“ಪ್ಯಾಲೆಸ್ತೀನ್ ಜನರಿಗೆ ನೆರವು ಹೆಚ್ಚಿಸಲು ಭಾರತ ಬದ್ದ” ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್ ಅವರು ಬುಧವಾರ (ಅ.30) ಹೇಳಿದ್ದಾರೆ.
ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆಯೋಜಿಸಿದ್ದ ಮುಕ್ತ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಅವರು,”ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಫ್ಯಾಲೆಸ್ತೀನ್ ರೆಫ್ಯೂಜಿ (UNRWA)ಗೆ 37 ಮಿಲಿಯನ್ ಡಾಲರ್ ನೆರವು ಸೇರಿದಂತೆ ಪ್ಯಾಲೆಸ್ತೀನ್‌ಗೆ ಅಭಿವೃದ್ದಿ ನೆರವಾಗಿ ಪ್ರಸ್ತುತ 120 ಮಿಲಿಯನ್ ಡಾಲರ್ ಅನ್ನು ಭಾರತ ನೀಡುತ್ತಿದೆ” ಎಂದು ತಿಳಿಸಿದ್ದಾರೆ.
#WATCH | Delivering India’s Statement at the UN Security Council Open Debate on the Situation in the Middle East, Permanent Representative of India to the United Nations Parvathaneni Harish says, "…India stands ready to do more for the Palestinian people… The scale of our… pic.twitter.com/ToJ0k4knny
— ANI (@ANI) October 31, 2024
ಅಕ್ಟೋಬರ್ 22ರಂದು ಭಾರತವು UNRWAಗೆ ಆರು ಟನ್ ಔಷಧಿಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ಹರೀಶ್ ತಿಳಿಸಿದ್ದಾರೆ. ಇದೇ ವೇಳೆ 2023ರ ಅಕ್ಟೋಬರ್ 7ರಂದು ಹಮಾಸ್ ಗುಂಪು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಅವರು ಖಂಡಿಸಿದ್ದಾರೆ.
ಗಾಝಾದಲ್ಲಿ ತುರ್ತು ಕದನ ವಿರಾಮ ಘೋಷಿಸಬೇಕು. ಹಮಾಸ್ ಕೂಡ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಎರಡು ರಾಷ್ಟ್ರಗಳು ದ್ವಿರಾಷ್ಟ್ರ ನೀತಿಯನ್ನು ಒಪ್ಪಿಕೊಳ್ಳಬೇಕು. ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರವಾಗಬೇಕು ಎಂದು ಹರೀಶ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಸಹಕಾರ ನೀಡಲಿದೆ ಎಂದಿರುವ ಹರೀಶ್, ಇತರ ರಾಷ್ಟ್ರಗಳು ಕೂಡ ಈ ಪ್ರಯತ್ನವನ್ನು ಬೆಂಬಲಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಮಕ್ಕಳ ಕುಬ್ಜತೆ ಹೆಚ್ಚಳಕ್ಕೆ ಜಾತಿ ತಾರತಮ್ಯ ಕಾರಣ : ಅಧ್ಯಯನ ವರದಿ


