Homeಮುಖಪುಟಕನ್ನಡಿಗರ ಆಕ್ರೋಶಕ್ಕೆ ಮಣಿದು ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಕೈಬಿಟ್ಟ ಸರ್ಕಾರ

ಕನ್ನಡಿಗರ ಆಕ್ರೋಶಕ್ಕೆ ಮಣಿದು ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಕೈಬಿಟ್ಟ ಸರ್ಕಾರ

- Advertisement -

ಬೆಂಗಳೂರಿನ ಯೆಲಹಂಕದ ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಡಲು ಮುಂದಾಗಿದ್ದ ಸರ್ಕಾರ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕೈಬಿಟ್ಟದೆ. ಈ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ನಾಳೆಯೇ ಉದ್ಘಾಟನೆಯಿದ್ದು ಅದರ ಆಮಂತ್ರಣ ಪತ್ರಿಕೆಯಲ್ಲಿ ಕೇವಲ “ಮೇಲ್ಸುತುವೆ ಉದ್ಘಾಟನೆ” ಅಂತಾ ಮುದ್ರಣಗೊಂಡಿದೆ ಹೊರತು ಎಲ್ಲಿಯೂ ವೀರ ಸಾವರ್ಕರ್ ಹೆಸರು ನಮೂದಾಗಿಲ್ಲ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಸಾವರ್ಕರ್‌ ಹೆಸರಿಡಲಾಗುವುದು ಎಂದು ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಕರ್ನಾಟಕದ ಪ್ರಜ್ಞಾವಂತರು, ಕನ್ನಡಪರ ಹೋರಾಟಗಾರರು, ವಿರೋಧ ಪಕ್ಷಗಳು ಸೇರಿದಂತೆ ಸಾವಿರಾರು ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಡಿಗೆ ಮಾಡಿದ ಅಪಮಾನ: ಎಚ್‌ಡಿಕೆ ಆಕ್ರೋಶ 


ಕನ್ನಡನಾಡಿನಲ್ಲಿ ನಾಡು ನುಡಿಗಾಗಿ ಹೋರಾಡಿ ಪ್ರಾಣಕೊಟ್ಟವರ ದೊಡ್ಡ ಪರಂಪರೆಯೇ ಇದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ದ್ರೋಹ ಬಗೆದ ಸಾವರ್ಕರ್‌ ಹೆಸರಿಡುವುದು ತರವಲ್ಲ ಎಂದು ಸಾವಿರಾರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಕೂಡ ಈ ವಿಚಾರವಾಗಿ ದನಿಯೆತ್ತಿ ಯಾವ ಕಾರಣಕ್ಕೂ ಸಾವರ್ಕರ್‌ ಹೆಸರಿಡಬಾರದು ಎಂದು ಆಗ್ರಹಿಸಿದ್ದರು.

ಸರ್ಕಾರದ ಪರವಾಗಿ ಸಚಿವ ಸಿ.ಟಿ ರವಿ ಸಾವರ್ಕರ್‌ ಹೆಸರಿಡುವುದನ್ನು ಸಮರ್ಥಿಸಿಕೊಂಡಿದ್ದರು. ಆದರೆ ಕೊನೆಗೂ ರಾಜ್ಯ ಸರ್ಕಾರ ಮುಂದಾಗುವ ಅಪಾಯಗಳ ಕುರಿತು ಎಚ್ಚೆತ್ತುಕೊಂಡಿದ್ದು ಸಾವರ್ಕರ್‌ ಹೆಸರಿಡುವುದರಿಂದ ಹಿಂದೆ ಸರಿದಿದೆ.


ಇದನ್ನೂ ಓದಿ: ಮೇಲ್ಸೇತುವೆಗೆ ಸಾವರ್ಕರ್‌ ಹೆಸರು : ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. – ಸಿದ್ದು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial