ಮಾಜಿ ಬಿಲಿಯನೇರ್ ಅನಿಲ್ ಅಂಬಾನಿ ನೀಡಿದ ಎರಡು ಗ್ಯಾರಂಟಿಗಳ ಆಧಾರದಲ್ಲಿ 1200 ಕೋಟಿ ರೂಗೂ ಅಧಿಕ ಹಣದ ವಸೂಲಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣದ ಮೊರೆ ಹೋಗಿದೆ.
ತನ್ನ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್‌ಗೆ ಬ್ಯಾಂಕಿನ ಸಾಲದ ಬಗ್ಗೆ ವೈಯಕ್ತಿಕ ಖಾತರಿ ನೀಡಿದ್ದ ಉದ್ಯಮಿ ಅನಿಲ್ ಅಂಬಾನಿಗೆ ಈ ಕುರಿತು ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ತಿಳಿಸಿದೆ.
ಕೆಲವು ತಿಂಗಳು ಹಿಂದೆ ತಾನೇ ಇದೇ ಅನಿಲ್ ಅಂಬಾನಿ ಬಾಕಿ ಹಣ ಪಾವತಿಸಲು ವಿಫಲರಾದ ಕಾರಣಕ್ಕೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದಾಗ ಆತನ ಅಣ್ಣ ಮುಕೇಶ್ ಅಂಬಾನಿ ಆ ಹಣ ಪಾವತಿಸಿ ಜೈಲು ಶಿಕ್ಷೆ ತಪ್ಪಿಸಿದ್ದರು.
“ಈ ವಿಷಯವು ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಪಡೆದ ಕಾರ್ಪೊರೇಟ್ ಸಾಲಕ್ಕೆ ಸಂಬಂಧಿಸಿದೆ ಮತ್ತು ಇದು ಅಂಬಾನಿಯ ವೈಯಕ್ತಿಕ ಸಾಲವಲ್ಲ” ಎಂದು ಅನಿಲ್ ಅಂಬಾನಿ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ – ಕಾಂಗ್ರೆಸ್ ವಾಗ್ದಾಳಿ


