತ್ತಾನೆ. ವೈರಿ ದೇಶವನ್ನು ತನ್ನ ಪ್ರೀತಿಯ ವರಸೆಯಲ್ಲಿ ಗೆಲ್ಲುತ್ತಾನೆ. ಅಂತರ್ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಸೂಡಾನ್‍ನಲ್ಲಿ ಶಾಂತಿ ಮಾತುಕತೆ ಮಾಡಿಸುತ್ತಾನೆ. ಏರಿಟ್ರಿಯಾ ಸೋಮಾಲಿಯ ನಡುವೆ ಶಾಂತಿ ಒಪ್ಪಂದ ಮಾಡಿಸುತ್ತಾನೆ. ಕಿನ್ಯಾ ಮತ್ತು ಸೋಮಾಲಿಯಾ ನಡುವೆ ರಾಜಿ ಮಾಡಿಸುತ್ತಾನೆ. ಇಡೀ ಆಪ್ರಿಕಾದ ಬೆಳವಣಿಗೆಗೆ ನೀಲಿ ನಕ್ಷೆ ರೂಪಿಸುತ್ತಾನೆ.
ಇದಕ್ಕೆ ಏನು ಬೇಕು? 56 ಇಂಚಿನ ಎದೆ ಅಲ್ಲ, ಆ ಎದೆ ಒಳಗಿನ ಹೃದಯದೊಳಗೆ ಮಾನವೀಯ ಸ್ಪಂದನೆಗಳು ಬೇಕು, ಅಷ್ಟೆ.

[ಕೃತಜ್ಞತೆ: ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಇಥಿಯೋಪಿಯಾ ಪ್ರಧಾನಿ ಅಭಿ ಅಹಮದ್ ಬಗ್ಗೆ ಮಾಹಿತಿಯನ್ನು ಶ್ರೀಗೋಪಾಲಕೃಷ್ಣ ಕುಂಟಿನಿ ಅವರ ಬರಹದಿಂದ ಆಯ್ದು ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.-ದೇಮ]

ಕೃಪೆ: ನಮ್ಮ ಬನವಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....