ಹೊಸದಿಲ್ಲಿ: ಸಂಭಾಲ್ ಶಾಹಿ ಜಾಮಾ ಮಸೀದಿಯ ಹತ್ತಿರದ ಬಾವಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ ಯಥಾಸ್ಥಿತಿಗೆ ಆದೇಶಿಸಿದೆ.
ಸಂಭಾಲ್‌ನ ಜಾಮಾ ಮಸೀದಿ ನಿರ್ವಹಣಾ ಸಮಿತಿಯ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿ, ಮಸೀದಿಯ ಪ್ರವೇಶದ್ವಾರದ ಬಳಿ ಇರುವ ಖಾಸಗಿ ಬಾವಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಬಾವಿ ಕುರಿತು ಮಸೀದಿ ಸಮಿತಿಯ ಅನುಮತಿಯಿಲ್ಲದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿತು ಮತ್ತು ಎರಡು ವಾರಗಳಲ್ಲಿ ಸ್ಥಿತಿ ಕುರಿತು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.
ಮಸೀದಿಯ ಸಮೀಕ್ಷೆಗೆ ವಕೀಲ ಆಯುಕ್ತರನ್ನು ನೇಮಿಸಲು ಅನುಮತಿ ನೀಡಿದ ಸಂಭಾಲ್ ಹಿರಿಯ ವಿಭಾಗ ಸಿವಿಲ್ ನ್ಯಾಯಾಧೀಶರ 2024ರ ನವೆಂಬರ್ 19 ಆದೇಶವನ್ನು ಶಾಹಿ ಜಾಮಾ ಮಸೀದಿಯ ನಿರ್ವಹಣಾ ಸಮಿತಿಯು ಸಲ್ಲಿಸಿದ ಅರ್ಜಿಯು ಪ್ರಶ್ನಿಸಿತು.
ಸಮೀಕ್ಷೆಯು ಹಿಂಸಾಚಾರ ಮತ್ತು ಜೀವಹಾನಿಗೆ ಕಾರಣವಾಯಿತು ಎಂದು ಅದು ವಾದಿಸಲಾಯಿತು ಮತ್ತು ಇದು ಉನ್ನತ ನ್ಯಾಯಾಲಯದ ತುರ್ತು ಹಸ್ತಕ್ಷೇಪಕ್ಕೆ ಕಾರಣವಾಗಿದೆ ಎಂದಿದೆ.
ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೆಫಾ ಅಹ್ಮದಿ, ಬಾವಿಯ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿ, ನಾವು ಅನಾದಿ ಕಾಲದಿಂದಲೂ ಬಾವಿಯಿಂದ ನೀರು ಸೇದುತ್ತಿದ್ದೇವೆ ಎಂದಿದ್ದಾರೆ.
ಆ ಸ್ಥಳವನ್ನು “ಹರಿ ಮಂದಿರ” ಎಂದು ಉಲ್ಲೇಖಿಸುವ ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಯೋಜನೆಯ ಬಗ್ಗೆ ಅಹ್ಮದಿ ಕಳವಳ ವ್ಯಕ್ತಪಡಿಸಿದರು.
ಅಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ದಯವಿಟ್ಟು ಸ್ಥಿತಿ ವರದಿಯನ್ನು ಸಲ್ಲಿಸಿ ಎಂದು ಸಿಜೆಐ ಹೇಳಿದರು.
ಉಮರ್ ಖಾಲಿದ್ ವಿರುದ್ಧ ಯುಎಪಿಎ ಪ್ರಶ್ನಿಸಿದ ಹೈಕೋರ್ಟ್: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಎಐಎಂಐಎಂ


