Homeಮುಖಪುಟರೋಹಿಂಗ್ಯಾ ನಿರಾಶ್ರಿತರ ವಲಸೆಯಿಂದ ಸ್ಥಳೀಯರ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ: ಪವನ್ ಕಲ್ಯಾಣ್

ರೋಹಿಂಗ್ಯಾ ನಿರಾಶ್ರಿತರ ವಲಸೆಯಿಂದ ಸ್ಥಳೀಯರ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ: ಪವನ್ ಕಲ್ಯಾಣ್

- Advertisement -
- Advertisement -

ರೋಹಿಂಗ್ಯಾ ನಿರಾಶ್ರಿತರ ವಲಸೆಯಿಂದ ಸ್ಥಳೀಯ ಯುವಕರಿಗೆ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ, ಆಂತರಿಕ ಭದ್ರತಾ ಸವಾಲನ್ನು ಸೃಷ್ಟಿಸುತ್ತಿದೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.  ‘ವ್ಯವಸ್ಥೆಯೊಳಗಿನ ಕೆಲವರು ವಲಸಿಗರಿಗೆ ಶಾಶ್ವತ ನೆಲೆ ಕಲ್ಪಿಸುತ್ತಿದ್ದಾರೆ, ಪೊಲೀಸರು ಗಡಿ ಭದ್ರತಾ ಪಡೆಗಳಿಗಿಂತ ಹೆಚ್ಚು ಜಾಗರೂಕರಾಗಿರಬೇಕು’ ಎಂದು ಜನ ಸೇನಾ ಪಕ್ಷದ ನಾಯಕ ಹೇಳಿದರು.

ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ದಕ್ಷಿಣ ರಾಜ್ಯಗಳು ಭಯೋತ್ಪಾದಕರಿಗೆ ‘ಸಾಪ್ಟ್‌ ಟಾರ್ಗೆಟ್‌’ ಎಂದು ಆರೋಪಿಸಿದರು. ಕರಾವಳಿಯಲ್ಲಿ ಕಣ್ಗಾವಲು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಜ್ಯ ಪೊಲೀಸರು ಮತ್ತು ಆಡಳಿತ ಸಿಬ್ಬಂದಿಗೆ ಪತ್ರ ಬರೆದು ಜಾಗರೂಕರಾಗಿರಲು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕುರುಹುಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಪೊಲೀಸರು ಹೆಚ್ಚು ಜಾಗರೂಕರಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾನು ಡಿಜಿಪಿಗೆ ಪತ್ರದ ಮೂಲಕ ವಿನಂತಿಸಿದ್ದೇನೆ. ಆಡಳಿತದೊಂದಿಗೆ ಸಮನ್ವಯ ಸಾಧಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಅವರಿಗೆ ಸೂಚನೆ ನೀಡಿದ್ದೇನೆ. ವಲಸಿಗರ ಸರಿಯಾದ ಕಣ್ಗಾವಲು ಸಂಭಾವ್ಯ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕರಾವಳಿ ಪ್ರದೇಶಗಳಲ್ಲಿ ನಿರಂತರ ಮೇಲ್ವಿಚಾರಣೆ ಮತ್ತು ಕಣ್ಗಾವಲು ಹೆಚ್ಚಿಸುವ ಅವಶ್ಯಕತೆಯಿದೆ. ಹಿಂದೆ, ಕಾಕಿನಾಡದಲ್ಲಿ ದೋಣಿ ಮೂಲಕ ಹೊರಗಿನವರು ಆಗಮಿಸುತ್ತಿರುವ ವರದಿಗಳು ಬಂದಿವೆ” ಎಂದು ಅವರು ಹೇಳಿದರು.

ತೆಲಂಗಾಣ ಮತ್ತು ಆಂಧ್ರಪ್ರದೇಶ ಪೊಲೀಸರು ಇತ್ತೀಚೆಗೆ ನಡೆಸಿದ ಜಂಟಿ ಕಾರ್ಯಾಚರಣೆಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕುರುಹುಗಳು ಪತ್ತೆಯಾಗಿವೆ ಎಂದು ಉಪಮುಖ್ಯಮಂತ್ರಿ ಹೇಳಿದರು.

2017-18ರ ಸುಮಾರಿಗೆ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾಗಳು ಚಿನ್ನದ ಕೆಲಸಗಾರರಾಗಿ ಕೆಲಸ ಮಾಡಲು ಆಂಧ್ರಪ್ರದೇಶಕ್ಕೆ ಬಂದಿದ್ದರು ಎಂದು ಪವನ್ ಕಲ್ಯಾಣ್ ಹೇಳಿದರು. “ಮ್ಯಾನ್ಮಾರ್‌ನಿಂದ ಬಂದ ರೋಹಿಂಗ್ಯಾಗಳು ಸ್ಥಳೀಯ ಯುವಕರು ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಒಂದು ಪ್ರಮುಖ ಬೇಡಿಕೆಯೆಂದರೆ ಸ್ಥಳೀಯರಿಗೆ ಉದ್ಯೋಗಗಳಿಗೆ ಆದ್ಯತೆ ನೀಡುವುದು, ಇದು ತೆಲಂಗಾಣ ರಚನೆಯ ಸಮಯದಲ್ಲಿ ಪ್ರಮುಖ ಘೋಷಣೆಯಾಗಿತ್ತು” ಎಂದರು.

ರೋಹಿಂಗ್ಯಾಗಳು ಗಡಿಗಳನ್ನು ದಾಟಿ ಶಾಶ್ವತವಾಗಿ ನೆಲೆಸಲು ಅನುವು ಮಾಡಿಕೊಡುವ ಪಡಿತರ ಚೀಟಿಗಳು, ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

“ರೋಹಿಂಗ್ಯಾಗಳು ಶಾಶ್ವತ ನಿವಾಸವನ್ನು ಸ್ಥಾಪಿಸಲು ಅನುವು ಮಾಡಿಕೊಡುವಲ್ಲಿ ವ್ಯವಸ್ಥೆಯ ನಿರ್ಲಕ್ಷ್ಯವು ಸ್ಪಷ್ಟವಾಗಿದೆ. ಅವರು ಆಧಾರ್, ಓಟರ್ ಐಡಿ ಮತ್ತು ಪಡಿತರ ಚೀಟಿಗಳನ್ನು ಹೇಗೆ ಪಡೆಯುತ್ತಿದ್ದಾರೆ. ಇದಕ್ಕೆ ಯಾರು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ವ್ಯವಸ್ಥೆಯೊಳಗಿನ ಕೆಲವು ವ್ಯಕ್ತಿಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ಹೇಳಿದರು.

ರೋಹಿಂಗ್ಯಾಗಳು ಹೇಗೆ ನಾಗರಿಕರಾಗುತ್ತಿದ್ದಾರೆ? ಸ್ಥಳೀಯರಿಗೆ ಉದ್ದೇಶಿಸಲಾದ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು. “ಜವಾಬ್ದಾರಿಯುತ ರಾಜಕೀಯ ಪಕ್ಷದ ನಾಯಕನಾಗಿ, ರೋಹಿಂಗ್ಯಾ ವಸಾಹತು ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ವ್ಯವಸ್ಥೆಯನ್ನು ನಿಕಟವಾಗಿ ಗಮನಿಸುವಂತೆ, ಆಂತರಿಕ ಭದ್ರತೆಗಾಗಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿ ನಾನು ಪತ್ರ ಬರೆದಿದ್ದೇನೆ” ಎಂದು ಅವರು ಹೇಳಿದರು.

ದಲಿತ ಮಹಿಳೆಯ ಮೇಲೆ ಕಳ್ಳತನದ ಸುಳ್ಳು ಆರೋಪ, ಠಾಣೆಯಲ್ಲಿ ಚಿತ್ರಹಿಂಸೆ: ಮಾಲೀಕರ ಮನೆಯಲ್ಲಿಯೇ ಸಿಕ್ಕ 2.5 ಪೌಂಡ್ ಚಿನ್ನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -