ಅಮೆರಿಕನ್ ಡಾಲರ್ ಮುಂದೆ ಭಾರತದ ರುಪಾಯಿಯ ಮೌಲ್ಯವು ಸಾರ್ವಕಾಲಿಕ ಕುಸಿತ ದಾಖಲಾಗಿದ್ದು, ಡಾಲರ್ ಮುಂದೆ ರುಪಾಯಿ ಮೌಲ್ಯ 77.42 ಕ್ಕೆ ಇಳಿದಿದೆ. ದೇಶಗಳ ನಡುವೆ ಸೋಮವಾರ ನಡೆದ ವಹಿವಾಟಿನ ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 77.17 ಇತ್ತು, ಆದರೆ ನಂತರ ರುಪಾಯಿಯ ಮೌಲ್ಯ 52 ಪೈಸೆ ನಷ್ಟವಾಗುವುದರೊಂದಿಗೆ 77.42 ರೂಗೆ ಇಳಿದಿದೆ.
ಕಳೆದ ಮಾರ್ಚ್‌ನಲ್ಲಿ ರುಪಾಯಿ ಮೌಲ್ಯ 76.98 ಇಳಿಯುವುದರೊಂದಿಗೆ ಸಾರ್ವಕಾಲಿಕ ಕನಿಷ್ಠ ಮೌಲ್ಯ ದಾಖಲಾಗಿತ್ತು. ಅದರ ನಂತರ ಕಳೆದ ಶುಕ್ರವಾರ ಅಮೆರಿಕದ ಕರೆನ್ಸಿ ಎದುರು 55 ಪೈಸೆ ಕುಸಿದು ರುಪಾಯಿ ಮೌಲ್ಯ 76.90ಕ್ಕೆ ಇಳಿದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಪಾಯಕಾರಿ ಆಸ್ತಿಗಳ ಬೇಡಿಕೆ ಮತ್ತು ವಿದೇಶಿ ಹೂಡಿಕೆದಾರರು ದೇಶೀಯ ಷೇರುಗಳನ್ನು ಕೈಬಿಡುತ್ತಿರುವುದು ರೂಪಾಯಿ ಮೌಲ್ಯದ ಕುಸಿತದ ಹಿಂದಿನ ಕಾರಣ ಎಂದು ‘ಮಿಂಟ್’ ವರದಿ ಮಾಡಿದೆ. ಚೀನಾದ ಶಾಂಘೈನಲ್ಲಿ ಹೇರಲಾಗಿರುವ ಕೊರೊನಾ ಲಾಕ್‌ಡೌನ್‌ನಿಂದಾಗಿ ಏಷ್ಯಾದ ಷೇರುಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ, ಇದು ಕೂಡಾ ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಅಡ್ಡಿಪಡಿಸಲಿದೆ.
ಇದನ್ನೂ ಓದಿ: ಕೊರೊನಾ ನಡುವೆಯು ಸೈನ್ಯದ ಮೇಲೆ 7,660 ಕೋಟಿ ಡಾಲರ್ ಖರ್ಚು ಮಾಡಿದ ಭಾರತ; ವಿಶ್ವದಲ್ಲೆ 3ನೇ ಸ್ಥಾನ!
“ದೃಢವಾದ ಡಾಲರ್ ಮತ್ತು ನಿರಾಶಾವಾದಿ ಜಾಗತಿಕ ಮಾರುಕಟ್ಟೆಗಳ ನಡುವೆ ರೂಪಾಯಿ ಇಂದು ಕುಸಿಯುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಹಣದುಬ್ಬರ, ಜಗತ್ತಿನ ಪ್ರಮುಖ ರಾಷ್ಟ್ರಗಳಾದ್ಯಂತ ವಿತ್ತೀಯ ನೀತಿ ಬಿಗಿಗೊಳಿಸುವಿಕೆ, ಆರ್ಥಿಕ ಮಂದಗತಿ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ಹೂಡಿಕೆದಾರರು ಚಿಂತಿತರಾಗಿರುವ ಕಾರಣ ಮಾರುಕಟ್ಟೆ ಘಾಸಿಗೊಂಡವು. ಇದಲ್ಲದೆ, ಏರುತ್ತಿರುವ ಕಚ್ಚಾ ತೈಲ ಬೆಲೆಗಳು ಭಾರತದ ವ್ಯಾಪಾರ ಮತ್ತು ಚಾಲ್ತಿ ಖಾತೆಗೆ ಹಾನಿಯುಂಟುಮಾಡುತ್ತದೆ ಎಂದು ಹೂಡಿಕೆದಾರರು ಭಾವಿಸುತ್ತಾರೆ” ಎಂದು ಬ್ರೋಕರೇಜ್ ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.



ಅರ್ಥಶಾಸ್ತ್ರ ಗೊತ್ತಿಲ್ಲದವರಿಗೆ ಅಧಿಕಾರ ಕೊಟ್ಟರೆ ಹೀಗೇ ಆಗುವುದು…..