ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟು ಬಳಿಯ ಬೃಂದಾವನ ಉದ್ಯಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಕೆಆರ್‌ಎಸ್ ಅಣೆಕಟ್ಟು ಉಳಿಸಲು ಜೀವ ತ್ಯಾಗ ಮಾಡಲು ತಯಾರಿದ್ದೇವೆ ಎಂದು ಹೇಳಿದೆ. ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ತೀವ್ರ ಆಕ್ರೋಶ ಮತ್ತು ಗದ್ದಲ ಉಂಟಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಕೆಆರ್‌ಎಸ್ ಅಣೆಕಟ್ಟಿಗಾಗಿ
ರೈತ ನಾಯಕಿ ಸುನಂದಾ ಜಯರಾಮ್ ಮಾತನಾಡಿ, “ನಾವು ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ, ರಕ್ತ ಕೊಟ್ಟೇವು.. ನೀರು ಕೊಡೇವು. ಕೆಆರ್‌ಎಸ್ ಅಣೆಕಟ್ಟಿಗೆ ಅಪಾಯವಿದ್ದರೆ ನಾವು ಸುಮ್ಮನಿರು ಹೇಗೆ?” ಎಂದು ಹೇಳಿದ್ದಾರೆ.
“ಜೂನ್ 6 ರಂದು ನಡೆದ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಸಿಎಂ ಮತ್ತು ಡಿಸಿಎಂ ಜೊತೆ ಮಾತನಾಡಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ನಾವು ಅವರ ಮಾತುಗಳನ್ನು ಗೌರವಿಸಿ ಕಾಯುತ್ತಿದ್ದೆವು. ಆದರೆ, ಕಾವೇರಿ ನೀರಾವರಿ ನಿಗಮ (ಸಿಎನ್‌ಎನ್) ಅಧಿಕಾರಿಗಳು ಮೌನವಾಗಿ ಕಾವೇರಿ ‘ಆರತಿ’ಗಾಗಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜೈಲಿನಲ್ಲಿ ಇರಬೇಕಾದವರು ವಿಧಾನಸೌಧದೊಳಗೆ ಇದ್ದಾರೆ. ವಿಧಾನಸೌಧ ಸುಳ್ಳಿನ ಮನೆ. ಅಪರಾಧ ಎಸಗಿದವರನ್ನು ಶಿಕ್ಷಿಸಲು ಜನರು ಸಿದ್ಧರಿದ್ದಾರೆ” ಎಂದು ಅವರು ಹೇಳಿದ್ದಾರೆ.
“ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಅಣೆಕಟ್ಟು ಬಳಿ ಮರಗಳನ್ನು ಕಡಿದು ಕಾವೇರಿ ನದಿಗೆ ಲೋಡ್ ಗಟ್ಟಲೆ ಮಣ್ಣನ್ನು ಸುರಿದಿದ್ದು ಏಕೆ? ಈ ಬಗ್ಗೆ ಸಿಎನ್‌ಎನ್, ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಶಾಸಕರು ಸ್ಥಳಕ್ಕೆ ಬಂದು ಸ್ಪಷ್ಟಪಡಿಸಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.
“ಕಾವೇರಿ ‘ಆರತಿ’ಗಾಗಿ ಅಣೆಕಟ್ಟೆಯ ಬೋಟಿಂಗ್ ಪಾಯಿಂಟ್ ಬಳಿ ಪ್ರಾಥಮಿಕ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಜಿಲ್ಲಾ ಸಚಿವರು ಮತ್ತು ಉನ್ನತ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು. ಹಳೆಯ ಮತ್ತು ಅಪಾಯ ಒಡ್ಡುವ ಮರಗಳನ್ನು ಮಾತ್ರ ಕಡಿಯಲಾಯಿತು.” ಎಂದು ಕಾವೇರಿ ನೀರಾವರಿ ನಿಗಮ ಕಾರ್ಯನಿರ್ವಾಹಕ ಎಂಜಿನಿಯರ್ ಜಯಂತ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಟೆಂಡರ್ ಕರೆಯುವ ಮೊದಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರೈತರು ಮತ್ತು ಇತರರು ಆರೋಪಿಸಿದ್ದು, ಟೆಂಡರ್ ಪ್ರತಿಯನ್ನು ತೋರಿಸುವಂತೆ ಅಧಿಕಾರಿಗಳಿಗೆ ರೈತರು ಕೇಳಿದ್ದಾರೆ.
ಬುಧವಾರ ಅಣೆಕಟ್ಟು ಬಳಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಎಂದು ವರದಿ ಹೇಳಿದೆ. ಪೊಲೀಸರು ರೈತರನ್ನು ತಡೆದು, ಪ್ರತಿ ಗುಂಪಿನಿಂದ ಕೇವಲ 10 ಪ್ರತಿನಿಧಿಗಳಿಗೆ ಕಾವೇರಿ ‘ಆರತಿ’ ಸ್ಥಳಕ್ಕೆ ಹೋಗಲು ಅವಕಾಶ ನೀಡಿದ್ದಾರೆ.
ರೈತ, ದಲಿತ ಮತ್ತು ವಿವಿಧ ಸಂಘಟನೆಗಳ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಒಟ್ಟುಗೂಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಣೆಕಟ್ಟು ಬಳಿ ಕಾವೇರಿ ‘ಆರತಿ’ ಮತ್ತು ಮನೋರಂಜನಾ ಉದ್ಯಾನವನಕ್ಕೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಕೆಆರ್‌ಎಸ್ ಅಣೆಕಟ್ಟಿಗಾಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಾವೇರಿ: ಪೌರಕಾರ್ಮಿಕರ ಹಲ್ಲೆ ಪ್ರಕರಣದಲ್ಲಿ ಅಕ್ಷತಾ ಪ್ರಮುಖ ಆರೋಪಿ: ದೂರು
ಹಾವೇರಿ: ಪೌರಕಾರ್ಮಿಕರ ಹಲ್ಲೆ ಪ್ರಕರಣದಲ್ಲಿ ಅಕ್ಷತಾ ಪ್ರಮುಖ ಆರೋಪಿ: ದೂರು

