ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ರೈಲ್ವೇ ಕೂಲಿಗಳ ವಿಶ್ರಾಂತಿ ಕೊಠಡಿಯಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ, ಇದು ಸರಿಯಲ್ಲ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಕೋಣೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಸೋಮವಾರ ವರದಿಯಾಗಿದೆ.
ಮಧುಗಿರಿ ಮೋದಿ ಮತ್ತು ಪುನೀತ್ ಕೆರೆಹಳ್ಳಿ ಎಂಬ ಹಿಂದುತ್ವ ಕಾರ್ಯಕರ್ತರು ರೈಲ್ವೆ ಕೂಲಿಗಳ ಕೋಣೆಗೆ ನುಗ್ಗಿ ಗಲಾಟೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ರೀತಿಯಾಗಿ ಅನಧಿಕೃತವಾಗಿ ಕೋಣೆಗೆ ನುಗ್ಗಿ ಗದ್ದಲವೆಬ್ಬಿಸಿ ಸೌಹಾರ್ಧತೆ ಕೆಡಿಸುತ್ತಿರುವ ಈ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸೈಯ್ಯದ್ ಜಾವೇದ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಸರ್ವ ಧರ್ಮೀಯರಿಗೂ ಪ್ರಾರ್ಥನೆಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಹಲವಾರು ಹಿಂದೂ ದೇವಾಲಯಗಳು ಮತ್ತು ಚರ್ಚ್ ಸಹ ನಿಲ್ದಾಣದಲ್ಲಿದೆ. ಈ ವಿಚಾರವನ್ನು ಸ್ವತಃ ರೈಲ್ವೇ ಅಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಕಳೆದ 35 ವರ್ಷಗಳಿಂದ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಹಿಂದುತ್ವವಾದಿ ಶಕ್ತಿಗಳು ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುವ ನಿಟ್ಟಿನಲ್ಲಿ ನಮಾಝ್ ಗೆ ಮೀಸಲಿರಿಸಿದ್ದ ಕೋಣೆಗೆ ದಾಳಿ ನಡೆಸಿ ಗೂಂಡಾಗಿರಿ ನಡೆಸಿದ್ದಾರೆ. ರಾಜ್ಯದಲ್ಲಿ ಹಿಂದು-ಮುಸ್ಲಿಮರ ನಡುವೆ ಒಡಕುಂಟು ಮಾಡಲು ಸಂಘಪರಿವಾರದ ಮತಾಂಧ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿವೆ. ಇದೀಗ ರೈಲ್ವೇ ನಿಲ್ದಾಣದಲ್ಲಿ ನಡೆದಿರುವ ಘಟನೆಯೂ ಸಂಘಪರಿವಾರದ ಹೀನ ಮನೋಸ್ಥಿತಿಯ ಭಾಗವಾಗಿದೆ. ಸಂಘಪರಿವಾರದ ದುಷ್ಕೃತ್ಯಗಳ ವಿರುದ್ಧ ಆಡಳಿತ ವ್ಯವಸ್ಥೆಯ ಮೃದು ಧೋರಣೆಯೂ ಇಂತಹ ಘಟನೆಗಳಿಗೆ ನೇರ ಕಾರಣವಾಗಿದೆ. ನಮಾಝ್ ಕೊಠಡಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಗೂಂಡಾಗಳ ವಿರುದ್ಧ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರೈಲು ನಿಲ್ದಾಣದಲ್ಲಿ ಮಸೀದಿ ನಿರ್ಮಾಣವಾಗುತ್ತಿದೆ ಎಂದು ಕೆಲವರು ಸುಳ್ಳು ಹಬ್ಬಿಸುತ್ತಿದ್ದಾರೆ, ಅದು ಸಂಪೂರ್ಣ ಸುಳ್ಳು. ಇಲ್ಲಿ ಎಲ್ಲಾ ಧರ್ಮದ ಹಮಾಲಿ ಕೂಲಿಗಳು ಇದ್ದು ಅವರಿಗೆ ಕೆಲವು ಕೊಠಡಿಗಳನ್ನು ನೀಡಿದ್ದೇವೆ. ಅಲ್ಲಿ ಎಲ್ಲಾ ಧರ್ಮದ ಪೂಜೆಗೆ, ಪ್ರಾರ್ಥನೆಗೆ ಅವಕಾಶ ನೀಡಿದ್ದೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಫ್ಲಾಟ್‌ಫಾರಂ ನಂಬರ್ 07 ರಲ್ಲಿ ಹಿಂದೂ ದೇವಾಲಯವಿದ್ದು ಅಲ್ಲಿ ಪೂಜೆಗಳು ನಡೆಯುತ್ತಿವೆ. ಹಾಗಾಗಿ ಇಲ್ಲಿ ಒಂದು ಧರ್ಮದ ಆಚರಣೆ ಮಾತ್ರ ನಡೆಯುತ್ತಿದೆ ಎಂಬುದು ಸುಳ್ಳು ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹಿಂದೂಜನಜಾಗೃತಿ ಸಮಿತಿಯ ಗೂಂಡಾಗಳು ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿರುವುದು ಸರ್ಕಾರ ಸತ್ತು ಹೋಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಬೆಂಗಳೂರು ಪೊಲೀಸರು
ಕೂಡಲೇ ಗೂಂಡಾಗಳನ್ನು ಬಂಧಿಸಿ. ಮುಖ್ಯಮಂತ್ರಿಗಳೆ, ಪದೇ ಪದೇ ನಡೆಯುತ್ತಿರುವ ಇಂತಹ ಗೂಂಡಾಗಿರಿಯನ್ನು ತಡೆಯಲಾಗದ ನಿಮ್ಮ ಆಡಳಿತಕ್ಕೆ ಧಿಕ್ಕಾರ ಎಂದು ದಲಿತ ಮುಖಂಡರಾದ ಬಿ.ಆರ್ ಭಾಸ್ಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ #ಹಿಂದೂಜನಜಾಗೃತಿ ಸಮಿತಿಯ ಗೂಂಡಾಗಳು ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ ದಾಂದಲೆ ಮಾಡಿರುವುದು ಸರ್ಕಾರ ಸತ್ತು ಹೋಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. @BlrCityPolice ಕೂಡಲೇ ಗೂಂಡಾಗಳನ್ನು ಬಂಧಿಸಿ.@BSBommai ಪದೇ ಪದೇ ನಡೆಯುತ್ತಿರುವ ಇಂತಹ ಗೂಂಡಾಗಿರಿಯನ್ನು ತಡೆಯಲಾಗದ ನಿಮ್ಮ ಆಡಳಿತಕ್ಕೆ ದಿಕ್ಕಾರ.
— B R Bhaskar Prasad (@BRBhaskarPrasa1) January 31, 2022
ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮೂರು ಹಿಂದೂ ದೇವಾಲಯಗಳಿವೆ. ಅಲ್ಲಿ ಹಿಂದಿನಿಂದಲೂ ಪೂಜೆ ನಡೆದುಕೊಂಡು ಬಂದಿದೆ. ಚರ್ಚ್ ಇದ್ದು ಅಲ್ಲಿಯೂ ಪ್ರಾರ್ಥನೆ ನಡೆಯುತ್ತಿದೆ. ಅದೇ ರೀತಿ ಕೂಲಿಗಳು ತಮ್ಮ ವಿಶ್ರಾಂತಿ ಕೊಠಡಿಯಲ್ಲಿ ನಮಾಜ್ ಮಾಡಿದರೆ ತಪ್ಪೇನು? ಇದರಲ್ಲಿ ತಪ್ಪು ಹುಡುಕುವುದು ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ಶಾಸಕ ಪೂಂಜಾ ಆಪ್ತ ಮರಗಳ್ಳರ ಮೇಲೆ ಕ್ರಮಕೈಗೊಂಡ ಮಹಿಳಾ ಅರಣ್ಯಾಧಿಕಾರಿ ವರ್ಗಾವಣೆಗೆ ತಡೆ?



These beggars dosent have any better job to do. Spoiling and destroying people peace and creating voilence in the name of religion.police and the government should book and punish them severely.
ರೈಲ್ ನಿಲ್ದಾಣದಲ್ಲಿ ಮಸೀದಿ ಹೇಗೆ ಸಾಧ್ಯ? ಮುಂದೆ ಪೂರ್ತಿ ನಿಲ್ದಾಣ ಮಸೀದಿ ವ್ಯಾಪ್ತಿಗೆ ಬರುತ್ತೆ ಅಂತ ಪಿಸ್ ಫುಲ್ ಗಳು ಕೋರ್ಟಿಗೆ ಹೋದರು ಹೋಗಬಹುದು.ಸರ್ಕಾರ ಎಚ್ಚೆತ್ತು ಮಂದಿರ ಮಸೀದಿ ಚರ್ಚ್ ಎಲ್ಲ ಕಿತ್ತು ಹಾಕಿ ಭಾರತದ ಸಂವಿಧಾನ ಕಾಪಾಡಬೇಕು.