ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಮತ್ತು ಕನ್ನಡ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ ಹಲವು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನವೇ ಅವರ ಪ್ರತಿಮೆಗೆ ಅವಮಾನ ಮಾಡಿರುವುದು ಸರಿಯಲ್ಲ. ಬಿಜೆಪಿ ಸರ್ಕಾರವು ಕನ್ನಡಿಗರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ.
ಅನುಮತಿ ಪಡೆದಿದ್ದೇವೆ
ಪೊಲೀಸರು ಅನುಮತಿ ಪಡೆಯದೇ ಪ್ರತಿಮೆ ನಿರ್ಮಾಣ ಮಾಡಿರುವುದು ಕಾನೂನುಬಾಹಿರ ಎಂದು ವಾದಿಸಿದರೆ ಹಲವು ಕನ್ನಡ ಹೋರಾಟಗಾರರು, ಹಿಂದಿನ ಸರ್ಕಾರವಿದ್ದಾಗಲೇ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದೇವೆ ಮತ್ತು ಗ್ರಾಮಪಂಚಾಯ್ತಿಯಿಂದ ಅನುಮತಿ ಪಡೆದಿದ್ದೇವೆ ಎಂದು ವಾದಿಸಿದ್ದಾರೆ.
ದಾಖಲೆ -1
ಕ್ರಾಂತಿವೀರ ಸಂಗೊಳ್ಳಿ ವೃತ್ತ ಹಾಗೂ ಮೂರ್ತಿ ಪ್ರತಿಸ್ಥಾಪನೆ ಮಾಡಿವ ಕುರಿತು ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿರುವುದು.
ಯಾವ ಕಾರಣಕ್ಕಾಗಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದೀರ..??! ನೀವು ಸ್ಪಷ್ಟ ಉತ್ತರ ಕೊಡಿ.!#ReturnBackSangolliRayannaStatuePeeranavaadiಶೇರ್ ಮಾಡಿ pic.twitter.com/lOht9WizMu
— Kurubas.co.in (@KurubasCo) August 16, 2020
ದಾಖಲೆ – 2
ಪೀರಣವಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿ ನಿರ್ಮಿಸಲು ಒಪ್ಪಿಗೆ ಸಿಕ್ಕಿರುವ ಪಂಚಾಯಿತಿ ರೆಕಾರ್ಡ್
ಇನ್ನು ದಾಖಲೆಗಳನ್ನು ಒದಗಿಸುತ್ತೇವೆ. ಯಾವ ಕಾರಣಕ್ಕಾಗಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದೀರ? ನೀವು ಸ್ಪಷ್ಟ ಉತ್ತರ ಕೊಡಿ…!#ReturnBackSangolliRayannaStatuePeeranavaadi pic.twitter.com/nM2y3FgeFk— Kurubas.co.in (@KurubasCo) August 16, 2020
ಈಶ್ವರಪ್ಪ ಎಲ್ಲಿದ್ದಾರೆ?
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡುವು ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದ ಕೆ.ಎಸ್ ಈಶ್ವರಪ್ಪನವರು ಈಗ ಎಲ್ಲಿದ್ದಾರೆ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇತ್ತ ಸಂಗೊಳ್ಳಿ ರಾಯಣ್ಣನವರಿಗೆ ಬಿಜೆಪಿಯವರಿಂದಲೇ ಅವಮಾನವಾಗುತ್ತಿದ್ದು ತಿರುಗಿ ನೋಡದ ಈಶ್ವರಪ್ಪನವರಿಗೆ ರಾಯಣ್ಣರ ಮೇಲೆ ಪ್ರೀತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ರಾಯಣ್ಣನ ಹೆಸರಲ್ಲಿ ಬ್ರಿಗೇಡಗಳನ್ನ ಕಟ್ಟಿಕೊಳ್ಳೊದೇನು, ನಿನ್ನ ಪತ್ರಿಕೆಗಳಲ್ಲಿ ರಾಯಣ್ಣನ ಕುರಿತು ಬರೆದಿದ್ದೇನು! ರಾಯಣ್ಣನನ್ನು ರಾಜಕೀಯಕ್ಕೆ ಬಳಸಿಕೊಳ್ಳೋದು. ಪುತ್ಥಳಿಯನ್ನು ಹಿಂದಿನಿಂದ ತೆಗೆಸೋದು. ಕನ್ನಡಿಗರಿಗೆ ಮಂಕುಬೂದಿ ಎರಚಿದ್ದು ಸಾಕು ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ರಾಯಣ್ಣನ ಹೆಸರಲ್ಲಿ ಬ್ರಿಗೇಡಗಳನ್ನ ಕಟ್ಟಿಕೊಳ್ಳೊದೇನು, ನಿನ್ನ ಪತ್ರಿಕೆಗಳಲ್ಲಿ ರಾಯಣ್ಣನ ಕುರಿತು ಬರೆದಿದ್ದೇನು!
ರಾಯಣ್ಣನನ್ನು ರಾಜಕೀಯಕ್ಕೆ ಬಳಸಿಕೊಳ್ಳೋದು. ಪುತ್ಥಳಿಯನ್ನು ಹಿಂದಿನಿಂದ ತೆಗೆಸೋದು. ಕನ್ನಡಿಗರಿಗೆ ಮಂಕುಬೂದಿ ಎರಚಿದ್ದು ಸಾಕು. #ReturnBackSangolliRayannaStatuePeeranavaadi
— Shruthi H M । ಶ್ರುತಿ ಎಚ್ ಎಮ್ (@shruthihm1) August 16, 2020
ಸಂಗೊಳ್ಳಿ ರಾಯಣ್ಣ ಬೇಡ: ಸಾವರ್ಕರ್ ಬೇಕು – ಇದು ಬಿಜೆಪಿ ನೀತಿ
ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕನ್ನಡಿಗರ ಹೆಮ್ಮಯ ರಾಯಣ್ಣನ ಪ್ರತಿಮೆ ತೆರವು ಗೊಳಿಸಿದ ಸರ್ಕಾರ. ಬೆಂಗಳೂರಿನಲ್ಲಿ ಮರಾಠಿ ಸಾವರ್ಕರ್ ಪ್ರತಿಮೆ ಉದ್ಘಾಟನೆ ಮಾಡಿದ ಸರ್ಕಾರ. ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರವಿದೆಯೋ ಅಥವಾ ನಾಗಪುರದ ಸರ್ಕಾರವಿದೆಯೋ? ಇದು ರಾಯಣ್ಣನ ಜನ್ಮದಿನದಂದೆ ಕನ್ನಡಿಗರಿಂದ ಕನ್ನಡಿಗ ರಾಯಣ್ಣನಿಗೆ ಮಾಡಿದ ಅವಮಾನ ಎಂದು ಪ್ರತಾಪ್ ಕಣಗಲ್‌ರವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮರಾಠಿ ಸಾವರ್ಕರ್ ಮೇಲ್ಸೇತುವೆ, ಪ್ರತಿಮೆ ಉದ್ಘಾಟಿಸಿದ ಸರ್ಕಾರ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾಡಲು ಹೋದವರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ.
ಸಂಘಿಗಳ ಆಡಳಿತಕ್ಕೆ ಸ್ವಾಗತ.. ಇದೆಲ್ಲಾ ಇನ್ನು ಸ್ಯಾಂಪಲ್ ಅಷ್ಟೇ..
— ನವನೀತ್ ಗೌಡ | Navaneeth Gowda (@NavaneethGowda1) August 15, 2020
ಒಂದೆಡೆ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ #ಸಂಗೊಳ್ಳಿರಾಯಣ್ಣ ರವರ ಪ್ರತಿಮೆ ಅವರ ಹುಟ್ಟೂರಿನಿಂದಲೆ ಎತ್ತಂಗಡಿ.
ಮತ್ತೊಂದೆಡೆ,
ಬ್ರಿಟಿಷರ ಕ್ಷಮಾಪಣೆ ಕೇಳಿದ ಸಾವರ್ಕರ್ ಪ್ರತಿಮೆ ಅನಾವರಣ ಬೆಂಗಳೂರಿನಿಂದ ಒಂದು ಕಡೆ..
ಇದು ಕನ್ನಡಿಗರಿಗೆ @BSYBJP ರವರ ನೇತೃತ್ವದ ಸರ್ಕಾರದ ಸ್ವಾತಂತ್ರ್ಯ ದಿನದ ಕೊಡುಗೆ.? pic.twitter.com/sijDo65I37— Gaddapa (@Gaddapa) August 15, 2020
ಒಂದೆಡೆ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿರಾಯಣ್ಣನವರ ಪ್ರತಿಮೆ ಅವರ ಹುಟ್ಟೂರಿನಿಂದಲೆ ಎತ್ತಂಗಡಿ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಬ್ರಿಟಿಷರ ಕ್ಷಮಾಪಣೆ ಕೇಳಿದ ಸಾವರ್ಕರ್ ಪ್ರತಿಮೆ ಅನಾವರಣ. ಇದು ಕನ್ನಡಿಗರಿಗೆ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಸ್ವಾತಂತ್ರ್ಯ ದಿನದ ಕೊಡುಗೆ ಎಂದು ಗದ್ದಪ್ಪ ಎಂಬುವವರು ವ್ಯಂಗ್ಯವಾಡಿದ್ದಾರೆ.
ಪ್ರತಿಭಟನೆಗೆ ಕರೆ
ಈ ಸರ್ಕಾರಕ್ಕೆ ಮರಾಠಿಗ ಸಾವರ್ಕರ್ ಬೇಕು. ಕೆಚ್ಚೆದೆಯ ಕನ್ನಡಿಗ ಸ್ವಾತಂತ್ರ್ಯ ಸೇನಾನಿ ರಾಯಣ್ಣ ಬೇಕಾಗಿಲ್ಲ….! ನಾಡ ಅಭಿಮಾನಿಗಳೇ ಬನ್ನಿ, ನಾಳೆ ಬೆಳಿಗ್ಗೆ ಮುಖ್ಯಮಂತ್ರಿಗಳಿಗೆ ಬಿಸಿ ಮುಟ್ಟಿಸುವ. ಬೆಳಗ್ಗೆ -11 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣ ಮುಂಭಾಗ ಪ್ರತಿಭಟನೆ ನಡೆಸೋಣ ಎಂದು ಕನ್ನಡ ರಣಧೀರರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್ ಕುಮಾರ್‌ರವರು ಕರೆನೀಡಿದ್ದಾರೆ.
ಬೆಳಗಾವಿಯ ಪೀರನವಾಡಿಯಲ್ಲಿ ಹುತಾತ್ಮ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಲು ಪೊಲೀಸರು ಅವಕಾಶ ನೀಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನ, ಈ ಮೂಲಕ ಸರ್ಕಾರ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೂಡಲೇ ಸರ್ಕಾರ ಎಚ್ಚೆತ್ತು ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಜೆಡಿಎಸ್ ಪಕ್ಷ ಘೋಷಿಸಿದೆ.
ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಕಾನೂನು ಪ್ರಕಾರ ಅನುಮತಿ ಪಡೆದುಕೊಂಡು ರಾಯಣ್ಣನ ಅಭಿಮಾನಿಗಳು ಮೂರ್ತಿ ಸ್ಥಾಪನೆಗೆ ಮುಂದಾಗಬೇಕು. ಇಂತಹ ಸಂದರ್ಭದಲ್ಲಿ ಪೊಲೀಸರು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಸರಘಟ್ಟದಲ್ಲಿ ಚಿತ್ರನಗರಿ ಬೇಡ; ಪರಿಸರವಾದಿಗಳು ಸೇರಿದಂತೆ ಹಲವರಿಂದ ಒತ್ತಾಯ



ಗದ್ದಪ್ಪ ಅಲ್ಲ ಗಡ್ಡಪ್ಪ (ತಿಥಿ ಸಿನೆಮಾ)