ದೇವನಹಳ್ಳಿ | ಹೋರಾಟ ನಿರತ ರೈತರ ಬಂಧನ ಖಂಡಿಸಿ ನಾಳೆ ಸಿಎಂ ಮನೆಗೆ ಮುತ್ತಿಗೆ; ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ಬಲವಂತದ ಭೂ ಸ್ವಾಧೀನ ವಿರೋಧಿಸಿ ‘ದೇವನಹಳ್ಳಿ ಚಲೋ’ ಹಮ್ಮಿಕೊಂಡಿದ್ದ ರೈತರು, ಹೋರಾಟಗಾರರ ಬಂಧನ ಖಂಡಿಸಿ ನಾಳೆ (ಜೂ.26, ಗುರುವಾರ) ಸಿಎಂ ಮನೆಗೆ ಮುತ್ತಿಗೆ ಹಾಕಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಅಲ್ಲದೆ, ರೈತರು, ಹೋರಾಟಗಾರರ ಜೊತೆ ಅಮಾನುಷವಾಗಿ ವರ್ತಿಸಿದ ಡಿಎಸ್‌ಪಿ ಸಜೀತ್ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಸಂಯುಕ್ತ ಹೋರಾಟ ಆಗ್ರಹಿಸಿದೆ. ನಮ್ಮನ್ನು ಬಂಧಿಸಿದರೆ ಜಾಮೀನು ಪಡೆಯುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದರು. … Continue reading ದೇವನಹಳ್ಳಿ | ಹೋರಾಟ ನಿರತ ರೈತರ ಬಂಧನ ಖಂಡಿಸಿ ನಾಳೆ ಸಿಎಂ ಮನೆಗೆ ಮುತ್ತಿಗೆ; ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ