ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾನ್ನು ಬಿಡುಗಡೆ ಮಾಡುವುದಿದ್ದರೆ, ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು ಇಲ್ಲವೆಂದರೆ ಅವರ ಸಹೋದರಿಯ ಅರ್ಜಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.
“ಈಗ ಕಾಶ್ಮೀರದಲ್ಲಿ ವಿಷಯಗಳು ಇತ್ಯರ್ಥಗೊಂಡಿವೆ, ಒಮರ್ ಅಬ್ದುಲ್ಲಾರ ಬಿಡುಗಡೆಗೆ ನಿಮ್ಮ ಸೂಚನೆಗಳು ಯಾವುವು ಈ ಬಗ್ಗೆ ಮುಂದಿನ ವಾರದೊಳಗೆ ಪ್ರತಿಕ್ರಿಯೆ ನೀಡಬೇಕು” ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.
“ಬೇರೊಬ್ಬರನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ನಾವು ಕೇಳಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವಾರ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ಒಮರ್ ಅಬ್ದುಲ್ಲಾರ ತಂದೆ ಫಾರೂಕ್ ಅಬ್ದುಲ್ಲಾರನ್ನು ಏಳು ತಿಂಗಳ ಕಾಲ ಶ್ರೀನಗರದ ಅವರ ಮನೆಯಲ್ಲಿ ಬಂಧನದ ನಂತರ ಬಿಡುಗಡೆ ಮಾಡಲಾಯಿತು. ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು.
ಒಮರ್ ಅಬ್ದುಲ್ಲಾ ಬಂಧನದ ವಿರುದ್ಧ ಅವರ ಸಹೋದರಿ ಸಾರಾ ಪೈಲಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಮ್ಮು ಕಾಶ್ಮೀರ ಆಡಳಿತಕ್ಕೆ ನೋಟಿಸು ಜಾರಿಮಾಡಿತ್ತು.


