SCSP/TSP ಯೋಜನೆಯಲ್ಲಿ ಸುಮಾರು 3.37 ಲಕ್ಷ ಕೋಟಿಗೂ ಹೆಚ್ಚಿನ ದಲಿತರಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಷ್ಟೊಂದು ಬೃಹತ್ ಮೊತ್ತ ಎಲ್ಲಿ ಹೋಗಿದೆ. ಈ ಹಣವನ್ನು ಬಳಸಿ ದಲಿತರು ಉದ್ಧಾರವಾಗಿರುವಂತದ್ದು ಎಲ್ಲೂ ಕಾಣುತ್ತಿಲ್ಲ. ಈ ಹಣದ ಖರ್ಚಿನಲ್ಲಿ ಯಾವ ಬದಲಾವಣೆ ಆಗಿದೆ ಎಂದು ಚರ್ಚೆ ಮಾಡಲು ಒಂದು ಬಾರಿ ವಿಶೇಷ ಅಧಿವೇಶನ ಮಾಡಿ ಎಂದು ಅದಕ್ಕಾಗಿಯೆ ನಾವು ಕೇಳುತ್ತಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಬುಧವಾರ ಹೇಳಿದರು. SCSP/TPS ನಿಂದ
‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಸಾಮಾಜಿಕ ನ್ಯಾಯ ಮತ್ತು ಬಜೆಟ್ ಧೋರಣೆಗಳು’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. “SCSP/TSP ಯೋಜನೆಯನ್ನು ಬಡತನ ನಿರ್ಮೂಲನೆಗಾಗಿ ಮಾಡಿರುವ ಯೋಜನೆ ಅಲ್ಲ, ಬದಲಾಗಿ ಬಡತನದ ಅಂತರ ಕಡಿಮೆ ಮಾಡಲು ಜಾರಿ ಮಾಡಲಾಗಿದೆ. ಈ ಹಣವನ್ನು ಗ್ಯಾರೆಂಟಿ ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಬಳಸಬಾರದು. ಹಾಗಾಗಿ ಹಣದ ಮೌಲ್ಯಮಾಪನ ಮಾಡಬೇಕಾಗಿದೆ” ಎಂದು ಅವರು ಆಗ್ರಹಿಸಿದರು. SCSP/TPS ನಿಂದ
“6 ತಿಂಗಳ ಒಳಗೆ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ತುಂಬಿಸಬೇಕು ಎಂದು ಬಿಜೆಪಿ ಸರ್ಕಾರ ಇದ್ದಾಗಲೆ ಆದೇಶ ಬಂದಿತ್ತು. ಆದರೂ ಕಾಂಗ್ರೆಸ್ ಸರ್ಕಾರ ಬಂದು 2 ವರ್ಷಗಳಾದರೂ ಆ ಹುದ್ದೆಗಳನ್ನು ತುಂಬಿಲ್ಲ. ಬಿಎಡ್ ಓದುವ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್‌ಗಳು ಇಲ್ಲ. ಇದು ಯಾವ ಸಾಮಾಜಿಕ ನ್ಯಾಯ? ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರಿಸಬೇಕು” ಎಂದು ಅವರು ಹೇಳಿದರು.
“ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆಗಿದ್ದ ಸಮಯದಲ್ಲಿ ಸಂವೇದನಶೀಲರಾಗಿದ್ದರು. ಆದರೆ ಈ ಬಾರಿ ಅವರಿಗೆ ಏನಾಗಿದೆ ಎಂದು ತಿಳಿಯುತ್ತಿಲ್ಲ. ಅವರಿಗೆ ಈಗ ಸಾಮಾಜಿಕ ನ್ಯಾಯ ಈಡೇರಿಸಬೇಕು ಎಂಬ ಮನಸ್ಥಿತಿ ಇಲ್ಲ. ಘೋಷಣೆ ಮಾಡುವುದು ಒಂದು ಮೊತ್ತ, ಹಂಚಿಕೆ ಮಾಡುವುದು ಒಂದು ಮೊತ್ತ, ಆದರೆ ಬಿಡುಗಡೆ ಮಾಡುವುದು ಒಂದು ಮೊತ್ತವಾಗಿದೆ” ಎಂದು ಅವರು ಹೇಳಿದರು. ಇವೆಲ್ಲಕ್ಕೂ ಪರಿಹಾರ ಎಂದರೆ ಎಲ್ಲರೂ ಒಗ್ಗಟ್ಟಾಗಿ ಸಾಂವಿಧಾನಿಕ ಮೌಲ್ಯಗಳನ್ನು ಇಟ್ಟುಕೊಂಡೆ ಮಿಲಿಟೆಂಟ್ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.
ದಲಿತರಿಗೆ ಭೂಮಿ ನೀಡಲ್ಲ ಎಂದು ಸರ್ಕಾರ ನೇರವಾಗಿ ಹೇಳುತ್ತಿದೆ: ದಲಿತ ಹಕ್ಕುಗಳ ಹೋರಾಟಗಾರ ಗೋಪಾಲಕೃಷ್ಣ ಹರಳಹಳ್ಳಿ
ಇದಕ್ಕೂ ಮೊದಲು ಬಗರ್‌ಹುಕುಂ ಭೂಮಿ ವಿಚಾರದ ಬಗ್ಗೆ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹರಳಹಳ್ಳಿ, “ನಮ್ಮ ದೇಶದಲ್ಲಿ ಸ್ವತಂತ್ರ ಬಂದ ನಂತರ ಸರ್ಕಾರಗಳು ಭೂ ಸುಧಾರಣೆ ಜಾರಿಗೆ ತಂದವು. ಆದರೆ ಭೂಮಿ ಜನರಿಗೆ ಸಿಕ್ಕಿಲ್ಲ. ಬಗರ್‌ಹುಕುಂ ಭೂಮಿಯ ಸಮಸ್ಯೆಯು ದಲಿತರು ಮತ್ತು ದಲಿತೇತರ ಬಡವರ ಬಗ್ಗೆ ಈಗಲೂ ಕಾಡುತ್ತಿದೆ. ಈ ವಿಚಾರದ ಬಗ್ಗೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಯಾವುದೆ ಘೋಷಣೆ ಮಾಡಿಲ್ಲ. ಈ ಸರ್ಕಾರ ದಲಿತರಿಗೆ ಭೂಮಿ ನೀಡಲ್ಲ ಎಂಬುವುದು ಇದರ ಅರ್ಥವಾಗಿದ್ದು, ಅಂತಹ ಇಚ್ಛಾಶಕ್ತಿ ತಮಗೆ ಇಲ್ಲ ಎಂದೆ ಸರ್ಕಾರ ಹೇಳುತ್ತಿದೆ” ಎಂದು ಅವರು ಹೇಳಿದರು.

ದಲಿತರಿಗಾಗಿ 2 ಲಕ್ಷ ಕೋಟಿ ರೂ.ಗಳು ಖರ್ಚು ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದರ ಬಗ್ಗೆ ಯಾವುದಾದರು ಅಧ್ಯಯನ ಆಗಿದೆಯೆ? ಎಂದು ಅವರು ಹೇಳಿದರು. “ಜೀತಮುಕ್ತಿ ಕಾಯ್ದೆಯ ಪ್ರಕಾರ ದಲಿತರಿಗೆ ಭೂಮಿ ಕೊಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇವತ್ತಿನವರೆಗೂ ಯಾವುದೆ ಭೂಮಿ ದಲಿತರಿಗೆ ನೀಡಿಲ್ಲ. ಭೂಮಿ ಕೇಳಿದ ದಲಿತರ ಮೇಲೆ ಸರ್ಕಾರ ಕೇಸು ಹಾಕುತ್ತಿದೆ. ದೇವದಾಸಿ ಮಹಿಳೆಯರಿಗೆ ಸರ್ಕಾರ ಬಜೆಟ್‌ನಲ್ಲಿ ಏನಾದರೂ ಘೋಷಣೆ ಮಾಡುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಸರ್ಕಾರ ಇದರ ಬಗ್ಗೆ ಏನೂ ಘೋಷಣೆ ಮಾಡಿಲ್ಲ” ಎಂದು ಹೇಳಿದರು.
“ಜಾತಿ ವ್ಯವಸ್ಥೆಯನ್ನು ಉಳಿಸುವ ಶಕ್ತಿಗಳು ಬಲವಾಗಿದ್ದು, ದಲಿತರಿಗೆ ನ್ಯಾಯ ಸಿಗಬೇಕು ಎಂದರೆ ದಲಿತರೊಂದಿಗೆ ದಲಿತೇತರರು ಕೂಡಾ ಸೇರಿ ಹೋರಾಟ ಮಾಡಬೇಕಿದೆ. ಈ ಸರ್ಕಾರ ಯಾವ ದಲಿತರಿಗೂ ಭೂಮಿ ಮತ್ತು ಸಮಾನತೆಯನ್ನು ನೀಡುವುದಿಲ್ಲ. ಅದಕ್ಕಾಗಿ ಜನಚಳವಳಿಗಳು ಪರ್ಯಾಯ ರಾಜಕೀಯ ಚಳವಳಿ ಕಟ್ಟಬೇಕಿದೆ” ಎಂದು ಗೋಪಾಲಕೃಷ್ಣ ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮುಸ್ಲಿಮರ 2ಬಿ ಮೀಸಲಾತಿ ಬಗ್ಗೆ ಸೊಲ್ಲೆತ್ತುವ ಧೈರ್ಯ ಸಿದ್ದರಾಮಯ್ಯರಿಗೆ ಇಲ್ಲ: ಪತ್ರಕರ್ತ ಬಿ.ಎಂ. ಹನೀಫ್
ಮುಸ್ಲಿಮರ 2ಬಿ ಮೀಸಲಾತಿ ಬಗ್ಗೆ ಸೊಲ್ಲೆತ್ತುವ ಧೈರ್ಯ ಸಿದ್ದರಾಮಯ್ಯರಿಗೆ ಇಲ್ಲ: ಪತ್ರಕರ್ತ ಬಿ.ಎಂ. ಹನೀಫ್

