Homeಮುಖಪುಟಸಿಗಂದೂರು ದೇವಸ್ಥಾನ ನಿರ್ವಹಣೆ ಸಮಿತಿ ಹಿಂಪಡೆಯಿರಿ: ಟ್ರಸ್ಟ್ ಧರ್ಮದರ್ಶಿ ರಾಮಪ್ಪ ಎಚ್ಚರಿಕೆ

ಸಿಗಂದೂರು ದೇವಸ್ಥಾನ ನಿರ್ವಹಣೆ ಸಮಿತಿ ಹಿಂಪಡೆಯಿರಿ: ಟ್ರಸ್ಟ್ ಧರ್ಮದರ್ಶಿ ರಾಮಪ್ಪ ಎಚ್ಚರಿಕೆ

ನೆನ್ನೆ ಸಂಜೆಯಷ್ಟೆ ನೂತನ ಸಮಿತಿ ಸಭೆ ನಡೆಸಿದ ಬೆನ್ನಲ್ಲೆ ಈ ಸಮಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಈಡಿಗ ಸಮುದಾಯ ಪ್ರತಿಭಟಿಸ ಬೇಕೆಂದು ರಾಮಪ್ಪ ಬಹಿರಂಗ ಕರೆ ನೀಡಿದ್ದಾರೆ.

- Advertisement -
- Advertisement -

ವಿವಾದಿತ ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚಿಸಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದು ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ರಾಮಪ್ಪ ತಿಳಿಸಿದ್ದಾರೆ.

ನೆನ್ನೆ ಸಂಜೆಯಷ್ಟೆ ನೂತನ ಸಮಿತಿ ಸಭೆ ನಡೆಸಿದ ಬೆನ್ನಲ್ಲೆ ಈ ಸಮಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಈಡಿಗ ಸಮುದಾಯ ಪ್ರತಿಭಟಿಸ ಬೇಕೆಂದು ರಾಮಪ್ಪ ಬಹಿರಂಗ ಕರೆ ನೀಡಿದ್ದಾರೆ.

ಇಂದು ಆರ್ಯ ಈಡಿಗ ಸಮುದಾಯಭವನದಲ್ಲಿ‌ನಡೆದ ದಿನಪತ್ರಿಕೆಯೊಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಯಾವ ಭ್ರಷ್ಟಾಚಾರಗಳು ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ‌ ರಚನೆ ಮಾಡುವ ಮೂಲಕ ಏನೋ ಕಂಟಕ ಮಾಡಲು ಸರ್ಕಾರ ಹೊರಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಮಾಡಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಆರ್ಯ ಈಡಿಗ ಮಠದ ಶ್ರೀರೇಣುಕಾನಂದ ಶ್ರೀಗಳು ಮತ್ತು ಸಮುದಾಯ ಹೋರಾಟ ನಡೆಸಬೇಕು. ಅದಕ್ಕೆ ನಾನು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇನೆ ಎಂದು ಘೋಷಿಸಿದರು.


ಇದನ್ನೂ ಓದಿ: ನೋಂದಣಿಯಾಗದ, ಆಸ್ತಿಯಿಲ್ಲದ RSS ಗೆ ಕಟ್ಟಡ ಕಟ್ಟುತ್ತಿರುವುದೇಕೆ?: ಬಿ.ಕೆ ಹರಿಪ್ರಸಾದ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...