ಉತ್ತರಾಖಂಡ ಮದರಸಾಗಳಲ್ಲಿ ಸಂಸ್ಕೃತ ಕಡ್ಡಾಯ: ವಿದ್ವಾಂಸರ ಅಸಮಾಧಾನ 

ಉತ್ತರಾಖಂಡ ಸರ್ಕಾರವು ರಾಜ್ಯಾದ್ಯಂತ ಮದರಸಾಗಳಲ್ಲಿ ಹೊಸ ಶೈಕ್ಷಣಿಕ ವರ್ಷದಿಂದ ಸಂಸ್ಕೃತವನ್ನು ಪಠ್ಯಕ್ರಮದ ಭಾಗವಾಗಿ ಕಡ್ಡಾಯ ಎಂದು ಪ್ರಕಟಣೆ ಹೊರಡಿಸಿದ್ದು, ಸರಕಾರದ ಈ ನಡೆಗೆ ವಿದ್ವಾಂಸರು ವಿರೋಧಿಸಿದ್ದಾರೆ. ಈ ನಿರ್ಧಾರವು ಧಾರ್ಮಿಕ ಶಿಕ್ಷಣದ ರಚನೆಯಲ್ಲಿ ಬದಲಾವಣೆಯನ್ನು ಸೂಚಿಸುವುದು ಮಾತ್ರವಲ್ಲದೆ, ಮಕ್ಕಳು ಹಿಂದಿ, ಇಂಗ್ಲಿಷ್, ಅರೇಬಿಕ್, ಉರ್ದು ಕಲಿಯುವುದರ ಜೊತೆಗೆ ಈಗ ಸಂಸ್ಕೃತದಂತಹ ಹೆಚ್ಚುವರಿ ಭಾಷೆಯನ್ನು ಕಲಿಯಬೇಕಿದೆ ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕವಾಗಿ ಅರೇಬಿಕ್ ಮತ್ತು ಉರ್ದುವನ್ನು ಕೇಂದ್ರೀಕರಿಸುವ ಉತ್ತರಾಖಂಡದ ಮದರಸಾಗಳು  ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಸಹ ಬೋಧಿಸಬೇಕಿದೆ. … Continue reading ಉತ್ತರಾಖಂಡ ಮದರಸಾಗಳಲ್ಲಿ ಸಂಸ್ಕೃತ ಕಡ್ಡಾಯ: ವಿದ್ವಾಂಸರ ಅಸಮಾಧಾನ