‘ಇಂದಿನಿಂದ ಅಗಸ್ಟ್ 5 ರವರೆಗೂ ಎಲ್ಲರೂ ಪ್ರತಿ ದಿನ ಐದು ಬಾರಿ ಹನುಮಾನ್ ಚಾಲೀಸಾ ಪಠಿಸಿ, ಇದರಿಂದ ಕೋವಿಡ್ ಬಿಕ್ಕಟ್ಟು ಜಗತ್ತಿನಿಂದ ದೂರವಾಗುತ್ತದೆ’ ಎಂದು ಬಿಜೆಪಿಯ ಸಂಸದೆ ಪ್ರಗ್ಯಾ ಠಾಕೂರ್ ಹೇಳಿದ್ದಾರೆ.
‘ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದೆ. ಅಲ್ಲಿವರೆಗೂ ಪ್ರತಿದಿನ 5 ಸಲ ಹನುಮಾನ್ ಚಾಲೀಸಾ ಪಠಿಸಿ. ಅಗಸ್ಟ್ 5 ರಂದು ಭೂಮಿಪೂಜೆಯ ದಿನ ಮನೆಯಲ್ಲಿ ದೀಪ ಹಚ್ಚಿ, ಆರತಿ ಬೆಳಗಿ ರಾಮನನ್ನು ಪೂಜಿಸಿ’ ಎಂದು ಸಂಸದೆ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ‘ಅಗಸ್ಟ್ 5 ಮಹತ್ವದ ದಿನವಾಗಲಿದೆ. ಅಂದು ಎಲ್ಲರೂ ಮನೆಯಲ್ಲಿ ದೀಪಾವಳಿ ಆಚರಿಸೋಣ’ ಎಂದಿದ್ದಾರೆ. ಒಂದೇ ಬಾರಿಗೆ ಎಲ್ಲರೂ ಹನುಮಾನ್ ಚಾಲೀಸಾ ಪಠಣ ಮಾಡಿದರೆ ವಿಶ್ವದ ಕೋರೊನಾ ಬಿಕ್ಕಟ್ಟು ದೂರವಾಗಲಿದೆ ಎಂದಿದ್ದಾರೆ.
आइए हम सब मिलकर कोरोना महामारी को समाप्त करने के लिए लोगों के अच्छे स्वास्थ्य की कामना के लिए एक आध्यात्मिक प्रयास करें आज25 से 5 अगस्त तक प्रतिदिन शाम 7:00 बजे अपने घरों में हनुमान चालीसा का 5 बार पाठकरें5 अगस्त को अनुष्ठान का रामलला की आरती के साथ घरों में दीप जलाकर समापन करें pic.twitter.com/Ba0J2KrkA8
— Sadhvi Pragya singh thakur (@SadhviPragya_MP) July 25, 2020
“ನಾವೆಲ್ಲರೂ ಒಗ್ಗಟ್ಟಾಗಿ ಆಧ್ಯಾತ್ಮಿಕದ ಮೂಲಕ ಮಾರಣಾಂತಿಕ ಕೊರೋನಾ ವೈರಸ್ ಅನ್ನು ಜಗತ್ತಿನಿಂದ ತೊಡೆದು ಹಾಕಲು ಪ್ರಯತ್ನಿಸೋಣ. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸೋಣ. ಹೀಗಾಗಿ ಜುಲೈ 25 ರಿಂದ ಆಗಸ್ಟ್ 05ರವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾ ಪಠಿಸಿ” ಎಂದು ಪ್ರಗ್ಯಾ ಟ್ವೀಟ್ ಮಾಡಿದ್ದಾರೆ.
“ದೇಶದ ಎಲ್ಲಾ ಹಿಂದೂಗಳು ಒಂದೇ ಧ್ವನಿಯಲ್ಲಿ ” ಹನುಮಾನ್ ಚಾಲಿಸಾ ” ಪಠಿಸಿದರೆ, ಆ ಶಕ್ತಿ ಖಂಡಿತವಾಗಿಯೂ ಕೆಲಸ ಮಾಡುತ್ತದೆ ಮತ್ತು ನಾವು ಕೊರೋನಾ ವೈರಸ್‌ನಿಂದ ಮುಕ್ತರಾಗುತ್ತೇವೆ. ಇದು ಭಗವಾನ್ ರಾಮನಿಗಾಗಿ ನಿಮ್ಮ ಪ್ರಾರ್ಥನೆಯಾಗಲಿದೆ. ಆಗಸ್ಟ್ 05 ರಂದು ಮನೆಯಲ್ಲೇ ದೀಪಗಳನ್ನು ಬೆಳಗಿಸಿ ರಾಮನಿಗೆ ಆರತಿ ಅರ್ಪಿಸುವ ಮೂಲಕ ನಿಮ್ಮ ಆಚರಣೆಯನ್ನು ಮುಕ್ತಾಯಗೊಳಿಸಿ” ಎಂದು ಅವರು ಕೇಳಿಕೊಂಡಿದ್ದಾರೆ.
“ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕನ್ನು ತಡೆಯುವ ಸಲುವಾಗಿ ಇಲ್ಲಿನ ಬಿಜೆಪಿ ಸರ್ಕಾರ ಆಗಸ್ಟ್ 04ರ ವರೆಗೆ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ 4ಕ್ಕೆ ಮುಗಿದರೂ ಹನುಮಾನ್ ಚಾಲಿಸಾ ಪಠಣ ಆಗಸ್ಟ್ 05 ರಂದು ಕೊನೆಗೊಳ್ಳಲಿದೆ. ಈ ದಿನ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದ್ದು, ಆ ದಿನವನ್ನು ನಾವು ದೀಪಾವಳಿಯಂತೆ ಆಚರಿಸಲಿದ್ದೇವೆ” ಎಂದು ಪ್ರಜ್ಞಾ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಪ್ರಗ್ಯಾ ಠಾಕೂರ್ ಸಲಹೆಗೆ ಹಲವರು ವಿರೋಧ ವ್ಯಕ್ತಪಡಿಸಿ ಟೀಕಿಸಿದ್ದಾರೆ. ತಟ್ಟೆ ಜಾಗಟೆ ಬಡಿದಿದ್ದು ಆಯ್ತು, ದೀಪ ಹಚ್ಚಿದ್ದು ಆಯ್ತು, ಹೂವು ಸುರಿದಿದ್ದು ಮುಗೀತು.. ಈಗ ಹನುಮಾನ್ ಚಾಲೀಸಾ ಪಠಿಸಿದರೆ ಕೊರೊನಾ ಸಾಯುತ್ತದೆ ಎಂದು ಬಿಜೆಪಿ ಸಂಸದೆ ಹೇಳಿದ್ದಾರೆ. ಇದು ಕೆಲಸಕ್ಕೆ ಬರುವುದಿಲ್ಲ. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಇಂದಿನ ತುರ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆಸ್ಪತ್ರೆ: ಲೈಸೆನ್ಸ್ ರದ್ದು


