ಅಪರೂಪದ ಮತ್ತು ಅವಸಾನದ ಅಂಚಿನಲ್ಲಿರುವ ಗಿಡುಗನ ಕೊಕ್ಕನ್ನು ಹೋಲುವ ರಚನೆಯ ಕಡಲಾಮೆಯ ಕಳೇಬರ ಕಾರವಾರದ ಮಾಜಾಳಿ ಕಡಲ ತೀರದಲ್ಲಿ ಕಂಡುಬಂದಿದೆ.
ಸ್ಥಳೀಯವಾಗಿ ಇದನ್ನು ಗಿಡುಗ ಕಡಲಮೆಯೆಂದು ಗುರುತಿಸಲಾಗುತ್ತದೆ. ಜೀವಶಾಸ್ತ್ರದಲ್ಲಿ ಈ ಕಡಲಾಮೆ ಪ್ರಬೇಧವನ್ನು ‘ಹವಾಕ್ಸ್ ಬುಲ್ ಟರ್ಟ್ಲ್’ ಎಂದು ಕರೆಯುತ್ತಾರೆ. ಈ ಕಡಲ ಜೀವಿ ಸಾಗರ ಜೀವ ಶಾಸ್ತ್ರ ವಿಜ್ಞಾನಿಗಳ ಕುತೂಹಲಕರ ಅಧ್ಯನದ ಪ್ರಭೇದವಾಗಿದೆ. ಹವಳಗಳಿರುವ ಸಾಗರ ದ್ವೀಪದಲ್ಲಿ ವಾಸಿಸುವ ಈ ಆಕರ್ಷ ಆಮೆ 50-60 ವರ್ಷ ಬದುಕಬಲ್ಲದೆಂದು ಸಾಗರ ವಿಜ್ಞಾನಿಗಳು ಹೇಳುತ್ತಾರೆ..
ಅಂಡಮಾನ್ ನಿಕೋಬಾರ್ ಮತ್ತು ಲಕ್ಷ ದ್ವೀಪದಲ್ಲಿ ಈ ಆಮೆ ಸಂತತಿ ಹೆಚ್ಚು ಕಂಡು ಬರುತ್ತದೆ. ವನ್ಯ ಜೀವಿ ಕನೂನಿನಂತೆ ಈ ಅಪರೂಪದ ಕಡಲಾಮೆಗಳು ಸಂರಕ್ಷಿತ ಪ್ರಬೇಧವೆಂದು ಘೋಷಿಸಲಾಗಿದೆ. ಕೋಸ್ಟಲ್ ಮರೈನ್ ಮತ್ತು ಇಕೋ ಸಿಸ್ಟಮ್ ವಿಭಾಗದ ಅರಣ್ಯಾಧಿಕಾರಿಗಳು ಗಿಡುಗ ಕಡಲಾಮೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆಯ ನಂತರ ದಫನ್ ಮಾಡಿದರು.
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ನಿಲುವು


