Homeಮುಖಪುಟ’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಬ್ರಾಹ್ಮಣರ ಮೀಸಲಾತಿಗಾಗಿ ರಚಿಸಿದ ಮಿಲ್ಲರ್ ಸಮಿತಿಯ ಪ್ರಕಾರ "ಮೀಸಲಾತಿ ಎಂದರೆ ಪ್ರಾತಿನಿಧ್ಯ. ಸರ್ಕಾರದ ಆಡಳಿತದಲ್ಲಿ ತಮ್ಮ ಜನಸಂಖ್ಯಾವಾರು ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಮೀಸಲಾತಿಯನ್ನು ಒದಗಿಸಲಾಗಿದೆ. ಹಾಗೆ ನೋಡಿದರೆ ಇಂದು ಪಾದಯಾತ್ರೆ ಮಾಡುತ್ತಿರುವ ಕುರುಬ ಮತ್ತು ಪಂಚಮಸಾಲಿ ಲಿಂಗಾಯತರು ತಮ್ಮ ಜನಸಂಖ್ಯೆಯ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಬೇಕಿದೆ.

- Advertisement -
- Advertisement -

ಮೊದಲಿಗೆ ಮೀಸಲಾತಿ ಹೋರಾಟವನ್ನು ಕೈಗೆತ್ತಿಕೊಂಡಿರುವ ಜನ ಸಮುದಾಯಗಳಿಗೆ ಧನ್ಯವಾದಗಳು. ಅದರಲ್ಲಿಯೂ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಕಮಂಡಲ್ ಯಾತ್ರೆಗೆ ಕೈ ಜೋಡಿಸಿದ ಹಿಂದುಳಿದ ಜಾತಿಗಳು ತಮ್ಮ ಮೀಸಲಾತಿಯ ವಿರುದ್ಧ ತಮ್ಮನ್ನೇ ಎತ್ತಿ ಕಟ್ಟಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ದಶಕಗಳೇ ಬೇಕಾದವು. ಹಿಂದುಳಿದ ಜಾತಿಗಳು ಭಾವನಾತ್ಮಕವಾಗಿ ತೇಲುತ್ತಿರುವಾಗ ಅವರ ಪ್ರಾತಿನಿಧಿಕ ಭದ್ರತೆಯನ್ನು ಪ್ರಧಾನಿ ವಿ.ಪಿ.ಸಿಂಗ್ ಬದ್ಧತೆ ಕಾಪಾಡಿತ್ತು.

ಈಗ ಹಿಂದುಳಿದ ಮೇಲ್‌ಮಧ್ಯಮ ಜಾತಿಗಳು ಮತ್ತೆ ಮೀಸಲಾತಿ ಹೋರಾಟಕ್ಕೆ ಮುಂದಾಗಿವೆ. ಅಭಿನಂದನೆಗಳು, ಆದರೆ ಮತ್ತದೇ ತಪ್ಪಿನ ದಾರಿ ಹಿಡಿದಿವೆ. ಆಳುವ ಸರ್ಕಾರಗಳು ಸರ್ಕಾರಿ ಕಾರ್ಖಾನೆ, ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಕಾನೂನು ರೂಪಿಸಿರುವ ಹೊತ್ತಲ್ಲಿ ಈ ಮೀಸಲಾತಿ ಹೋರಾಟಗಳು ಒಗ್ಗಟ್ಟಾಗಿ ದುಡಿಯಬೇಕಿತ್ತು. ಆದರೆ ಈ ಹೋರಾಟವನ್ನು ಬಿಡಿಬಿಡಿಯಾಗಿ ತಮ್ಮ ಜಾತಿಗಳಿಗೆ ಸೀಮಿತಗೊಳಿಸಿಕೊಂಡಿರುವುದನ್ನು ನೋಡಿದರೆ ಇದು ಮತ್ತೊಂದು ಹಿನ್ನಡೆಯೇ ಸರಿ. ಇತಿಹಾಸದ ಕಮಂಡಲದ ಕೈಗಳು ಶೋಷಿತ ಜಾತಿಗಳ ಬದುಕಿಗೆ ಮತ್ತೆ ಕೈ ಹಾಕಿರುವಂತೆ ಕಾಣುತ್ತದೆ.

ನಮ್ಮ ದೇಶದ ಮೀಸಲಾತಿ ಇತಿಹಾಸವನ್ನು ಗಮನಿಸಿದರೆ ಎರಡು ರೀತಿಯ ಮೀಸಲಾತಿಗಳು ಕಣ್ಣಿಗೆ ಬೀಳುತ್ತವೆ. ಒಂದು ’ಅಸಮಾನತೆಗಾಗಿ ಮೀಸಲಾತಿ’ ಮತ್ತೊಂದು ’ಸಮಾನತೆಗಾಗಿ ಮೀಸಲಾತಿ’. ಅಸಮಾನತೆಗಾಗಿ ಮೀಸಲಾತಿ ಋಗ್ವೇದ ಕಾಲದಿಂದಲೂ ಜಾರಿಯಲ್ಲಿದೆ. ಚಾತುರ್ವರ್ಣ ಧರ್ಮವೇ ಅದರ ಮೂಲ. ವರ್ಣ/ಜಾತಿ ಶ್ರೇಣಿಯಲ್ಲಿ ಯಾರು ಮೇಲಿರುತ್ತಾರೋ ಅವರಿಗೆ ಹೆಚ್ಚು ಪ್ರಾತಿನಿಧ್ಯ ಹಾಗೂ ಕೆಳಗೆ ಬಂದಂತೆ ಆ ಪ್ರಾತಿನಿಧ್ಯ ಕಡಿಮೆಯಾಗುತ್ತಾ ಬರುತ್ತದೆ. ಈ ಮೀಸಲಾತಿಯನ್ನು ಕೌಟಿಲ್ಯನ ಅರ್ಥಶಾಸ್ತ್ರ, ಧರ್ಮಸೂತ್ರಗಳು, ಮನುಸ್ಮೃತಿ ಮುಂತಾದ ಧರ್ಮಗ್ರಂಥಗಳು ಕಾಪಾಡಿಕೊಂಡು ಬಂದಿವೆ. ಆದರೆ ಸಮಾನತೆಗಾಗಿ ಮೀಸಲಾತಿಯು ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಜನಾನುರಾಗಿ ರಾಜರಿಂದ ಜಾರಿಯಾಯಿತು. ಇದಕ್ಕೆ ಫುಲೆ ದಂಪತಿಗಳು, ಅಬ್ರಾಹ್ಮಣ ಚಳವಳಿ, ಜಸ್ಟೀಸ್ ಪಾರ್ಟಿಯ ಸ್ವಾಭಿಮಾನ ಚಳವಳಿಗಳು ಶಕ್ತಿ ತುಂಬಿದ್ದವು. ಇವರೆಲ್ಲರ ಪ್ರತಿನಿಧಿಯಂತೆ ಭಾಸವಾಗುವ ಡಾ. ಬಿ.ಆರ್. ಅಂಬೇಡ್ಕರ್ ಶ್ರಮವಹಿಸಿ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಅದನ್ನು ಹರಳುಗಟ್ಟಿಸಿ ಕಾನೂನನ್ನಾಗಿಸಿದರು.

ಹಾಗಾಗಿ ಸಮಾನತೆಗಾಗಿ ಮೀಸಲಾತಿ ಎಂಬುದು ಶೂದ್ರ-ದಲಿತರು ಒಗ್ಗಟ್ಟಿನ ಹೋರಾಟದಿಂದ ಪಡೆದುಕೊಂಡ ಹಕ್ಕಾಗಿದೆ. ಆದರೆ ಅಸಮಾನತೆಗಾಗಿ ಮೀಸಲಾತಿಯು ಆಳುವವರು ತಮಗೆ ತಾವೇ ಜಾರಿ ಮಾಡಿಕೊಂಡ ಮೀಸಲಾತಿಯಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದ ಶೇ. 10 ಮೀಸಲಾತಿ. ಈ ಮೀಸಲಾತಿಯನ್ನು ಬ್ರಾಹ್ಮಣರು, ಆರ್ಯ ವೈಶ್ಯರು ಮುಂತಾದ ಮೇಲ್ಜಾತಿಗಳಿಗೆ ಕಳೆದ ವರ್ಷದಿಂದ ನೀಡಲಾಗುತ್ತಿದೆ. ಇಲ್ಲಿ ಗಮನಾರ್ಹ ವಿಚಾರವೆಂದರೆ, ಈ ಜಾತಿಗಳು ಒಂದು ದಿನವೂ ಮೀಸಲಾತಿಗಾಗಿ ಬೀದಿಗಿಳಿದು ಹೋರಾಡಲಿಲ್ಲ. ಇವರಿಗೆ ಶೇ. 10 ಮೀಸಲಾತಿ ನಿಗದಿಪಡಿಸಲು ಒಂದು ಆಯೋಗ ರಚನೆಯಾಗಲಿಲ್ಲ. ಇವರಲ್ಲಿ ಬಡವರ ಸಂಖ್ಯೆ ಎಷ್ಟು ಎಂಬುದಕ್ಕೆ ಜನಸಂಖ್ಯಾಗಣತಿ ಆಗಲಿಲ್ಲ. ಯಾವ ರಾಜ್ಯಗಳೂ ಇವರಿಗೆ ಮೀಸಲಾತಿ ಬೇಕೆಂದು ಶಿಫಾರಸು ಮಾಡಲಿಲ್ಲ. ಆದಾಗ್ಯೂ ಮೀಸಲಾತಿ ದಕ್ಕಿಬಿಟ್ಟಿತು. ಇದನ್ನೇ ನಾವು, ಆಳುವವರು ತಾವು ಜಾರಿ ಮಾಡಿಕೊಳ್ಳುವ ಅಸಮಾನತೆಗಾಗಿ ಮೀಸಲಾತಿ ಎನ್ನುತ್ತೇವೆ. ಆದರೆ ಇದೇ ರೀತಿಯಲ್ಲಿ ಶೋಷಿತ ಜನರ ಮೀಸಲಾತಿ ಜಾರಿಯಾಗುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕಳೆದ ಮೂರು ದಶಕಗಳಿಂದ ಜೀವವನ್ನೂ ಒತ್ತೆಯಿಟ್ಟು ಒಳಮೀಸಲಾತಿಗಾಗಿ ಹೋರಾಡುತ್ತಿರುವ ಮಾದಿಗ ಜಾತಿಯ ಜನಸಮುದಾಯ.

ಹೀಗಿರುವಾಗ ಆಳುವವರೊಂದಿಗೆ ಕೈ ಜೋಡಿಸಿದರೆ ಕೆಲಸ ಮುಗಿಯಿತು ಎಂದುಕೊಳ್ಳುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದರೆ ಇಡೀ ಪ್ರಪಂಚದ ಇತಿಹಾಸದಲ್ಲಿಯೇ ಆಳುವ ವರ್ಗ ತಾನು ಶೋಷಿಸುವ ವರ್ಗಗಳ ಹಿತಾಸಕ್ತಿಯನ್ನು, ತನ್ನ ಸ್ವಹಿತಾಸಕ್ತಿಯಿಂದ ಹೊರತುಪಡಿಸಿ ಎಂದಿಗೂ ನೋಡಿಲ್ಲ. ಅಷ್ಟೇ ಅಲ್ಲ, ಶೋಷಿತರೊಳಗಿನ ಅವಕಾಶವಾದಿಗಳನ್ನು ಕಬಳಿಸಿ ಇಡೀ ಶೋಷಿತರನ್ನೇ ಒಡೆದು ಆಳಿದ ಇತಿಹಾಸ ನಮ್ಮ ದೇಶದಲ್ಲಿ ಬೆಟ್ಟದಷ್ಟು ಸಿಗುತ್ತದೆ.

ಈ ಮೇಲಿನ ಎಚ್ಚರವಿಟ್ಟುಕೊಂಡೇ ನಾವು ಇಂದು ಮೀಸಲಾತಿಗಾಗಿ ಬೀದಿಗಿಳಿದಿರುವ ಬಾಂಧವರ ಬಗ್ಗೆ ಯೋಚಿಸಬೇಕಿದೆ. ಹಾಗೆ ಯೋಚಿಸಿದಾಗ ಮಾತ್ರ ಶೋಷಿತರ ಇಡೀ ಮೀಸಲಾತಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಲ್ಲದಿದ್ದರೆ ಸಾವಿರಾರು ಜಾತಿಗಳು ಬಿಡಿ ಬಿಡಿಯಾಗಿ ಹೋರಾಟಕ್ಕಿಳಿದು ಪರಸ್ಪರ ಹೊಡೆದಾಡಿಕೊಂಡು ಮತ್ತೆ ಆಳುವ ವರ್ಗದ ಹಿತಾಸಕ್ತಿಗಾಗಿ ತಮ್ಮ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ.

ಮೀಸಲಾತಿ ಎಂದರೇನು? 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಬ್ರಾಹ್ಮಣರ ಮೀಸಲಾತಿಗಾಗಿ ರಚಿಸಿದ ಮಿಲ್ಲರ್ ಸಮಿತಿಯ ಪ್ರಕಾರ “ಮೀಸಲಾತಿ ಎಂದರೆ ಪ್ರಾತಿನಿಧ್ಯ. ಸರ್ಕಾರದ ಆಡಳಿತದಲ್ಲಿ ತಮ್ಮ ಜನಸಂಖ್ಯಾವಾರು ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಮೀಸಲಾತಿಯನ್ನು ಒದಗಿಸಲಾಗಿದೆ. ಹಾಗೆ ನೋಡಿದರೆ ಇಂದು ಪಾದಯಾತ್ರೆ ಮಾಡುತ್ತಿರುವ ಕುರುಬ ಮತ್ತು ಪಂಚಮಸಾಲಿ ಲಿಂಗಾಯತರು ತಮ್ಮ ಜನಸಂಖ್ಯೆಯ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಬೇಕಿದೆ.

ಇವರ ಹೊರತಾಗಿ ಮತ್ತಷ್ಟು ಶೋಷಿತ ಸಮುದಾಯಗಳು ಬಿಡಿಬಿಡಿಯಾಗಿ ಹೋರಾಟ ಹಮ್ಮಿಕೊಂಡಿದ್ದು ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಹಂಚಿಬಿಡಿ ಎಂಬ ವಾದವನ್ನು ಇಟ್ಟಿವೆ. ಆದರೆ ಇವಿಷ್ಟೇ ಬೇಡಿಕೆಗಳು ಈ ಮೇಲಿನ ಸಮುದಾಯಗಳ ಸಮಾಜೋ-ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಿಲ್ಲ ಎಂಬುದಕ್ಕೆ ರಾಶಿರಾಶಿ ದತ್ತಾಂಶಗಳು ನಮಗಿಂದು ಸಿಗುತ್ತವೆ. ಏಕೆಂದರೆ ಹಿಂದುಳಿದ ಜಾತಿಗಳಿಗೆ ನಿಗದಿಗೊಳಿಸಿರುವಷ್ಟು ಪ್ರಮಾಣದ ಪ್ರಾತಿನಿಧ್ಯವನ್ನು 25 ವರ್ಷಗಳ ನಂತರವೂ ನೀಡಲಾಗಿಲ್ಲ. ಇದಕ್ಕೆ ಉದಾಹರಣೆಯಾಗಿ 2017ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಿಂದ ಕೇಂದ್ರದ 24 ಮಂತ್ರಿ ಕಛೇರಿಗಳು ಹಾಗೂ 25 ಕೇಂದ್ರ ಇಲಾಖೆಗಳಿಂದ ಪಡೆದ ಮಾಹಿತಿಯೊಂದು ಹಿಂದುಳಿದ ಜಾತಿಗಳಿಗಾಗಿರುವ ಅನ್ಯಾಯವನ್ನು ತಿಳಿಸುತ್ತಿದೆ. ಈ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 23, 1993ರಿಂದ ಹಿಂದುಳಿದ ಜಾತಿಗಳಿಗೆ ನೀಡಿದ್ದ 27% ಮೀಸಲಾತಿಯಲ್ಲಿ ಜನವರಿ 2017ರಷ್ಟೊತ್ತಿಗೆ 24 ಮಂತ್ರಿ ಕಚೆರಿಗಳಲ್ಲಿ ಅವರಿಗೆ ನೀಡಿರುವ ಪಾಲೆಷ್ಟೆಂದರೆ ಗ್ರೂಪ್ ’ಎ’ ಹುದ್ದೆಗಳಲ್ಲಿ 17%. ಗ್ರೂಪ್ ’ಬಿ’ ಹುದ್ದೆಗಳಲ್ಲಿ 14%. ಗ್ರೂಪ್ ’ಸಿ’ ಹುದ್ದೆಗಳಲ್ಲಿ 11% ಮತ್ತು ಗ್ರೂಪ್ ’ಡಿ’ ಹುದ್ದೆಗಳಲ್ಲಿ 10%. ಒಟ್ಟಾರೆ 11.25% ಮಾತ್ರ. 25 ಇಲಾಖೆಗಳಲ್ಲಿ ಗ್ರೂಪ್ ’ಎ’ ಹುದ್ದೆಗಳಲ್ಲಿ 14%. ಗ್ರೂಪ್ ’ಬಿ’ ಹುದ್ದೆಗಳಲ್ಲಿ 15%. ಗ್ರೂಪ್ ’ಸಿ’ ಹುದ್ದೆಗಳಲ್ಲಿ 17%. ಗ್ರೂಪ್ ’ಡಿ’ ಹುದ್ದೆಗಳಲ್ಲಿ 18% ಮಾತ್ರ ಹಿಂದುಳಿದ ಜಾತಿಗಳವರಿದ್ದಾರೆ. ಒಟ್ಟಾರೆ ಸರಾಸರಿಯಾಗಿ 16% ಮಾತ್ರ. 64 ಕ್ಯಾಬಿನೆಟ್ ಸೆಕ್ರೆಟೇರಿಯಟ್ ಹುದ್ದೆಗಳಲ್ಲಿ ಒಬ್ಬರೂ ಸಹ ಹಿಂದುಳಿದ ಜಾತಿಯವರಿಲ್ಲ. ಹೀಗೆ ಈಗ ನೀಡಿರುವ ಮೀಸಲಾತಿಯನ್ನೇ ಸಂಪೂರ್ಣ ನೀಡದಿರುವ ಈ ಪರಿಸ್ಥಿತಿಯಲ್ಲಿ ನೂತನ ಮೀಸಲಾತಿಯ ಮಾನದಂಡ ಪ್ರಾಮಾಣಿಕವಾಗಿ ಶೋಷಿತ ಸಮುದಾಯಗಳನ್ನು ರಕ್ಷಿಸುತ್ತದೆಯೇ?

PC : suddiDina

ಇನ್ನೊಂದು ಸೂಕ್ತವಾದ ವಾದವೊಂದಿದೆ. ಎಲ್ಲಾ ಜಾತಿಗಳಿಗೂ ಅವರವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸುವುದು. ಇದಾಗಬೇಕೆಂದರೆ ಒಂದು ಇಡಿಯಾದ ಹೋರಾಟವಾಗಬೇಕಿದೆ. ಏಕೆಂದರೆ ಈಗಾಗಲೇ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಾಡಿ ಅದರ ವರದಿಯನ್ನು ಬಿಡುಗಡೆ ಮಾಡುವುದಕ್ಕೇ ಅಡ್ಡಗಾಲು ಹಾಕುತ್ತಿರುವ ಬಲಾಢ್ಯ ಜಾತಿಗಳು ಇನ್ನು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಅನುವು ಮಾಡಿಕೊಡುತ್ತವೆಯೇ? ಸಾಧ್ಯವೇ ಇಲ್ಲ. ಹಾಗಾಗಿ ಕನಿಷ್ಠ ಪಕ್ಷ ಜಾತಿಗಣತಿ ವರದಿ ಬಹಿರಂಗಗೊಳಿಸಲು ಶೋಷಿತರ ಒಗ್ಗಟ್ಟಾದ ಹೋರಾಟದ ಅವಶ್ಯಕತೆ ಇದೆ. ಆಗ ಮಾತ್ರ ನಮ್ಮನ್ನೂ ಒಳಗೊಂಡಂತೆ ಹಲವು ಜಾತಿ ಮುಖಂಡರ ನಿಜವಾದ ಚಹರೆಗಳು ಬಿಚ್ಚಿಕೊಳ್ಳಲಿವೆ.

ಹಾಗೆ ಸುಮ್ಮನೆ ಜನಸಂಖ್ಯಾವಾರು ಮೀಸಲಾತಿ ಜಾರಿಯಾಗಿದೆ ಎಂದುಕೊಳ್ಳೋಣ. ಆಗ ಮೀಸಲಾತಿ ಪ್ರಮಾಣ ಎಷ್ಟು ದಕ್ಕುತ್ತದೆ ಎಂಬುದಕ್ಕೆ ಕಳೆದ 1990ರಿಂದೀಚೆಗೆ ಖಾಸಗೀಕರಣದ ಭರಾಟೆ ನಂತರದ ಅಂಕಿಅಂಶಗಳನ್ನು ಗಮನಿಸೋಣ. 2012ರಲ್ಲಿ 856 ಲಕ್ಷ ನೌಕರಿಗಳಲ್ಲಿ 70%ರಷ್ಟು (600 ಲಕ್ಷ) ಖಾಸಗಿ ಕ್ಷೇತ್ರದಲ್ಲಿದ್ದರು. ಕೇವಲ 30% ಅಂದರೆ 256 ಲಕ್ಷ ನೌಕರಿಗಳು ಮಾತ್ರ ಸಾರ್ವಜನಿಕ ಕ್ಷೇತ್ರದವಾಗಿದ್ದವು. ಅದರಲ್ಲಿ 40%ನಷ್ಟು ನೌಕರಿಗಳು ತಾತ್ಕಾಲಿಕವಾದವು. ಅಂದರೆ ಕೇವಲ 154 ಲಕ್ಷ ನೌಕರಿಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ. ಅಂದರೆ ಒಟ್ಟಾರೆ ಭಾರತದ ನೌಕರಿಗಳಲ್ಲಿ ಕೇವಲ 18% ರಷ್ಟು ನೌಕರಿಗಳು ಮಾತ್ರ ಮೀಸಲಾತಿಗೆ ಒಳಪಡುತ್ತವೆ. ಅದರಲ್ಲಿ 50% ಮಾತ್ರ ಮೀಸಲಾತಿ, ಅಂದರೆ ಜುಜುಬಿ 9% ಮಾತ್ರ ಮೀಸಲಾತಿ ದಕ್ಕುತ್ತದೆ. ಭಾರತದಲ್ಲಿ ಸೃಷ್ಟಿಯಾಗುವ 100 ನೌಕರಿಗಳಲ್ಲಿ ಕೇವಲ 9 ನೌಕರಿಗಳಿಗೆ ಮಾತ್ರ ಮೀಸಲಾತಿ ನಿಯಮ ಅನ್ವಯವಾಗುತ್ತದೆ. ಇದು ಸ್ವತಂತ್ರ ಭಾರತದ ಮೀಸಲಾತಿಯ ಕತೆ. ಈ 9% ನೌಕರಿ ಪ್ರಮಾಣವನ್ನು ನಾವು ಹೆಚ್ಚು ಮಾಡಿಕೊಳ್ಳದೇ ಇದ್ದರೆ ಮೀಸಲಾತಿ ಪಡೆಯುವುದಕ್ಕೂ, ಪಡೆಯದೇ ಇರುವುದಕ್ಕೂ ಅಂತಹ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ. ಆ ಕಾರಣಕ್ಕಾಗಿ ಶೋಷಿತ ಜಾತಿಗಳು ಒಗ್ಗಟ್ಟಾಗಿ ಖಾಸಗೀಕರಣದ ವಿರುದ್ಧ ಹೋರಾಟ ರೂಪಿಸಬೇಕಿದೆ. ಸಾರ್ವಜನಿಕ ಕ್ಷೇತ್ರ ಗಟ್ಟಿಯಾಗುವವರೆಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಪಡೆಯಬೇಕಿದೆ.

ಈಗ ಮೀಸಲಾತಿಯ ಪ್ರವರ್ಗವನ್ನೇ ಬದಲಾಯಿಸಿಕೊಳ್ಳಲು ಹೋರಾಡುತ್ತಿರುವ ಬಾಂಧವರಿಗೊಂದು ಕಿವಿಮಾತು. ಹಿಂದುಳಿದ ಜಾತಿಗಳನ್ನು ಪ್ರವರ್ಗಗಳಲ್ಲಿ ಪಟ್ಟಿ ಮಾಡಿರುವುದಕ್ಕೆ ಮೂಲಕಾರಣ ಸಮಾಜದಲ್ಲಿನ ಜಾತಿಶ್ರೇಣಿಯೇ ಆಗಿದೆ. ಜಾತಿ ಶ್ರೇಣಿಯಲ್ಲಿ ತಮ್ಮನ್ನು ತಾವು ಎಸ್‌ಟಿ ಜಾತಿಗಳಿಗಿಂತ ಮೇಲು ಎಂದುಕೊಳ್ಳುತ್ತವೆಯೋ ಆ ಜಾತಿಗಳು ಎಸ್‌ಟಿ ಮೀಸಲಾತಿಯನ್ನು ಕೇಳುವುದು ಸೂಕ್ತವಲ್ಲ. ಹಾಗೆಯೇ ತಳಜಾತಿಗಳ ಹಕ್ಕನ್ನು ಮೇಲ್ಜಾತಿಯೊಂದು ಹೊಂದಲು ಬಯಸುವುದೂ ಸೂಕ್ತವಲ್ಲ. ಈ ರೀತಿಯ ಮೀಸಲಾತಿ ನಮ್ಮ ಸಂವಿಧಾನದ ಆಶಯವಲ್ಲ. ಒಂದುವೇಳೆ ನನ್ನ ಈ ಮೇಲಿನ ಮಾತುಗಳು ಸುಳ್ಳೆಂದು ಎನಿಸಿದರೆ ಮೀಸಲಾತಿ ಕೇಳುತ್ತಿರುವ ಜಾತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಳಜಾತಿಗಳ ಸಮಾನದಲ್ಲಿರುವುದನ್ನೋ ಅಥವಾ ಅವರಿಗಿಂತಲೂ ಕಡಿಮೆ ಪ್ರಾತಿನಿಧ್ಯ ಹೊಂದಿರುವುದನ್ನೋ ಸಾಬೀತುಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಮೀಸಲಾತಿ ಎಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಾಗುವತ್ತ  ಸಾಗುತ್ತದೆ. ಇಡೀ ಮೀಸಲಾತಿ ಕಲ್ಪನೆಯೇ ನಾಶವಾಗುತ್ತದೆ.

ಕೊನೆಯದಾಗಿ ಮತ್ತೊಂದು ಗಂಭೀರ ವಿಚಾರವೊಂದಿದೆ. ಅದೇನೆಂದರೆ ಮೀಸಲಾತಿಯೊಂದೇ ಎಲ್ಲಾ ಜಾತಿಗಳ ಹಸಿವನ್ನು, ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಗೊಳಿಸಲಾರದು. ಆ ಕಾರಣದಿಂದ ಭಾರತದ ಸಂಪತ್ತಿನಲ್ಲಿ ಸಮಪಾಲನ್ನು ಕೇಳುವ ಹೋರಾಟವೂ ಮೀಸಲಾತಿ ಹೋರಾಟದ ಕೇಂದ್ರದಿಂದಲೇ ಹುಟ್ಟಬೇಕಿದೆ. ಎಲ್ಲಾ ಜಾತಿಗಳ ಬಡತನ ನಿರ್ಮೂಲನೆ ಆಗಬೇಕೆಂದರೆ ಭಾರತದ ಪ್ರತಿಯೊಬ್ಬರ ತಲಾದಾಯ ಹೆಚ್ಚಾಗಬೇಕು. ಇದನ್ನು ಶಿಕ್ಷಣ ಉದ್ಯೋಗ ಕ್ಷೇತ್ರದ ಮೀಸಲಾತಿಯೊಂದೇ ಮಾಡಲಾರದು.


ಇದನ್ನೂ ಓದಿ:  ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎನ್ನುವುದು ಸುಳ್ಳು: ಇಲ್ಲಿವೆ ನೋಡಿ ಬ್ರಾಹ್ಮಣರಿಗಿರುವ ಸರ್ಕಾರದ 15 ಯೋಜನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...