Homeಅಂತರಾಷ್ಟ್ರೀಯಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯ

ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯ

ಸ್ವಯಂ ಪ್ರಯೋಗಕ್ಕೆ ಒಳಪಟ್ಟಿದ್ದ ಮೊದಲ ತಂಡವನ್ನು ಬುಧವಾರ ಹಾಗೂ ಎರಡನೆಯದನ್ನು ಜುಲೈ 20 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

- Advertisement -
- Advertisement -

ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ರಷ್ಯಾ ಸೆಚೆನೋವ್ ವಿಶ್ವವಿದ್ಯಾನಿಲಯದ ಟ್ರಾಸ್ಸಲೇಷನಲ್ ಮೆಡಿಸಿನ್ ಆಂಡ್ ಬಯೊಟೆಕ್ನಾಲಜಿ ವಿಭಾಗದ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ.

ಸ್ವಯಂ ಪ್ರಯೋಗಕ್ಕೆ ಒಳಪಟ್ಟಿದ್ದ ಮೊದಲ ತಂಡವನ್ನು ಬುಧವಾರ ಹಾಗೂ ಎರಡನೆಯದನ್ನು ಜುಲೈ 20 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಸಂಸ್ಥೆಯು ತಯಾರಿಸಿದ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಜೂನ್ 18 ರಂದು ಪ್ರಾರಂಭಿಸಿತ್ತು ಎಂದು ತಾರಸೋವ್ ಹೇಳಿದ್ದಾರೆ.

ಸೆಚೆನೋವ್ ವಿಶ್ವವಿದ್ಯಾಲಯದ ಅಲೆಕ್ಸಾಂಡರ್ ಲುಕಾಶೆವ್ ಅವರು, ಈ ಹಂತದ ಅಧ್ಯಯನದ ಉದ್ದೇಶವು ಮಾನವನ ಆರೋಗ್ಯಕ್ಕೆ ಲಸಿಕೆಯ ಸುರಕ್ಷತೆಯನ್ನು ಕಂಡುಹಿಡಿಯುವುದಾಗಿತ್ತು. ಇದನ್ನು ಯಶಸ್ವಿಯಾಗಿ ಮಾಡಲಾಗಿದೆ. ಜೊತೆಗೆ ಮತ್ತಷ್ಟು ಲಸಿಕೆ ಅಭಿವೃದ್ಧಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

“ಸೆಚೆನೋವ್ ವಿಶ್ವವಿದ್ಯಾಲಯವು ಶಿಕ್ಷಣ ಸಂಸ್ಥೆಯಾಗಿ ಮಾತ್ರವಲ್ಲದೆ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಿದೆ. ಪೂರ್ವಭಾವಿ ಅಧ್ಯಯನಗಳಿಂದ ಪ್ರಾರಂಭಿಸಿ ಮತ್ತು ಪ್ರೋಟೋಕಾಲ್ ಅಭಿವೃದ್ಧಿ, ಮತ್ತು ಕ್ಲಿನಿಕಲ್ ಪ್ರಯೋಗಗಳು ಪ್ರಸ್ತುತ ನಡೆಯುತ್ತಿವೆ” ಎಂದು ತಾರಾಸೊವ್ ಹೇಳಿದ್ದಾರೆ.


ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಪ್ರಗತಿ; ಮನುಷ್ಯರ ಮೇಲೆ ಪ್ರಯೋಗ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...