HomeಮುಖಪುಟRSS ತಾಲಿಬಾನ್‌ನಂತೆ ಆಡಳಿತ ನಡೆಸಲು ಬಯಸುತ್ತದೆ: ನಟ ಚೇತನ್

RSS ತಾಲಿಬಾನ್‌ನಂತೆ ಆಡಳಿತ ನಡೆಸಲು ಬಯಸುತ್ತದೆ: ನಟ ಚೇತನ್

ಇತ್ತೀಚೆಗೆ "ಭಾರತ ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದ ನಟರು ಆಫ್ಘಾನಿಸ್ತಾನಕ್ಕೆ ಹೋಗಲಿ" ಎಂಬ ಹಿರಿಯ ನಟ ಅನಂತ್‌ನಾಗ್‌ರವರ ಹೇಳಿಕೆಯನ್ನು ಚೇತನ್ ಖಂಡಿಸಿದ್ದರು.

- Advertisement -
- Advertisement -

RSS ಯಾವಾಗಲೂ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದಂತೆ ಭಾರತದಲ್ಲಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಅದು ‘ವಿಫಲವಾಗಿದೆ’ ಎಂದು ಖ್ಯಾತ ಚಿತ್ರನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “1946ರಲ್ಲಿ ಪ್ರಜಾಪ್ರಭುತ್ವವನ್ನು ವಿರೋಧಿಸಿದ್ದ ಆರ್‌ಎಸ್‌ಎಸ್ ಸರ್ವಾಧಿಕಾರವು ‘ಭಾರತಕ್ಕೆ ಸೂಕ್ತವಾದ ಸರ್ಕಾರ’ ಎಂದು ಹೇಳಿತ್ತು. 1949 ರಲ್ಲಿ ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸುತ್ತದೆ ಮತ್ತು ಶೂದ್ರರು ಮತ್ತು ಮಹಿಳೆಯರನ್ನು ಅಮಾನವೀಯಗೊಳಿಸುವ ಮನುಸ್ಮೃತಿಯನ್ನು ಹೇರಲು ಒತ್ತಾಯಿಸಿತ್ತು” ಎಂದಿದ್ದಾರೆ.

ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಬಿಂಬಿಸುವುದೇ ಆರ್‌ಎಸ್‌ಎಸ್‌ನ ಆಧಾರವಾಗಿದೆ ಎಂದಿರುವ ಅವರು RSS ಯಾವಾಗಲೂ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದಂತೆ ಭಾರತದಲ್ಲಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಅದು ‘ವಿಫಲವಾಗಿದೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ “ಭಾರತ ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದ ನಟರು ಆಫ್ಘಾನಿಸ್ತಾನಕ್ಕೆ ಹೋಗಲಿ” ಎಂಬ ಹಿರಿಯ ನಟ ಅನಂತ್‌ನಾಗ್‌ರವರ ಹೇಳಿಕೆಯನ್ನು ಚೇತನ್ ಖಂಡಿಸಿದ್ದರು. ಅನಂತ್‌ನಾಗ್‌ರವರ ಇತಿಹಾಸ ಮತ್ತು ಭೌಗೋಳಿಕತೆ ಕುರಿತು ಆಲೋಚನೆಗಳಲ್ಲಿ ಸೀಮಿತ, ಹಿಂಜರಿತ ಮತ್ತು ಪಂಥೀಯತೆಯಿದೆ. ಸಹಿಷ್ಣುತೆಯು ಕ್ರೂರತೆಯನ್ನು ವಿಮರ್ಶಿಸುವುದು ವಿಪರ್ಯಾಸ ಎಂದು ತಿರುಗೇಟು ನೀಡಿದ್ದರು.


ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...