- Advertisement -
- Advertisement -
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಎರಡು ವರ್ಷಗಳ ನಂತರ ಹೊಬಾರ್ಟ್ ಇಂಟರ್ನ್ಯಾಷನಲ್ನಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸುವುದರೊಂದಿಗೆ ಟೆನಿಸ್ಗೆ ಮರಳಿದ್ದಾರೆ.
ಉಕ್ರೇನಿಯನ್ ಆಟಗಾರ್ತಿ ನಾಡಿಯಾ ಕಿಚೆನೋಕ್ ಜೊತೆ ಜೋಡಿಯಾಗಿರುವ ಸಾನಿಯಾ ಫೈನಲ್ ಪಂದ್ಯದಲ್ಲಿ ಚೀನಾದ ಪೆಂಗ್ ಶೂಯಿ ಮತ್ತು ಜಾಂಗ್ ಶೂಯಿಯನ್ನು 6-4, 6-4 ಸೆಟ್ಗಳಿಂದ ಸೋಲಿಸಿದರು.
ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಿದ ಶ್ರೇಯಾಂಕ ರಹಿತ ಸಾನಿಯಾ-ಕಿಚೆನೋಕ್ ಜೋಡಿಯು, ಎರಡನೇ ಶ್ರೇಯಾಂಕದ ಚೀನಾದ ಜೋಡಿಗೆ ಸೋಲುಣಿಸಿತು.
33 ವರ್ಷದ ಸಾನಿಯಾ ಮಿರ್ಜಾ 2017ರ ಅಕ್ಟೋಬರ್ನಲ್ಲಿ ತಮ್ಮ ಕೊನೆಯ ಪಂದ್ಯಗಳನ್ನಾಡಿದ್ದರು. ಈಗ ಮತ್ತೆ ತಮ್ಮ ಅಮೋಘ ಆಟಕ್ಕೆ ಮರಳಿರುವುದರಿಂದ ಟೆನಿಸ್ ಪ್ರೇಮಿಗಳನ್ನು ಖುಷಿಗೊಳಿಸಿದ್ದಾರೆ.


