ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಜಾಮಿಯ ಮಸೀದಿಗೆ ಸುಣ್ಣ ಬಳಿಯುವುದಕ್ಕೆ ಸಂಬಂಧಿಸಿದ ಪ್ರಕರಣವನ್ನು ಆಲಿಸಿದ ಅಲಹಾಬಾದ್ ಹೈಕೋರ್ಟ್, ಮಸೀದಿಯ ಹೊರ ಗೋಡೆಗಳಿಗೆ ಸುಣ್ಣ ಬಳಿಯುವುದರಿಂದ ಎಂತಹ ಪೂರ್ವಾಗ್ರಹ ಉಂಟಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಹೇಳಿಕೆಗಳನ್ನು ನೀಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಪರ ಹಾಜರಿದ್ದ ವಕೀಲರಿಗೆ ಸೋಮವಾರ ನಿರ್ದೇಶನ ನೀಡಿದೆ. ಸಂಭಾಲ್ ಮಸೀದಿಯ
ಮಸೀದಿಯ ಹೊರಭಾಗಕ್ಕೆ ಸುಣ್ಣ ಬಳಿಯಲು ಮತ್ತು ದೀಪ ಹಚ್ಚಲು ಮಾತ್ರ ಅನುಮತಿ ಕೋರಲಾಗಿದೆ ಎಂದು ಮಸೀದಿ ಸಮಿತಿ ಎತ್ತಿದ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಈ ನಿರ್ದೇಶನ ನೀಡಿದ್ದು, ಇದಕ್ಕೆ ಎಎಸ್‌ಐನಿಂದ ಯಾವುದೇ ನಿರ್ದಿಷ್ಟ ಉತ್ತರ ಬಂದಿಲ್ಲ. ಎಎಸ್‌ಐ ಮಸೀದಿಯ ಒಳಭಾಗದ ಬಗ್ಗೆ ಮಾತ್ರ ಮಾತನಾಡುತ್ತಿದೆ ಎಂದು ಸಮಿತಿಯ ವಕೀಲ ಎಸ್.ಎಫ್.ಎ. ನಖ್ವಿ ವಾದಿಸಿದ್ದಾರೆ.
ಮಾರ್ಚ್ 12ಕ್ಕೆ ಪ್ರಕರಣವನ್ನು ಮುಂದೂಡಿದ ನ್ಯಾಯಮೂರ್ತಿ ಅಗರ್ವಾಲ್, ಮಸೀದಿಯನ್ನು ಎಎಸ್‌ಐಗೆ ಹಸ್ತಾಂತರಿಸಲು 1927 ರಲ್ಲಿ ಆಡಳಿತ ಮತ್ತು ಮಸೀದಿ ಸಮಿತಿಯ ನಡುವೆ ಮಾಡಿಕೊಂಡ ಮೂಲ ಒಪ್ಪಂದವನ್ನು ಹಾಜರುಪಡಿಸುವಂತೆ ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಿದ್ದಾರೆ. ಸಂಭಾಲ್ ಮಸೀದಿಯ
ಫೆಬ್ರವರಿ 28 ರಂದು, ಮಸೀದಿಯ ಒಳಭಾಗವನ್ನು ಸೆರಾಮಿಕ್ ಬಣ್ಣದಿಂದ ಚಿತ್ರಿಸಲಾಗಿದ್ದು, ಪ್ರಸ್ತುತ ಅದಕ್ಕೆ ಸುಣ್ಣ ಬಳಿಯುವ ಅಗತ್ಯವಿಲ್ಲ ಎಂದು ಎಎಸ್‌ಐ ವರದಿಯನ್ನು ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಸೀದಿಯ ಹೊರ ಗೋಡೆಗಳ ಸುಣ್ಣ ಬಳಿಯುವುದು ಮತ್ತು ಲೈಟ್ ಹಾಕುವುದನ್ನು ಮಾತ್ರ ತಾವು ಬಯಸಿದ್ದಾಗಿ ಮಸೀದಿ ಪರ ವಕೀಲ ನಖ್ವಿ ವಾದಿಸಿದ್ದರು.
ನಂತರ ನ್ಯಾಯಾಲಯವು ಮಸೀದಿ ಆವರಣದಲ್ಲಿರುವ ಧೂಳು ಮತ್ತು ಮಿತಿಮೀರಿ ಬೆಳೆದ ಹುಲ್ಲನ್ನು ತೆರವುಗೊಳಿಸಲು ಎಎಸ್‌ಐಗೆ ಕೇಳಿಕೊಂಡಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಸತ್ ಕಲಾಪ | ಲೋಕಸಭೆಯಲ್ಲಿ ಡಿಎಂಕೆ ಪ್ರತಿಭಟನೆ, ರಾಜ್ಯಸಭೆಯಿಂದ ಹೊರನಡೆದ ಪ್ರತಿಪಕ್ಷ ಸದಸ್ಯರು
ಸಂಸತ್ ಕಲಾಪ | ಲೋಕಸಭೆಯಲ್ಲಿ ಡಿಎಂಕೆ ಪ್ರತಿಭಟನೆ, ರಾಜ್ಯಸಭೆಯಿಂದ ಹೊರನಡೆದ ಪ್ರತಿಪಕ್ಷ ಸದಸ್ಯರು

